ಕಾಸರಗೋಡು: ಜಿಲ್ಲೆಯ ನೀಲೇಶ್ವರದಲ್ಲಿ ನೂತನ ಶಾಪಿಂಗ್ ಕಾಂಪ್ಲೆಕ್ಸ್ ಸಹಿತ ಬಸ್ ನಿಲ್ದಾಣ ಶೀಘ್ರದಲ್ಲಿ ನನಸಾಗಲಿದೆ. ಈ ಯೋಜನೆಯ ನಕ್ಷೆಗೆ ನಗರಸಭೆ ಮಂಡಳಿ ಮಂಜೂರಾತಿ ನೀಡಿದೆ.
ಹಳೆಯದಾಗಿರುವ ಹಿನ್ನೆಲೆಯಲ್ಲಿ ಕೆಡವಲಾದ ಬಸ್ ನಿಲ್ದಾಣ ಸಂಕೀರ್ಣದ ಬದಲು ನೂತನ ಬಸ್ ನಿಲ್ದಾಣ ಸಮುಚ್ಚಯ ತಡವಿಲ್ಲದೆ ತಲೆಯೆತ್ತಲಿದೆ. ಕಟ್ಟಡ ನಕಾಶೆ ಮತ್ತು ಜಾಗದ ನಕಾಶೆಗೆ ಉಪಸಮಿತಿಯ ಶಿಫಾರಸಿನ ಪ್ರಕಾರ ನೀಲೇಶ್ವರ ನಗರಸಭೆ ಮಂಡಳಿ ಅಂಗೀಕಾರ ನೀಡಿದೆ. ಈಗಿರುವ ತಾತ್ಕಾಲಿಕ ಬಸ್ ನಿಲ್ದಾಣದ ಉತ್ತರ ಭಾಗದ ರಸ್ತೆಯ ಮುಂಭಾಗದಲ್ಲಿ ನೂತನ ಬಸ್ ನಿಲ್ದಾಣ ರೂಪು ತಳೆಯಲಿದೆ.
ಮೂರು ಅಂತಸ್ತು, ವಿಸ್ತೃತ ವಾಹನ ನಿಲುಗಡೆ ವ್ಯವಸ್ಥೆ ಸಹಿತದ ಸಂಕೀರ್ಣ ನಗರಸಭೆ ಸ್ವಾಮ್ಯದ 92 ಸೆಂಟ್ಸ್ ಜಾಗದಲ್ಲಿ 36,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ. 10 ಕೋಟಿ ರೂ. ವೆಚ್ಚದಲ್ಲಿ ಸಮುಚ್ಚಯ ನಿರ್ಮಣವಾಗಲಿದೆ. ಕೆಳ ಅಂತಸ್ತಿನಲ್ಲಿ 16 ಅಂಗಡಿಗಳ ಕೊಠಡಿಗಳು, ಪ್ರಥಮ ಅಂತಸ್ತಿನಲ್ಲಿ 28 ಅಂಡಿ ಕೊಠಡಿಗಳು, 7 ಕಚೇರಿ ಕೊಠಡಿಗಳು, ಜೊತೆಗೆ 8 ಸಾವಿರ ಚದರ ಅಡಿಯ ಸಭಾಂಗಣವೂ ಇರುವುದು. ಬಸ್ ನಿಲ್ದಾಣದಲ್ಲೇ ಆಟೋರಿಕ್ಷಾ ನಿಲುಗಡೆಯೂ ಇರಲಿದೆ. ಏಕಕಾಲಕ್ಕೆ 20 ಬಸ್ ಗಳು ನಿಲ್ಲಬಲ್ಲ ಸ್ಥಳಾವಕಾಶ ವೈಜ್ಞಾನಿಕ ರೀತಿಯ ಸೌಲಭ್ಯಗಳೊಂದಿಗೆ ಇರುವುದು. ಮಕ್ಕಳಿಗೆ ಎದೆಹಾಲುಣಿಸುವ ಸೌಕರ್ಯ, ಪೆÇಲೀಸ್ ಏಡ್ ಪೆÇೀಸ್ಟ್, ಮಾಹಿತಿ ಕೇಂದ್ರ ಸಹಿತ ಸೌಲಭ್ಯಗಳೂ ಇರುವುವು. ಮಲೆನಾಡ ಜನತೆಗೆ ಅತ್ಯಧಿಕ ಪ್ರಮಾಣದಲ್ಲಿ ಈ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಕಾಸರಗೋಡಿನಿಂದ ಮಲೆನಾಡ ಪ್ರದೇಶಗಳಿಗೆ ರಾತ್ರಿ ಸಂಚಾರ ನಡೆಸುವ ಬಸ್ ಗಳಿವೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಇತರ ಮಂದಿಗೆ ಈ ನಿಟ್ಟಿನಲ್ಲಿ ಈ ಬಸ್ ನಿಲ್ದಾಣ ಸೌಕರ್ಯವಾಗಲಿದೆ.
ವಿಶೇಷತೆ ಗೊತ್ತಾ?:
......................
ಇದು ಪ್ರಕೃತಿ ಸ್ನೇಹಿ ಬಸ್ ನಿಲ್ದಾಣ:
ನಿರ್ಮಾಣಗೊಳ್ಳಲಿರುವ ನೂತನ ಬಸ್ ನಿಲ್ದಾಣ ಪೂರ್ಣರೂಪದ ಪ್ರಕೃತಿ ಸ್ನೇಹಿ ಸಮುಚ್ಚಯವಾಗಲಿದೆ ಎಂದು ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ. ಜಯರಾಜನ್ ಅಭಿಪ್ರಾಯಪಟ್ಟಿದ್ದಾರೆ. ಹಸುರು ಸಂಹಿತೆ ಪೂರ್ಣ ಪ್ರಮಾಣದಲ್ಲಿ ಪಾಲಿಸಲಾಗುವುದು. ಕಾಞಂಗಾಡಿನ ದಾಮೋದರ್ ಅಸೊಸಿಯೇಟ್ ಸಂಸ್ಥೆಗೆ ಬಸ್ ನಿಲ್ದಾಣ ಸಂಕೀರ್ಣದ ಮುಂದಿನ ಹಂತದ ನಕಾಶೆ ತಯಾರಿಯ ಹೊಣೆ ನೀಡಲಾಗಿದೆ. ಕೇರಳ ಅರ್ಬನ್ ಆಂಡ್ರೂರಲ್ ಡೆವೆಲಪ್ ಮೆಂಟ್ ಫಿನಾನ್ಸ್ ಕಾರ್ಪರೇಷನ್ ಸಂಸ್ಥೆಯಿಂದ ಸಾಲ ಪಡೆಯಲಾಗುವುದು. ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಪ್ರದೇಶದ ಮಣ್ಣು ತಪಾಸಣೆ ಇತ್ಯಾದಿ ಈಗಾಗಲೇ ನಡೆಸಲಾಗಿದೆ ಎಂದವರು ನುಡಿದರು.


