ಕಾಸರಗೋಡು: ಚೆಂಗಳ ಗ್ರಾಮಪಂಚಾಯತ್ ನ ಆಲಂಪಾಡಿಯ ಮಧುವಾಹಿನಿ ನದಿಯ ಶುಚೀಕರಣ ನಡೆಯಿತು.
ಹರಿತ ಕೇರಳಂ ಮಿಷನ್ ನ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಜಲಾಶಯಗಳ ಶುಚೀಕರಣ ಯೋಜನೆ "ಇನ್ನು ನಾ ಹರಿಯಲೇ..?"ಯ ಅಂಗವಾಗಿ ಈ ಕಾಯಕ ಜರುಗಿತು.
ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಉದ್ಘಾಟಿಸಿದರು. ಕೃಷಿ ಅಗತ್ಯಕ್ಕೆ ಈ ನದಿಯನ್ನು ಸಾರ್ವಜನಿಕರು ಬಳಸುತ್ತಿರುವ ಹಿನ್ನೆಲೆಯಲ್ಲಿ ಭದ್ರವಾದ ಪಾಶ್ರ್ವ ಭಿತ್ತಿ ನಿರ್ಮಿಸಲಾಯಿತು. ಎಡನೀರು ಕೆಮ್ಮಯದಲ್ಲೂ ಪಾಶ್ರ್ವಭಿತ್ತಿ ನಿರ್ಮಾಣ ಮಾಡಲಾಯಿತು. ಉಪಾಧ್ಯಕ್ಷೆ ಶಾಂತಾ ಕುಮಾರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಹಾಜಿರಾ ಮಹಮ್ಮದ್ ಕುಂಞÂ್ಞ, ಹರಿತ ಕೇರಳಂ ಮಿಷನಿನ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ವಾರ್ಡ್ ಸದಸ್ಯರಾದ ಮಮ್ಮುಂಞÂ, ಅಬ್ದುಲ್ ಸಲಾಂ ಪಾಣಲಂ, ಮಹಮ್ಮದ್ ತೈವಳಪ್, ಎನ್.ಎ.ತಾಹಿರ್, ಸಿ.ಎ.ಫೈಝಲ್, ಸಫಿಯಾ, ನಾಸರ್ ಕಾಟುಕೊಚ್ಚಿ, ಕುಟುಂಬಶ್ರೀ ಸದಸ್ಯರು, ರಾಷ್ಟ್ರೀಯ ನೌಕರಿ ಖಾತರಿ ಯೋಜನೆ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಜಮಾ-ಅತ್ ಸಮಿತಿ ಸದಸ್ಯರು, ಸಾರ್ವಜನಿಕರು ಸೇರಿದಂತೆ ಸುಮಾರು 300 ಮಂದಿ ಶುಚೀಕರಣ ನಡೆಸಿದರು.


