ಉಪ್ಪಳ: ಕಯ್ಯಾರು ಕ್ರೈಸ್ಟ್ ಕ್ಲಬ್ ನೇತೃತ್ವದಲ್ಲಿ ಹಾಗೂ ಸಂತ ಜೋಸೆಫ್, ವೇಲಂಕಣಿ ಸೇಕ್ರೆಟ್ ಹಾರ್ಟ್ ವಾರ್ಡುಗಳ ಸಹಭಾಗಿತ್ವದಲ್ಲಿ ಕ್ರಿಸ್ ಮಸ್ ಸಹಮಿಲನ - 2019 ಕಾರ್ಯಕ್ರಮ ಡಿ.29 ರಂದು ನಡೆಯಲಿದೆ.
ಸಂಜೆ 6ಕ್ಕೆ ಕಯ್ಯಾರು ಜಂಕ್ಷನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ಐವನ್ ಡಿ ಮೆಲ್ಲೊ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಿಗೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ್ ರೈ, ಕೊಕ್ಕೆಜಾಲ್ ಕಾಮಿಲ್ ಶಾಲೆಯ ಪ್ರಾಂಶುಪಾಲ ಮೊಯಿದಿನ್ ಕುಂಞ, ಉಪ್ಪಳ ನ್ಯೂ ಭಾರತ್ ಕಾಲೇಜಿನ ಪ್ರಾಂಶುಪಾಲ ರಘುಕುಮಾರ್ ಪಿ., ಕಯ್ಯಾರು
ವಿಜಯ ಜೇಸು ರಾಜ್ ಕಾನ್ವಂಟಿನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್, ಕಯ್ಯಾರು ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ರೋಶನ್ ಡಿಸೋಜ ಮೊದಲಾದವರು ಉಪಸ್ಥಿತರಿರುವರು.
ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಯಶಸ್ವಿ ಕಲಾವಿದರು ಮಂಜೇಶ್ವರ ಇವರ ಹಾಸ್ಯಮಯ ನಾಟಕ 'ದೂರ ದೀವೊಡ್ಚಿ' ಪ್ರದರ್ಶನ ಗೊಳ್ಳಲಿದೆ.

