HEALTH TIPS

ಹಾಲು ಉತ್ಪಾದಕರ ಜಿಲ್ಲಾ ಮಟ್ಟದ ಸಂಗಮ ಸಮಾರೋಪ- ಕಲ್ಯಾಣ ಪಿಂಚಣಿ ನಿಷೇಧವಿಲ ್ಲ: ಸಚಿವ ರಾಜು


         ಕಾಸರಗೋಡು: ಇತರ ಕಲ್ಯಾಣ ಪಿಂಚಣಿ ದೊರೆಯುತ್ತಿದೆ ಎಂಬ ಕಾರಣದಿಂದ ಯಾರಿಗೂ ಹಾಲು ಅಭಿವೃದ್ಧಿ ಇಲಾಖೆಯ ಕಲ್ಯಾಣ ಪಿಂಚಣಿಯನ್ನು ನಿಷೇಧಿಸುವುದಿಲ್ಲ ಎಂದು ಹಾಲು ಅಭಿವೃದ್ಧಿ ಇಲಾಖೆ ಸಚಿವ ನ್ಯಾಯವಾದಿ ಕೆ.ರಾಜು ಭರವಸೆ ನೀಡಿದರು.
         ಹಾಲು ಅಭಿವೃದ್ಧಿ ಇಲಾಖೆ, ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಜಂಟಿ ವತಿಯಿಂದ, ಚಿತ್ತಾರಿ ಸಹಕರಿ ಸಂಘದ ನೇತೃತ್ವದಲ್ಲಿ, ತ್ರಿಸ್ತರ ಪಂಚಾಯತ್‍ಗಳ, ಮಿಲ್ಮಾ, ಕೇರಳ ಪೀಡ್ಸ್ ಸಂಸ್ಥೆಗಳ ಸಹಕಾರದೊಂದಿಗೆ ರಾವಣೇಶ್ವರಂನಲ್ಲಿ ನಡೆಯುತ್ತಿದ್ದ ಜಿಲ್ಲಾ ಮಟ್ಟದ ಹಾಲು ಉತ್ಪಾದಕರ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
        ಈಗ ಜಿಲ್ಲೆಯಲ್ಲಿ 2384 ಮಂದಿಗೆ ಹಾಲು ಉತ್ಪಾದಕರ ಕಲ್ಯಾಣ ಪಿಂಚಣಿ ಲಭಿಸುತ್ತಿದೆ. ಎಡರಂಗ ಸರಕಾರ ಅಧಿಕಾರಕ್ಕೆ ಬರುವ ವೇಳೆಗೆ ಈ ಪಿಂಚಣಿ 500 ರೂ. ಆಗಿತ್ತು. ಈಗ ಅದು 1200 ರೂ. ಆಗಿ ಹೆಚ್ಚಳಗೊಂಡಿದೆ. ಹಾಲು ಉತ್ಪಾದಕರ ಕುಟುಂಬ ಪಿಂಚಣಿ 150 ರೂ. ಇತ್ತು. ಎರಡು ವಾರಗಳ ಹಿಂದೆ ಅದನ್ನು 550 ರೂ. ಆಗಿ ಹೆಚ್ಚಳಗೊಳಿಸಲಾಗಿದೆ. ರಾಜ್ಯದಲ್ಲಿ 8 ಲಕ್ಷ ಕುಟುಂಬಗಳು ಹಾಲು ಉತ್ಪಾದನೆಯನ್ನು ಆಶ್ರಯಿಸಿ ಬದುಕುತ್ತಿದೆ. ಇದನ್ನು ಗಂಭೀರವಾಗಿ ಪರಿಶೀಲಿಸಿರುವ ಇಲಾಖೆ ಈ ಮಂದಿಯ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಿಬ್ಬಂದಿಗೆ ವೇತನ ಪರಿಷ್ಕರಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.   
