HEALTH TIPS

ಕ್ಷಯರೋಗ ವಿರುದ್ಧ ಕಿರುಚಿತ್ರ ಬಿಡುಗಡೆ

     
           ಕಾಸರಗೋಡು: ಕ್ಷಯರೋಗ ಪ್ರತಿರೋಧ ಚಟುವಟಿಕೆಗಳಿಗೆ ಕೈಗನ್ನಡಿ ಹಿಡಿಯುವ ನಿಟ್ಟಿಲ್ಲಿ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಚೆಂಗಳ ಗ್ರಾಮಪಂಚಾಯತ್ ಸಹಕಾರದೊಂದಿಗೆ "ಇಟ್ಸ್ ಟೈಂ(ಇದು ಸೂಕ್ತ ಸಮಯ)" ಎಂಬ ನಾಮಧೇಯದ ಕಿರುಚಿತ್ರವೊಂದು ಬಿಡುಗಡೆಯಾಗಿದೆ.
       ಕನ್ನಡ, ಇಂಗ್ಲಿಷ್,ಹಿಂದಿ,ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ಸಿದ್ಧವಾಗಿದೆ. ಭಾರತದ ಚಿನ್ನದ ಜಿಂಕೆ ಎಂಬ ಖ್ಯಾತಿಗೆ ಕಾರಣರಾಗಿರುವ ಒಲಿಂಪಿಕ್ಸ್ ಓಟಗಾರ್ತಿ ಪಿ.ಟಿ.ಉಷಾ ಅವರು  ಈ ಚಿತ್ರದಲ್ಲಿ ಜಾಗೃತಿ ಮೂಡಿಸುವವರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರಧಾನ ಆಕರ್ಷಣೆಯಾಗಿದೆ. ಆರೋಗ್ಯ ವಲಯದ ಪರಿಣತರು,ಜನಪ್ರತಿನಿಧಿಗಳೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿತ್ರದಲ್ಲಿದ್ದಾರೆ.     
        ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅವರ ಅಶಯ, ಚಿತ್ರಕಥೆಯೊಂದಿಗೆ ಈ ಚಿತ್ರ ನಿರ್ಮಿಸಲಾಗಿದೆ. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಆರ್.ವಿನೋದ್ ರಾಜ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಜೆ.ಎಚ್.ಐ. ರಾಜೇಶ್ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದಾರೆ. ಷಿನೋಜ್ ಚಾತಂಗಾಯಿ ಛಾಯಾಗ್ರಹಣ ನಡೆಸಿದ್ದಾರೆ. ಅಜಿತ್ ಕುಮಾರ್ ಸಂಕಲನ ನಡೆಸಿ, ಸಂಗೀತ ನೀಡಿದ್ದಾರೆ. 
             ಚಿತ್ರ ಬಿಡುಗಡೆ ಸಮಾರಂಭ:
    ಚೆರ್ಕಳ ಮಾರ್ತೋಮಾ ಕಿವುಡರ ಶಾಲೆಯಲ್ಲಿ ಶುಕ್ರವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಕಿರುಚಿತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಒಂದಾನೊಂದು ಕಾಲದಲ್ಲಿ ಚಿಕಿತ್ಸೆ ಇಲ್ಲದೇ ಸಾರ್ವಜನಿಕ ವಲಯಕ್ಕೆ ಬೆದರಿಕೆಯಾಗಿದ್ದ ಕ್ಷಯರೋಗ ಇಂದು ಸೂಕ್ತ ಔಷಧೋಪಚಾರಗಳಿಂದ ಪೂರ್ಣಪ್ರಮಾಣದಲ್ಲಿ ವಾಸಿಯಾಗುವ ಕಾಯಿಲೆಯಾಗಿದೆ. ಆದರೆ ಜಾಗೃತಿಯ, ಮಾಹಿತಿಯ ಕೊರತೆ ಇತ್ಯಾದಿ ಕಾರಣಗಳಿಂದ ಇಂದಿಗೂ ಸಮಾಜದ ಕೆಲೆವೆಡೆ ಈ ರೋಗ ಹರಡುವಿಕೆ ನಡೆಯುತ್ತಿದೆ. ಈ ಸಂಬಂಧ ಜಾಗೃತಿ ಮೂಡಿಸುವ ಚಟುವಟಿಕೆಗಳು ಪರಿಣಾಮಕಾರಿ. ಈ ಸಾಲಿನಲ್ಲಿ ಮೂಡಿಬಂದಿರುವ ಕಿರುಚಿತ್ರಕ್ಕೆ ವಿಶೇಷ ಅಭಿನಮದನೆ ಸಲ್ಲಿಸುವುದಾಗಿ ಅವರು ಹೇಳಿದರು.
      ಸಚಿವರಿಂದ ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್ ಕಿರುಚಿತ್ರದ ಸಿ.ಡಿ. ಪಡೆದುಕೊಂಡರು. ಚಿತ್ರದ ತಂಡಕ್ಕೆ ಸಚಿವ ಅಭಿನಂದನೆ ನಡೆಸಿದರು. ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಇ.ಶಾಂತಾ ಕುಮಾರಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಹಾಜಿರಾ ಮಹಮ್ಮದ್ ಕುಂuಟಿಜeಜಿiಟಿeಜ, ಎ.ಅಹಮ್ಮದ್ ಹಾಜಿ, ಷಾಹಿದಾ ಅಹಮ್ಮದ್ ಕುಂuಟಿಜeಜಿiಟಿeಜ, ಸದಸ್ಯ ಸುಫೈಝಾ ಮುನೀರ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಆಮಿನಾ ಮುಂಡೋಳ್, ಆರೋಗ್ಯ ಇನ್ಸ್ ಪೆಕ್ಟರರಾದ ಬಿ.ಅಶ್ರಫ್, ಗ್ರಾಮಪಂಚಾಯತ್ ಕಾರ್ಯದರ್ಶಿ ಎಂ.ಸುರೇಂದ್ರನ್, ಜೆ.ಎಚ್.ಐ. ಕೆ.ಎಸ್.ರಾಜೇಶ್, ಹೆಲ್ತ್ ಸೂಪರ್ ವೈಸರ್ ಎ.ಕೆ.ಹರಿದಾಸ್, ಮಾರ್ತೋಮಾ ವಿದ್ಯಾಲಯದ ಆಡಳಿತಾಧಿಕಾರಿ ರೆ.ಫಾ. ಎ.ಜಿ.ಮ್ಯಾಥ್ಯೂ, ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ.ಷಮೀಮಾ ತನ್ವೀರ್ ವರದಿ ವಾಚಿಸಿದರು. 
: ಚೆರ್ಕಳ ಮಾರ್ತೋಮಾ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಇ.ಚಂದ್ರಶೇಖರನ್ ಕಿರುಚಿತ್ರ ಬಿಡುಗಡೆಗೊಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries