ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಏಳು ದಿನಗಳ ಎನ್ನೆಸ್ಸೆಸ್ ಶಿಬಿರ ಡಿ.21ರಿಂದ ಡಿ.27ರವರೆಗೆ ಎಜೆಬಿಎಸ್ ಪುತ್ತಿಗೆಯಲ್ಲಿ ನಡೆಯಲಿದೆ.
ಡಿ.21ರಂದು ಬೆಳಗ್ಗೆ 11.30ಕ್ಕೆ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅರುಣ ಜೆ.ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಪಂಚಾಯಿತಿ ಉಪಾಧ್ಯಕ್ಷ ಪಿ.ಬಿ.ಮೊಹಮ್ಮದ್ ಅಧ್ಯಕ್ಷತೆ ವಹಿಸುವರು. ಪಂಚಾಯಿತಿ ಅಭಿವೃಧ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ
ಜಯಂತಿ, ಎಣ್ಮಕಜೆ ಗ್ರಾ.ಪಂ.ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಪುತ್ತಿಗೆ ಗ್ರಾ.ಪಂ.ಸದಸ್ಯೆ ಚಂದ್ರಾವತಿ, ಮಾಜಿ ಅಧ್ಯಕ್ಷ ಜಯಂತ ಪಾಟಾಳಿ, ಎಜೆಬಿ ಶಾಲೆ ವ್ಯವಸ್ಥಾಪಕ ಅಶೋಕ್ ಕುಮಾರ್ ಸಿ.ಎಂ., ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಸಿ.ಸಂಜೀವ ರೈ, ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮುಖ್ಯ ಶಿಕ್ಷಕ ಸುಧೀರ್ ಕುಮಾರ್ ರೈ, ಎನ್ನೆಸ್ಸೆಸ್ ಯೋಜನಾಧಿಕಾರಿ ಮಹೇಶ್ ಏತಡ್ಕ, ಸಿಬ್ಬಂದಿ ಕಾರ್ಯದರ್ಶಿ ವಾಣಿ ಕೆ, ಶಿಬಿರ ಸಂಚಾಲಕ ವೇಣು ಗೋಪಾಲ್ ರೈ, ಪುತ್ತಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಉರ್ಮಿ, ಮಾತೃಸಂಘದ ಅಧ್ಯಕ್ಷೆ ರಾಜಶ್ರೀ, ಶಾಲಾ ಪೆÇೀಷಕ ಸಮಿತಿಯ ಸಿದ್ದಿಕ್ ಕಯ್ಯಂಕೂಡಲ್, ಸಿಬ್ಬಂದಿ ಕಾರ್ಯದರ್ಶಿ ಸುಮನ ಸಿ.ಎಚ್., ಕಾಟುಕುಕ್ಕೆ ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಎನ್ನೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಯೋಜಕ ಹರಿದಾಸ್ ವಿ., ಪಿಎಸಿ ಸದಸ್ಯ ಶಾಹುಲ್ ಹಮೀದ್, ಕಾಟುಕುಕ್ಕೆ ಶಾಲೆ ವ್ಯವಸ್ಥಾಪಕ ಸಮಿತಿ ಸದಸ್ಯ ಬಿ.ಎಸ್.ಗಾಂಭೀರ್, ಎಸ್.ಕೆ.ಎಸ್.ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶಿವ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಪಿ., ಬಾಲಕೃಷ್ಣ ರೈ ಉಪಸ್ಥಿತರಿರುವರು.
ಡಿ.27ರಂದು ಸಮಾರೋಪ ಸಮಾರಂಭ ನಡೆಯಲಿದೆ. ಶಿಬಿರದ ಎಲ್ಲಾ ದಿನಗಳಲ್ಲಿ ಯೋಗ, ವರದಿ, ದಾಖಲೆ, ಪತ್ರಿಕೆ ಓದುವುದು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಶೇಷತೆ: ಗಾಂಧಿ ಸ್ಮೃತಿ- ಸಂವಾದ, ಬದುಕುಳಿಯುವ ಜಾಣ್ಮೆ-ನಾಯಕತ್ವ ಕೌಶಲ್ಯ, ಸಮದರ್ಶನ್- ಲಿಂಗ ಸಮಾನತೆ, ಆರೋಗ್ಯ ಮತ್ತು ಪರಿಸರ, ಜಲ ಸಂರಕ್ಷಣೆ, ಉನ್ನತ ಶಿಕ್ಷಣ- ವೃತ್ತಿ ದೃಷ್ಟಿಕೋನ, ವಿದ್ಯಾಭ್ಯಾಸದ ಮಹತ್ವ ಮತ್ತು ಮನವೀಯ ಮೌಲ್ಯ, ಜೀವನ ಆಧಾರಿತ ಮೌಲ್ಯ, ಪ್ರಥಮ ಚಿಕಿತ್ಸೆ ತರಗತಿ, ಧನಾತ್ಮಕ ಮನಶಾಸ್ತ್ರ, ಕಾನೂನು-ಸಾಮಾಜಿಕ ಜಾಗೃತಿ ಸಂವಾದ,
ಬಟರ್ ಫ್ಲೈ ಹೂದೋಟ ನಿರ್ಮಾಣ, ತೆರೆದ ಗ್ರಂಥಾಲಯ ಕಾಮಗಾರಿ, ಜಿ.ಎಂ.ಎಲ್.ಪಿ.ಎಸ್. ಆರಿಕ್ಕಾಡಿ ಶಾಲೆ ಅಭಿವೃದ್ಧಿ, ಅಂಗನವಾಡಿ ಸ್ವಚ್ಛತೆ, ಥಿಯೇಟರ್ ವರ್ಕ್ ಶಾಪ್, ಥಿಯೇಟರ್ ಗೇಮ್ಸ್, ಕೋಮು ಸಾಮರಸ್ಯ ರ್ಯಾಲಿ, ಫಿನಾಯ್ಲ್, ಸೋಪು ತಯಾರಿ, ಬಟ್ಟೆ ಚೀಲ ವಿತರಣೆ, 'ಮಳೆಹಬ್ಬ', ಜಾನಪದ ಗೀತೆ, 'ಜಿಂಗಲ್ ಬೆಲ್ಸ್' ಕ್ರಿಸ್ ಮಸ್ ಆಚರಣೆ, ಶಿಬಿರದ ಅವಲೋಕನ

