ಕಾಸರಗೋಡು: ಪಳ್ಳಿಕ್ಕರೆ ಬೀಚ್ ನಲ್ಲಿ ಇನ್ನು ನಡೆಯಲಿರುವುದು ಉತ್ಸವದ ದಿನಗಳು. ಹಗ್ಗ-ಜಗ್ಗಾಟ, ಕಾಲ್ಚೆಂಡು, ವಾಲಿಬಾಲ್, ಕಬಡ್ಡಿ ಇತ್ಯಾದಿ ಪಂದ್ಯಾಟಗಳು ತೆರೆಗಳನ್ನು ಸಾಕ್ಷೀಭೂತವಾಗಿಸಿ ಅರೆಬಿ ಕಡಲತೀರದ ಮಳಲಿನ ಆವೇಶ ಹೆಚ್ಚಿಸಲಿವೆ.
ಕರಾವಳಿ ಪ್ರದೇಶಗಳ ಕ್ರೀಡಾ ವಲಯದ ಅಭಿವೃದ್ಧಿ ಮತ್ತು ಪ್ರಚಾರದ ಉದ್ದೇಶದಿಂದ ನಡೆಸಲಾಗುವ ಜಿಲ್ಲಾ ಬೀಚ್ ಗೇಮ್ಸ್ ಡಿ.24,25ರಂದು ಪಳ್ಳಿಕ್ಕರೆ ಬೀಚ್ ನಲ್ಲಿ ನಡೆಯಲಿವೆ. 5 ವಲಯಗಳಲ್ಲಿ ಸ್ಪರ್ಧೆಗಳು ಸಾರ್ವಜನಿಕ ಸಹಭಾಗಿತ್ವ ಮತ್ತು ಸ್ಪರ್ಧೆಗಳ ಬಿರುಸಿಗೆ ದೊಡ್ಡ ದಾಪುಗಾಲಾಗಿ ಪಳ್ಳಿಕ್ಕರೆಯಲ್ಲಿನಡೆಯುವ ಜಿಲ್ಲಾ ಮಟ್ಟದ ಬೀಚ್ ಗೇಮ್ಸ್ ಆಗಿ ಪ್ರಕಟಗೊಳ್ಳಲಿರುವುದು ನಿಸ್ಸಂದೇಹ.
ಬೇಕಲದಲ್ಲಿ ಪುಷ್ಪ-ಫಲ ಮೇಳವೂ ನಡೆಯಲಿರುವ ಇದೇ ಅವಧಿಯಲ್ಲಿ ಪಳ್ಳಿಕ್ಕರೆ ಬೀಚ್ ಗೇಮ್ಸ್ ಕೂಡ ನಡೆಯಲಿರುವುದು ದ್ವಿಗುಣಿಯಾಗಿ ರಸಿಕರ ಮನೆಸೆಳೆಯಲಿದೆ. ಈ ಗೇಮ್ಸ್ ನ ಪ್ರಚಾರಾರ್ಥ ಮಂಜೇಶ್ವರ, ಕುಂಬಳೆ, ಕಾಸರಗೋಡು ನೂತನ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಬೇಕಲ-ಪಳ್ಳಕ್ಕರೆ ಜನವಾಸ ಕೇಂದ್ರಗಳು, ಕಾಞಂಗಾಡ್, ನೀಲೇಶ್ವರ, ಚೆರುವತ್ತೂರು ಪ್ರದೇಶಗಳಲ್ಲಿ ಶೀಘ್ರದಲ್ಲೇ ಚೆಂಡೆಮೇಳ ಸಹಿತದ ವರ್ಣರಂಜಿತ ಮೆರವಣಿಗೆ ನಡೆಯಲಿದೆ.
ಕಡಲ ತಾಯ ಮಕ್ಕಳಿಗಾಗಿ ವಿಶೇಷ ಸ್ಪರ್ಧೆಗಳು:
ರಾಜ್ಯದ ಜಲಸೈನಿಕರು ಎಂದೇ ಕರೆಸಿಕೊಳ್ಳುತ್ತಿರುವ ಮೀನುಗಾರರಿಗಾಗಿ ಬೀಚ್ ಗೇಮ್ಸ್ ಸಂಬಂಧ ವಿಶೇಷ ಸ್ಪರ್ಧೆಗಳು ನಡೆಯಲಿವೆ. ನೆರೆ ಹಾವಳಿಯಂಥಾ ಪ್ರಬಲ ಪ್ರಕೃತಿ ವಿಕೋಪಗಳ ವೇಳೆ ಜೀವನ್ಮರಣ ಹೋರಾಟ ನಡೆಸಿ ಸಂತ್ರಸ್ತರ ಜೀವ ಉಳಿಕೆಗೆ ಕಾರಣರಾದ ಮೀನುಗಾರರಿಗೆ ಸಮಾಜದ ಪ್ರಧಾನ ವಾಹಿನಿಯಲ್ಲಿ ಸೂಕ್ತ ಮನ್ನಣೆ ದೊರೆಯದೇ ಇರುವ ಬಗ್ಗೆ ಕಳಕಳಿ ಹೊಂದಿರುವ ರಾಜ್ಯ ಸರಕಾರ ಈ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಪ್ರಥಮ ಬಾರಿಗೆ ಹೀಗೊಂದು ಸ್ಪರ್ಧೆ ಮೀನುಗಾರರಿಗಾಗಿ ನಡೆಯುತ್ತಿದೆ.
