HEALTH TIPS

ನೂತನ ವರ್ಷಾಚರಣೆ : ಸೌಂದರ್ಯ ಹೆಚ್ಚಿಸಿಕೊಳ್ಳಲಿರುವ ಕಾಸರಗೋಡು ಸಿವಿಲ್ ಸ್ಟೇಷನ್


          ಕಾಸರಗೋಡು: ನೂತನ ವರ್ಷವನ್ನು ಸ್ವಾಗತಿಸಲು ವಿದ್ಯಾನಗರದ ಕಾಸರಗೋಡು ಸಿವಿಲ್ ಸ್ಟೇಷನ್ ಭೌತಿಕ ಸೌಂದರ್ಯ ಹೆಚ್ಚಿಸಿಕೊಳ್ಳಲಿದೆ.
        ಇದರ ಅಂಗವಾಗಿ ಸಿವಿಲ್ ಸ್ಟೇಷನ್ ಆವರಣವನ್ನು ಶುಚೀಕರಿಸಲು ಎಲ್ಲ ಇಲಾಖೆ ಕಚೇರಿಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಡಿ.30ರಂದು ಮಧ್ಯಾಹ್ನ 2 ಗಂಟೆಗೆ ಈ ಶುಚೀಕರಣದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೆರವೇರಿಸುವರು. ಎಲ್ಲ ಇಲಾಖೆಗಳ ಸಿಬ್ಬಂದಿ ಶುಚೀಕರಣದಲ್ಲಿ ಭಾಗವಹಿಸುವರು.
       ಕಚೇರಿಗಳನ್ನು ಪೈಂಟಿಂಗ್ ನಡೆಸಲೂ ತೀರ್ಮಾನಿಸಲಾಗಿದೆ. ಸಿವಿಲ್ ಸ್ಟೇಷನ್‍ನ ಎಲ್ಲ ಶೌಚಾಲಯಗಳನ್ನು ಶುಚೀಕರಿಸಲು ಕುಟುಂಬಶ್ರೀಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಹೆಚ್ಚುವರಿ ಮಹಿಳಾ ನೌಕರರನ್ನು ನೇಮಿಸಲಾಗುವುದು. ಇವರ ಪ್ರತಿಫಲವನ್ನು ಆಯಾ ಕಚೇರಿಗಳಿಂದ ಒದಗಿಸಲಾಗುವುದು. ಮಹಿಳೆಯರ ಶೌಚಾಲಯಗಳಲ್ಲಿ ನ್ಯಾಪ್ಕಿನ್ ಇನ್ಸಿಲೇಟರ್ ಸ್ಥಾಪಿಸಲಾಗುವುದು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕ್ಲೀನ್ ಕೇರಳ ಕಂಪೆನಿ ಸಂಗ್ರಹಿಸಿ ರವಾನಿಸಲಿದೆ.
       ಜಿಲ್ಲಾ ಶುಚಿತ್ವ ಮಿಷನ್ ವತಿಯಿಂದ ತುಂಬೂರ್ ಮುಳಿ ಮಾದರಿಯ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಏರ್ಪಡಿಸಲಾಗುವುದು. ಸಂಪೂರ್ಣ ಶುಚಿತ್ವ ಚಟುವಟಿಕೆಗಳಲ್ಲಿ ಎಲ್ಲ ಸಿಬ್ಬಂದಿ ಭಾಗವಹಿಸುವಂತೆ ಜಿಲ್ಲಾ„ಕಾರಿ ಆದೇಶಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries