ಬದಿಯಡ್ಕ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ಕಾಯ್ದೆಯ ವಿರುದ್ದ ಶುಕ್ರವಾರ ನೀರ್ಚಾಲಿನಲ್ಲಿ ಮುಸ್ಲಿಂ ವಿಭಾಗ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾ ಸ್ವರೂಪ ಪಡೆದು ಓರ್ವನಿಗೆ ಗಂಭೀರ ಗಾಯವಾಗುವ ಮೂಲಕ ಪರ್ಯಾವಸಾನಗೊಂಡು ಪ್ರಕ್ಷುಬ್ದತೆ ಸೃಷ್ಟಿಸಿತು.
ಶುಕ್ರವಾರ 7 ಗಂಟೆಯ ಸುಮಾರಿಗೆ ನೀರ್ಚಾಲು ಮೇಲಿನ ಪೇಟೆಯಿಂದ ಹೊರಟ ಮೆರವಣಿಗೆ ಕೆಳಗಿನ ಪೇಟೆಯ ಮೂಲಕ ಮರಳಿ ಮೇಲಿನ ಪೇಟೆಯತ್ತ ಸಂಚರಿಸುತ್ತಿದ್ದಾಗ ಪ್ರತಿಭಟನಕಾರರ ಮೊದಲು ಕ್ಯಾಂಪ್ಕೋ ಎದುರು ಭಾಗದ ಪರಮೇಶ್ವರ ಆಚಾರ್ಯ ಅವರ ಮನೆಗೆ ಕಲ್ಲೆಸೆದು ಬಳಿಕ ಅದೇ ಪರಿಸರದ ಅಂಗಡಿ ಮುಗ್ಗಟ್ಟುಗಳ ಬಳಿ ಕುಳಿತಿದ್ದವರ ಮೇಲೆ ಕಲ್ಲೆಸೆಯತೊಡಗಿಸಿ ಭೀತಿಯ ವಾತಾವರಣ ಸೃಸ್ಟಿಸಿದರು. ಘಟನೆಯಲ್ಲಿ ನೀರ್ಚಾಲು ಶಿವಾಶಿ ಪ್ರೆಂಡ್ಸ್ ಕ್ಲಬ್ ಸದಸ್ಯ, ಪುದುಕೋಳಿ ನಿವಾಸಿ ಪಕೀರ ಎಂಬವರ ಪುತ್ರ ಶ್ರೀಜಿತ್ ತಲೆಗೆ ಕಲ್ಲೇಟಿನಿಂದ ಗಂಭೀರ ಗಾಯವಾಯಿತು. ಕೂಡಲೇ ಆತನನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ಇತರ ಸಾರ್ವಜನಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯ ವಿವರ ತಿಳಿಯುತ್ತಿದ್ದಂತೆ ಧಾವಿಸಿ ಬಂದ ಬದಿಯಡ್ಕ ಪೋಲೀಸರು ಪ್ರತಿಭಟನಕಾರರನ್ನು ನಿಯಂತ್ರಿಸಿದರು.
ಮೆರವಣಿಗೆಯಲ್ಲಿ ಸುಮಾರು ನೂರಕ್ಕಿಂತಲೂ ಮಿಕ್ಕಿದ ಮುಸ್ಲಿಂ ಯುವಕರು ಪಾಲ್ಗೊಂಡಿದ್ದು, ನೀರ್ಚಾಲು ಪರಿಸರದವರಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಪೋಲೀಸರು ತಿಳಿಸಿದ್ದು, ಘಟನೆಯ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ರಾಷ್ಟ್ರದ ಪ್ರಧಾನಿ ಹಾಗೂ ಗೃಹಸಚಿವರನ್ನು ವ್ಯಾಪಕ ಪ್ರಮಾಣದಲ್ಲಿ ಅವಹೇಳನಗೈದು ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಗೃಹ ಸಚಿವ ಅಮಿತ್ ಶಾರ ಪ್ರತಿಕೃತಿಯನ್ನು ದಹಿಸಿದೆ.


