ಕಾಸರಗೋಡು: ಜಿಲ್ಲಾ ಮಟ್ಟದ ಹಾಲು ಉತ್ಪಾದಕರ ಸಂಗಮ ಕಾರ್ಯಕ್ರಮ ಡಿ.26,27ರಂದು ರಾವಣೀಶ್ವರಂ ನಲ್ಲಿ ನಡೆಯಲಿದೆ.
ಚಿತ್ತಾರಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೇತೃತ್ವದಲ್ಲಿ ಹಾಲು ಅಭಿವೃದ್ಧಿ ಇಲಾಖೆ, ಜಿಲ್ಲೆಯ 141 ಹಾಲು ಉತ್ಪಾದಕರ ಸಂಘಟನೆಗಳ ಜಂಟಿ ವತಿಯಿಂದ ತ್ರಿಸ್ತರ ಪಂಚಾಯತ್ ಗಳು, ಮಿಲ್ಮಾ, ಕೇರಳ ಫೀಡ್ಸ್ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯುವುದು.
ಹಾಲು ಅಭಿವೃದ್ಧಿ ಇಲಾಖೆಯ 19.375 ಲಕ್ಷರೂ. ಆರ್ಥಿಕ ಸಹಾಯದೊಂದಿಗೆ ಚಿತ್ತಾರಿ ಹಾಲು ಉತ್ಪಾದಕರ ಸಹಕಾರಿಸಂಘ ನಿರ್ಮಿಸಿರುವ ಕಿಡಾರಿ ಪಾರ್ಕ್, 5.25 ಲಕ್ಷ ರೂ. ಆರ್ಥಿಕ ಸಹಾಯದೊಂದಿಗೆ ನಿರ್ಮಿಸಿರುವ ಪಾರ್ಮರ್ಸ್ ಫೆಸಿಲಿಟೇಷನ್ ಕಂ ಇನ್ ಪಾರ್ಮೇಷನ್ ಸೆಂಟರ್ ಈ ವೇಳೆ ನಡೆಯಲಿದೆ. ಜಾನುವಾರು ಪ್ರದರ್ಶನ, ಗವ್ಯ ಜಾಲಕಂ ರಸಪ್ರಶ್ನೆ, ಕಲಾ-ಕ್ರೀಡಾ ಸ್ಪರ್ಧೆಗಳು, ಹಾಲು ಉತ್ಪಾದಕರಿಗಾಗಿ ವಿಚಾರಸಂಕಿರಣ, ಡೈರಿ ಎಕ್ಸಿಬಿಷನ್, ಸಾಧಕರಿಗೆ ಅಭಿನಂದನೆ ಇತ್ಯಾದಿಗಳು ಸಮಾರಂಭ ಅಂಗವಾಗಿ ನಡೆಯಲಿವೆ.
ಡಿ.27ರಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಹಾಲು ಉತ್ಪಾದನೆ ಸಚಿವ ನ್ಯಾಯವಾದಿ ಕೆ.ರಾಜು ಸಂಗಮವನ್ನು ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.

