HEALTH TIPS

ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಸಂತಸ

     
      ನವದೆಹಲಿ: ಜಗತ್ತಿನ ಹಲವೆಡೆ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಣ್ತುಂಬಿಕೊಂಡಿದ್ದು, ಗ್ರಹಣದ ಬಳಿಕ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
     ಇಂದು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. ಬಳಿಕ ಟ್ವಿಟರ್?ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ,'ಅನೇಕ ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣದ ಬಗ್ಗೆ ಉತ್ಸಾಹವನ್ನು ಹೊಂದಿದ್ದೇನೆ. ದೆಹಲಿಯಲ್ಲಿ ಮೋಡ ಕವಿದಿರುವುದರಿಂದ ದುರಾದೃಷ್ಟವಶಾತ್? ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ, ನೇರಪ್ರಸಾರದ ಮೂಲಕ ಕೇರಳದ ಕೋಳಿಕ್ಕೋಡ್? ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಸಂಭವಿಸಿದ ಗ್ರಹಣ ಕೆಲ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದೇನೆ. ಇದರೊಂದಿಗೆ ಖಗೋಳ ಶಾಸ್ತ್ರಜ್ಞರ ಬಳಿ ಗ್ರಹಣದ ಬಗ್ಗೆ ತಿಳಿಯುವ ಮೂಲಕ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
     ಇಂದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ಕೊನೆಯ ಹಾಗೂ ಮೂರನೇ ಸೂರ್ಯಗ್ರಹಣವಾಗಿದೆ. ಬಾನಂಗಳದಲ್ಲಿ ನಡೆದ ನೆರಳು ಬೆಳಕಿನ ಬೆಂಕಿಯ ಬಳೆಯಾಟವನ್ನು ಜಗತ್ತಿನೆಲ್ಲಡೆ ಜನರು ವೀಕ್ಷಣೆ ಮಾಡಿದ್ದಾರೆ.
Like many Indians, I was enthusiastic about .

Unfortunately, I could not see the Sun due to cloud cover but I did catch glimpses of the eclipse in Kozhikode and other parts on live stream. Also enriched my knowledge on the subject by interacting with experts.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries