ಕಾಸರಗೋಡು: ಬೇಕಲ,ಚಿತ್ತಾರಿ ಹೊಳೆಬದಿ ಕುದುರುಕಾಡು ಬೆಳೆಸುವ ನಿಟ್ಟಿನಲ್ಲಿ ಸಸಿ ನೆಡುವ ಯೋಜನೆಗೆ ಚಾಲನೆ ಲಭಿಸಿದೆ.
ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಸಹಕಾರದೊಂದಿಗೆ ಪಳ್ಳಿಕ್ಕರೆ ಗ್ರಾಮಪಂಚಾಯತ್ ಜೈವಿಕ ವೈವಿಧ್ಯ ತರಬೇತಿ ಸಮಿತಿ ನೇತೃತ್ವದಲ್ಲಿ ಯೋಜನೆ ಆರಂಭಗೊಂಡಿದೆ.
ಬೇಕಲ ನದಿ ಬದಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಪಳ್ಳಕ್ಕರೆ ಗ್ರಾಮಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ ಯೋಜನೆ ಉದ್ಘಾಟಿಸಿದರು. ಕಾಸರಗೋಡು ಸಮಾಜಿಕ ಅರಣ್ಯೀಕರಣ ವಿಭಾಗ ಸಹಾಯಕ ಅರಣ್ಯ ಕನ್ಸರ್ ವೇಟರ್ ಅಜಿತ್ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಲತೀಫ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ವಾರ್ಡ್ ಸದಸ್ಯೆ ಆಯಿಷಾ ರಝಾಕ್, ಪಳ್ಳಿಕ್ಕರೆ ಕೃಷಿ ಅಧಿಕಾರಿ ಕೆ.ವೇಣುಗೋಪಾಲನ್, ಜನಪ್ರತಿನಿಧಿಗಳು, ಜೈವಿಕ ವೈವಿಧ್ಯ ತರಬೇತಿ ಸಮಿತಿ ಸದಸ್ಯರು, ಎನ್.ಎಸ್.ಎಸ್. ಸ್ವಯಂಸೇವಕರು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.


