HEALTH TIPS

ನೌಕರರಿಲ್ಲದೆ ಗ್ರಾ.ಪಂ. ಕಾರ್ಯಚಟುವಟಿಕೆ ಅಸ್ತವ್ಯಸ್ತ-ಧರಣಿ


     ಕುಂಬಳೆ: ಕುಂಬಳೆ ಗ್ರಾ.ಪಂ.ಕಾರ್ಯಾಲಯದಲ್ಲಿ ಅಗತ್ಯದಷ್ಟು ನೌಕರರ ಕೊರತೆ ಎದ್ದು ಕಾಣುತ್ತಿದ್ದು, ಗ್ರಾ.ಪಂ. ಕಾರ್ಯಕಲಾಪಗಳು ಸ್ತಬ್ದವಾಗತೊಡಗಿದೆ. ಹಿನ್ನೆಲೆಯಲ್ಲಿ ಗ್ರಾ.ಪಂ.ಆಡಳಿತ ಸಮಿತಿ ಸದಸ್ಯರು ಗ್ರಾ.ಪಂ.ಕಾರ್ಯಾಲಯದ ಎದುರು ಧರಣಿ ನಡೆಸಿದರು.
   ನೌಕರರು ರಜೆಯ ಮೇರೆ ತೆರಳುವುದು, ತೆರವಾಗಿರುವ ಅಗತ್ಯದ ನೌಕರರ ಸ್ಥಾನ ಭರ್ತಿಗೊಳಿಸದಿರುವುದು ಮೊದಲಾದ ಕಾರಣಗಳಿಂದ ಗ್ರಾ.ಪಂ.ನ ತುರ್ತು ಅಗತ್ಯ ಸೇವೆಗಳು ನೆನೆಗುದಿಗೆ ಬಿದ್ದಿರುವುದು ಮೊದಲಾದ ಸಮಸ್ಯೆಗಳ ಬಗ್ಗೆ ಧರಣಿಯಲ್ಲಿ ಉಲ್ಲೇಖಿಸಲಾಯಿತು. ಪ್ರಸ್ತುತ ಆಡಳಿತ ನಡೆಸುತ್ತಿರುವ ಸಮಿತಿ ಆಡಳಿತ ಚುಕ್ಕಾಣಿ ಹಿಡಿದು ಎರಡು ವರ್ಷಗಳ ಅವಧಿಯಲ್ಲಿ ಎಂಟು  ಬಾರಿ ಪಂಚಾಯತಿ ಕಾರ್ಯದರ್ಶಿಗಳ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಸೇವೆಯಲ್ಲಿರುವ ಕಾರ್ಯದರ್ಶಿ ಮುಮದಿನ ಪೆಬ್ರವರಿಯಲ್ಲಿ ನಿವೃತ್ತರಾಗುವ ಹಿನ್ನೆಲೆಯಲ್ಲಿ ಅವರು ರಜೆ ಪಡೆದು ಊರಿಗೆ ಹಿಂತರುಗಿದ್ದಾರೆ. ಕಳೆದ ಒಂದು ವರ್ಷಗಳ ಹಿಂದೆಯಷ್ಟೆ ಸೇವೆಗೆ ಆಗಮಿಸಿದ ಸಹ ಕಾರ್ಯದರ್ಶಿಯವರಿಗೆ ಇದೀಗ ವರ್ಗಾವಣೆಯ ಸೂಚನಾಪತ್ರ ತಲಪಿದ್ದು, ಇಂತಹ  ಕಾರಣಗಳಿಂದ ಗ್ರಾ.ಪಂ.ನ ದಿನನಿತ್ಯದ ಸೇವೆಗಳಲ್ಲಿ ಹಿನ್ನಡೆ ಉಂಟಾಗುತ್ತಿದೆ. ಐದು ಮಂದಿ ಯುಡಿ ಕ್ಲರ್ಕ್‍ಗಳ ಕೆಲಸವನ್ನು ಪ್ರಸ್ತುತ ಮೂರು ಮಂದಿ ನಿರ್ವಹಿಸುತ್ತಿದ್ದಾರೆ. ಅಭಿಯಂತರ ವಿಭಾಗದ ಸಾಮಾನ್ಯ ಕ್ಲರ್ಕ್ ನೇಮಕಾತಿಯಿಲ್ಲದೆ ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಅಭಿಯಂತರ ವಿಭಾಗದ ಕಾರ್ಯಕಲಾಪಗಳು ಸಮಸ್ಯೆಗೆ ಸಿಲುಕಿದೆ. ಈ ಕಾರಣಗಳಿಂದ ಗ್ರಾ.ಪಂ.ಆಡಳಿತ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿ ಸರ್ಕಾರಕ್ಕೆ ಪರಿಹಾರಕ್ಕಾಗಿ ಆಗ್ರಹಿ
ಸಲಾಯಿತು.
    ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು, ಜಿಲ್ಲೆಯ ಪ್ರಧಾನ ಗ್ರಾ.ಪಂ.ಗಳಲ್ಲಿ ಒಂದಾದ ಕುಂಬಳೆ ಯಲ್ಲಿ ಇಷ್ಟೊಂದು ಪ್ರಮಾಣದ ನೌಕರರ ಕೊರತೆ ಕಂಡುಬರಲು ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆಗಳು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ನಿಸ್ತೇಜಗೊಂಡಿದ್ದು, ಶೀಘ್ರ ಪರಿಹಾರ ಒದಗಿಸಬೇಕಿದೆ. ಸಾಂಕೇತಿಕ ಧರಣಿಯನ್ನು ಮಾಡುತ್ತಿದ್ದರೂ, ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯಮಟ್ಟದ ಪ್ರತಿಭಟನೆಗೆ ಕಾರಣವಾಗುವುದೆಂದು ತಿಳಿಸಿದರು.
  ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಬಿ.ಎಲ್.ಮೊಹಮ್ಮದ್ ಅಲಿ, ಎ.ಕೆ.ಆರೀಫ್, ಫಾತಿಮ ಅಬ್ದುಲ್ಲ ಕುಞÂ್ಞ, ಮರಿಯಮ್ಮ ಮೂಸಾ, ಶಂಸುದ್ದೀನ್, ಸುಹರಾ ಬಿ.ಎ.ಸೈನಬ, ಅರುಣ ಎಂ.ಆಳ್ವ,ಮುರಳೀಧರ ಯಾದವ್, ರಮೇಶ್ ಭಟ್ ಕುಂಬಳೆ, ಮೊಹಮ್ಮದ್ ಕುಞÂ್ಞ, ಖೈರುನ್ನೀಸಾ ಖಾದರ್, ಆಯಿಷಾ ಮೊಹಮ್ಮದ್, ಸುಜಿತ್ ರೈ, ಸುಧಾಕರ ಕಾಮತ್, ಹರೀಶ್, ಪುಷ್ಪಲತಾ ಮೊದಲಾದವರು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries