ಕಾಸರಗೋಡು: ಜಿಲ್ಲಾ ಪಂಚಾಯತ್‍ನ ಕೊರಗ ಕಾಲನಿ ಸಮಗ್ರ ಅಭಿವೃದ್ಧಿ ಯೋಜನೆಯಂಗವಾಗಿ ಎಲ್ಲಾ ಕೊರಗ ಕುಟುಂಬಗಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸಲಾಯಿತು. ಜಿಲ್ಲೆಯ 545 ಕುಟುಂಬಗಳಿಗೆ ಕಿಟ್ ನೀಡಲಾಯಿತು.
ಯೋಜನೆಯ ಅಂಗವಾಗಿ ಕೊರಗ ಕಾಲನಿಗಳ ಸಮಗ್ರ ಅಭಿವೃದ್ಧಿ ಗುರಿಯಾಗಿಸಿ ವಿವಿಧ ಯೋಜನೆಗಳನ್ನು ಸಾಕಾರಗೊಳಿಸಲಾಗುವುದು. ಪ್ರಸ್ತುತ ಹಣಕಾಸು ವರ್ಷದಲ್ಲಿ 15 ಲಕ್ಷ ರೂ. ಕಾದಿರಿಸಲಾಗಿದೆ. ಈ ಪೈಕಿ ಐದು ಲಕ್ಷ ರೂಪಾಯಿಯನ್ನು ಪೌಷ್ಠಿಕ ಆಹಾರ ವಿತರಿಸಲು ವೆಚ್ಚ ಮಾಡಲಾಗಿದೆ. ಜಿಲ್ಲೆಯ 14 ಗ್ರಾಮ ಪಂಚಾಯತ್‍ಗಳು ಮತ್ತು ಒಂದು ನಗರಸಭೆಯ 545 ಕುಟುಂಬಗಳಲ್ಲಿನ 1803 ಕೊರಗ ವಿದ್ಯಾರ್ಥಿಗಳಿದ್ದಾರೆ. ಒಂದೊಂದು ಕಿಟ್ 934 ರೂಪಾಯಿಯ ಸಾಮಾಗ್ರಿಗಳನ್ನು ಹೊಂದಿದೆ.
ಜಿಲ್ಲಾ ಪರಿಶಿಷ್ಟ ವರ್ಷ ಅಭಿವೃದ್ಧಿ ಅಧಿಕಾರಿಯ ನಿರ್ವಹಣೆ ಸಿಬ್ಬಂದಿಗಳನ್ನು ಈ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. ವರ್ಕಾಡಿ ಪಂಚಾಯತ್ ಹಾಲ್‍ನಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಕ್ಷೇಮ ಸಮಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದರು. ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ವರ್ಕಾಡಿ ಪಂಚಾಯತ್ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಡಿ.ಸೀತಾ, ಗೋಪಾಲ ಪಜ್ವ, ಜಿಲ್ಲಾ ಪರಿಶಿಷ್ಟ ವರ್ಗ ಅಭಿವೃದ್ಧಿ ಅ„ಕಾರಿ ಪಿ.ಟಿ.ಅನಂತಕೃಷ್ಣನ್, ಎಣ್ಮಕಜೆ ಟ್ರೈಬಲ್ ಎಕ್ಸ್‍ಟೆನ್ಶನ್ ಆಫೀಸರ್ ಕೆ.ಮುಹಮ್ಮದ್ ಶಾಫಿ ಮೊದಲಾದವರು ಮಾತನಾಡಿದರು.

