ಮಂಜೇಶ್ವರ: ಚಿನಾಲದ ನವಯುವಕ ಕಲಾವೃಂದ ಗ್ರಂಥಾಲಯದಲ್ಲಿ ಸೂರ್ಯ ಗ್ರಹಣ ವೀಕ್ಷಣೆ ಮತ್ತು ಗ್ರಹಣ ಮಾಹಿತಿ ತರಗತಿ ನಡೆಯಿತು.
ತರಗತಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಅಕ್ಷಯ ಕುಮಾರ್ ಎಲಿಯಾಣ ಗ್ರಹಣ ಮಾಹಿತಿ ನೀಡಿದರು. ಪ್ರಕೃತಿ ವಿಸ್ಮಯವನ್ನು ಯುವ ಜನಾಂಗಕ್ಕೆ ತಿಳಿಸಬೇಕು. ಅವರಲ್ಲಿರುವ ಮೂಢನಂಬಿಕೆಯನ್ನು ಕೊನೆಗೊಳಿಸಬೇಕು ಮತ್ತು ಗ್ರಹಣ ಕಾಲದಲ್ಲಿ ಸೂರ್ಯಕಿರಣ ನೇರವಾಗಿ ಕಣ್ಣಿಗೆ ಬೀಳುವುದು ಅಪಾಯಕಾರಿಯಾಗಿದೆ. ಬರಿ ಕಣ್ಣಿನಿಂದ ಸೂರ್ಯನನ್ನು ನೋಡಬಾರದು. ಪ್ರತ್ಯೇಕ ಪರೀಕ್ಷಿತ್ ಕನ್ನಡಿ ಮೂಲಕವೇ ಗ್ರಹಣದಂದು ಸೂರ್ಯನನ್ನು ನೋಡಬೇಕು. ಇದನ್ನು ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಮತ್ತು ಕೆಲವು ಮಾಧ್ಯಮಗಳಲ್ಲಿ ಹೇಳುವ ದೇವಾ ಮಾನವರ ವ್ಯವಹಾರಬುದ್ದಿಗೆ ಜನಗಳು ಮಾರು ಹೋಗದೆ ನೈಜ ಸತ್ಯವನ್ನು ತಿಳಿಯಬೇಕು ಎಂದು ತಿಳಿಸಿದರು.
ಗ್ರಂಥಾಲಯ ಉಪಾಧ್ಯಕ್ಷ ಲವಾನಂದ ಎಲಿಯಾಣ ಅಧ್ಯಕ್ಷತೆಯಲ್ಲಿ, ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಡಿ.ಕಮಲಾಕ್ಷ ಕಾರ್ಯಕ್ರಮದನ್ನು ಉದ್ಘಾಟಿಸಿ ಮಾತನಾಡಿದರು. ಮೋನಪ್ಪ.ಕೆ, ಕಮಲಾಕ್ಷ .ಕೆ, ಕರುಣಾಕರ, ಲೋಕೇಶ ಸಿ, ಅಂಬಿಕಾ, ಆಶಿಫ್, ಅವಿನಾಶ್ ಉಪಸ್ಥಿತರಿದ್ದರು.
ಉದಯ ಸಿ. ಯಚ್ ಸ್ವಾಗತಿಸಿ, ಗೀತಾ ವಂದಿಸಿದರು.