      2020 ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಹಾಲು ಉತ್ಪಾದಕರ ಸಂಗಮ ತಿರುವನಂತಪುರಂನಲ್ಲಿ ನಡೆಯಲಿದೆ. ಈ ವೇಳೆ ಹಾಲು ಉತ್ಪಾದನೆ ವಲಯದಲ್ಲಿ ರಾಜ್ಯ ಸ್ವಾವಲಂಬಿಯಾಗಿದೆ ಎಂಬ ಘೋಷಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಚಿತ್ತಾರಿ ಹಾಲು ಉತ್ಪಾದಕರ ಸಂಘದ ಕಿಡಾರಿ ಪಾರ್ಕ್ ಉದ್ಘಾಟನೆಯನ್ನೂ ಸಚಿವ ರಾಜು ನೆರವೇರಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
    ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ವಿವಿಧ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಎಂ.ಗೌರಿ, ಪಿ.ರಾಜನ್, ಓಮನಾ ರಾಮಚಂದ್ರನ್, ಮಹಮ್ಮದ್ ಕುಂಞÂ ಚಾಯಿಂಡಡಿ, ಉಪಾಧ್ಯಕ್ಷರಾದ ನಾರಾಯಣನ್ ಮಾಸ್ಟರ್, ಕರುಣಾಕರನ್ ಕುನ್ನತ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ.ಇಂದಿರಾ, ಶಾರದಾ ಎಸ್.ನಾಯರ್, ಪಶುಸಂಗೋಪನೆ ಇಲಾಖೆ ನಿರ್ದೇಶಕ ಡಾ.ಟಿ.ಜಿ.ಉಣ್ಣಿಕೃಷ್ಣನ್, ಕಾಸರಗೋಡು ಹಾಲು ಅಭಿವೃದ್ಧಿ ಇಲಾಖೆ ವಲಯ ಪ್ರಯೋಗಾಲಯ ಸಹಾಯಕ ನಿರ್ದೇಶಕ ಜಾರ್ಜ್, ವಿವಿಧ ಹಾಲು ಉತ್ಪಾದಕರ ಸಂಘಗಳ ಪ್ರತಿನಿ„ಗಳು, ರಾಜಕೀಯ ಪಕ್ಷಗಳ ಪ್ರತಿನಿ„ಗಳು ಉಪಸ್ಥಿತರಿದ್ದರು.
     ಕಾರ್ಯಕ್ರಮ ಸಂಘಟಕ ಸಮಿತಿ ಅಧ್ಯಕ್ಷ ಕೆ.ವಿ.ಕೃಷ್ಣನ್ ಸ್ವಾಗತಿಸಿದರು. ಹಾಲು ಅಭಿವೃದ್ಧಿ ಇಲಾಖೆಯ ನಿರ್ದೇಶಕ ಎಸ್.ಶ್ರೀಕುಮಾರ್ ವರದಿ ವಾಚಿಸಿದರು. ಇಲಾಖೆಯ ಗುಣಮಟ್ಟ ನಿಯಂತ್ರಣಾಧಿಕಾರಿ ಎಸ್.ಮಹೇಶ್ ನಾರಾಯಣನ್ ವಂದಿಸಿದರು.
      ಆರ್.ಸಿ.ಇ.ಪಿ ಕರಾರಿಗೆ ದೇಶ ಸಹಿ ಹಾಕಕೂಡದು : ವಲಯ ಸಮಗ್ರ ಆರ್ಥಿಕ ಸಹಭಾಗಿತ್ವ ಕರಾರಿನಲ್ಲಿ (ಆರ್.ಸಿ.ಇ.ಪಿ.ಯಲ್ಲಿ) ಭಾರತ ಸಹಿ ಹಾಕಕೂಡದು ಎಂದು ಸಚಿವ ಈ ಸಂದರ್ಭ ಆಗ್ರಹಿಸಿದರು. ರಾಜ್ಯ ವಿಧಾನಸಭೆ ಈ ಸಂಬಂಧ ಏಕಕಂಠದಿಂದ ಮಸೂದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ದೇಶ ತಾತ್ಕಾಲಿಕವಾಗಿ ಈ ಕರಾರಿಗೆ ಸಹಿ ಹಾಕದೇ ಉಳಿದಿದೆ. ಆದರೆ ಮುಂದೆ ಯಾವುದೇ ಕಾರಣದಿಂದ ಸಹಿ ಹಾಕಿದಲ್ಲಿ ಹಾಲು ಉತ್ಪಾದನೆ ವಲಯವನ್ನು ಈ ಕರಾರಿನಿಂದ ಹೊರತುಪಡಿಸಬೇಕು ಎಂದು ಅವರು ಬಯಕೆ ಮುಂದಿರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries