ಕುಂಬಳೆ: ಕುಂಟಂಗೇರಡ್ಕ ಪ.ವರ್ಗ ಕಾಲನಿಯಲ್ಲಿ ಜಿಲ್ಲಾ ಮೊಬೈಲ್ ಬುಡಕಟ್ಟು ವಿಭಾಗದ ನೇತೃತ್ವದಲ್ಲಿ ವೈದ್ಯಕೀಯ ಶಿಬಿರ ನಡೆಯಿತು.
ಆರೋಗ್ಯ ಮಾಹಿತಿ ಶಿಬಿರ, ತಪಾಸಣೆ, ಉಚಿತ ಔಷಧಿಗಳ ವಿತರಣೆ, ಗೃಹ ಸಂದರ್ಶನ ಮೊದಲಾದ ಚಟುವಟಿಕೆಗಳು ಈ ಹಿನ್ನೆಲೆಯಲ್ಲಿ ನಡೆಯಿತು. ಜಿಲ್ಲಾ ಬುಡಕಟ್ಟು ವಿಭಾಗದ ವೈದ್ಯಾಧಿಕಾರಿ ಡಾ.ನಿಷಾದ್, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ ರೈ ರೋಗಿಗಳ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಿದರು. ಹಿರಿಯ ಆರೋಗ್ಯ ಪರಿವೀಕ್ಷಕ ಬಾಲಚಂದ್ರನ್ ಸಿ.ಸಿ, ಆಶಾ ಕಾರ್ಯಕರ್ತೆ ಸುನಿತಾ, ಬೇಬಿ ನೇತೃತ್ವ ವಹಿಸಿದ್ದರು.