ಬಹಿರಂಗಗೊಂಡದ್ದು ಜಿಲ್ಲೆಯ ಕ್ರೀಡೋತ್ಸಾಹ:
ಈಗಾಗಲೇ ಸರಣಿ ರೂಪದಲ್ಲಿ ನಡೆಯುತ್ತಿರುವ ಬೀಚ್ ಗೇಮ್ಸ್ ಕಾಸರಗೋಡು, ಉದುಮಾ ಮೊದಲಾದೆಡೆ ನಡೆದಿದ್ದು,ಜಿಲ್ಲೆಯ ಕ್ರೀಡಾ ಉತ್ಸಾಹ ಬಹಿರಂಗಗೊಂಡಿದೆ ಎಂದು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ತಿಳಿಸಿದರು. ಕ್ರೀಡೆಗಳು ನಡೆದಿದ್ದ ಯಾವ ಪ್ರದೇಶಗಳಲ್ಲೂ ಸಂಘರ್ಷ ಇತ್ಯಾದಿ ನಡೆದಿಲ್ಲ ಎಂಬುದು ಸಾರ್ವಜನಿಕರ ಸಹಕಾರವನ್ನು ಖಚಿತಪಡಿಸಿದೆ. ಈ ಧೈರ್ಯ ಮುಂದಿನ ವರ್ಷಗಳಲ್ಲೂ ಬೀಚ್ ಗೇಮ್ಸ್ ನಡೆಸಲು ಮತ್ತು ಪ್ರವಾಸಿರನ್ನು ಇತ್ತ ಕಡೆ ಸೆಳೆಯಲು ಪೂರಕವಾಗಿದೆ ಎಂದವರು ನುಡಿದರು.
ಸಮಾರಂಭಗಳು:
ಸಮಾರಂಭ ಅಂಗವಾಗಿ ಡಿ.24ರಂದು ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್ ಧ್ವಜಾರೋಹಣ ನಡೆಸುವರು. ನಂತರ ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಬೀಚ್ ಗೇಮ್ಸ್ ಉದ್ಘಾಟಿಸುವರು. ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸುವರು. ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ತಿರುವಾದಿರ ಕ್ಕಳಿ, ಒಪ್ಪನ, ಪೂರಕ್ಕಳಿ, ಮಾಗರ್ಂಕಳಿ ಸಹಿತ ವಿವಿಧ ಕಲಾಪ್ರಕಾರಗಳ ಪ್ರಸ್ತುತಿ ಇರುವುದು. ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಚಿವ ಇ.ಪಿ.ಜಯರಾಜನ್ ಬಹುಮಾನವಿತರಿಸುವರು.
ಪ್ರತಿದಿನ ಸಂಜೆ 4 ಗಂಟೆಗೆ ಈ ಕ್ರೀಡೆಗಳು ಆರಂಭಗೊಳ್ಳಲಿವೆ. 24ರಂದು ಕಾಲ್ಚೆಂಡು, ಹಗ್ಗ-ಜಗ್ಗಾಟ ಸ್ಪರ್ಧೆಗಳು ಪುರುಷ-ಮಹಿಳಾ ತಂಡಗಳಿಂದ ನಡೆಯಲಿವೆ. 25ರಂದು ಪುರುಷರ ವಾಲಿಬಾಲ್, ಕಬ್ಬಡ್ಡಿ ಪಂದ್ಯಾಟಗಳು ಜರುಗುವುವು. ಇದೇ ದಿನ ಮೀನುಗಾರಿಗಾಗಿ ಮಾತ್ರ ಕಾಲ್ಚೆಂಡು, ಹಗ್ಗ-ಜಗ್ಗಾಟ ಸ್ಪರ್ಧೆಗಳು ಇರುವುವು. ವಿಜೇತರಿಗೆ 15 ಸಾವಿರ ರೂ. 10 ಸಾವಿರ ರೂ. 5 ಸಾವಿರ ರೂ. ಬಹುಮಾನ ಇರುವುದು. ಪ್ರಥಮ ಬಹುಮಾನ ಪಡೆದವರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗುತ್ತರೆ. ಕಣ್ಣೂರು, ಕೋಯಿಕೋಡ್, ಆಲಪ್ಪುಳ, ತಿರುವನಂತಪುರಂ ಜಿಲ್ಲೆಗಳಲ್ಲಿ ಶೀಘ್ರದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ ಬಹುಮಾನ 50 ಸಾವಿರರೂ. ಲಭಿಸಲಿದೆ.

