ಕಾಸರಗೋಡು: ಪ್ರತ್ಯೇಕ ಮತದಾತರ ಪಟ್ಟಿ ನವೀಕರಣ ಅಂಗವಾಗಿ ಕರಡು ಮತದಾತರ ಪಟ್ಟಿ ಪ್ರಕಟಿಸಲಾಗಿದೆ. ಅರ್ಜಿ ಯಾ ಆಕ್ಷೇಪಗಳಿದ್ದಲ್ಲಿ 2020 ಜ.15 ವರೆಗೆ ಡಿಡಿಡಿ.್ಞqom.ಜ್ಞಿ ಎಂಬ ವೆಬ್‍ಸೈಟ್ ಮೂಲಕ ಸಲ್ಲಿಸಬಹುದು.
2020 ವರ್ಷದ ಪ್ರತ್ಯೇಕ ಮತದಾತರ ಪಟ್ಟಿ ನವೀಕರಣ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮತ್ತು ಚುನಾವಣೆ ಸಿಬ್ಬಂದಿಯ ಸಭೆ ಜಿಲ್ಲಾ„ಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಮತಗಟ್ಟೆ ಮಟ್ಟದ ಏಜೆಂಟರ ಹೆಸರು, ಮಾಹಿತಿಗಳನ್ನು ತುರ್ತಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಮತ್ತು ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮತದಾತರಿರುವ ಮತಗಟ್ಟೆ ಗಳಲ್ಲಿ ಸುಗಮ ರೀತಿಯ ಚುನಾವಣೆ ಕ್ರಮಗಳು ನಡೆಸುವ ನಿಟ್ಟಿನಲ್ಲಿ ಪ್ರತಿ ಪ್ರದೇಶದಲ್ಲಿ ಸೌಲಭ್ಯಗಳಿರುವ ಕಟ್ಟಡಗಳನ್ನು ಮತಗಟ್ಟೆಗಳಾಗಿಸುವ ಸಲಹೆ ನೀಡುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ವಿನಂತಿಸಿದರು. 2020 ಜ.7ರಂದು ಅಂತಿಮ ಮತದಾತರ ಪಟ್ಟಿ ಪ್ರಕಟಿಸುವುದಾಗಿ ಅವರು ಹೇಳಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ„ಗಳಾದ ಸಿ.ಎಚ್.ಕುಂಞಂಬು, ಎಂ.ಕುಂಞಂಬು ನಂಬ್ಯಾರ್, ಮೂಸಾ ಬಿ.ಚೆರ್ಕಳ, ಬಿಜು ಉಣ್ಣಿತ್ತಾನ್, ಚುನಾವಣೆ ವಿಭಾಗ ಸಹಾಯ ಜಿಲ್ಲಾ„ಕಾರಿ ಎ.ಕೆ.ರಮೇಂದ್ರನ್, ಕಾಸರಗೋಡು ತಹಸೀಲ್ದಾರ್ ಎನ್.ರಾಜನ್, ಮಂಜೇಶ್ವರ ತಹಸೀಲ್ದಾರ್ ಪಿ.ಜೆ.ಪಿಂಟೋ, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್ ಮೊದಲಾದವರು ಉಪಸ್ಥಿತರಿದ್ದರು.

