ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ಗ್ರಂಥಾಲಯ ವಿಚಾರ ಸಂಕಿರಣ, ವಾಚನ ಸ್ಪರ್ಧೆಯ ತಾಲೂಕು ಮಟ್ಟದ ವಿಜೇತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು(ಶನಿವಾರ) ಬೆಳಿಗ್ಗೆ 10 ರಿಂದ ಹೊಸಂಗಡಿಯ ಕೆಎಸ್‍ಟಿಎ ಭವನದಲ್ಲಿ ನಡೆಯಲಿದೆ.
ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಡಾ.ಪಿ.ಪ್ರಭಾಕರನ್ ಉದ್ಘಾಟಿಸುವರು. ಪುರೋಗಮನ ಕಲಾ ಸಾಹಿತ್ಯ ಸಂಘದ ಜಿಲ್ಲಾಧ್ಯಕ್ಷ ಸಿ.ಎಂ.ವಿನಯಚಂದ್ರನ್ ಸಾಂಸ್ಕøತಿಕ ರಂಗದ ಪ್ರತಿರೋಧದ ನೆಲೆಗಟ್ಟು ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಯು.ಶಾಮ ಭಟ್, ಕಣ್ಣೂರು ವಿವಿಯ ಸಂಶೋಧನಾ ವಿದ್ಯಾರ್ಥಿ ಸೌಮ್ಯಾಪ್ರಸಾದ್ ಕಿಳಿಂಗಾರ್, ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಶ್ರೀಕುಮಾರಿ ಟೀಚರ್, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಎ.ಬಿ.ರಾಧಾಕೃಷ್ಣ ಬಲ್ಲಾಳ್ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಭಟ್ ಧರ್ಮತ್ತಡ್ಕ, ವನಿತಾ ಆರ್.ಶೆಟ್ಟಿ, ಸುಜಿತ್ ಕುಮಾರ್ ಬೇಕೂರು, ಅಬ್ದುಲ್ಲ ಕೆ.ಪೈವಳಿಕೆ ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸುವರು.

