HEALTH TIPS

ರಾಷ್ಟ್ರೀಯ ತುಳು ವಿಚಾರ ಸಂಕಿರಣ ಸಂಪನ್ನ-ನೂರಾರು ಭಾಷೆಗಳ ಸೇತುವೆ ಬೆಸೆದು ಬೆರೆಯುತ್ತದೆ- ಮಲಾರ್ ಜಯರಾಮ ರೈ-ಸಮಾರೋಪ ಭಾಷಣ


            ಕಾಸರಗೋಡು:: ಆತ್ಮದ ಅಭಿವ್ಯಕ್ತಿಯ ಸ್ವರೂಪವಾದ ಭಾಷೆ ಜನರ ಮಧ್ಯೆ ಬೇಧವನ್ನಲ್ಲ, ಪ್ರೇಮವನ್ನು ಉಂಟುಮಾಡಬೇಕು. ರಾಷ್ಟ್ರದ ವೈವಿಧ್ಯಮಯ ನೂರಾರು ಭಾಷೆಗಳ ಸೇತುವೆಯ ಮೂಲಕ ಪರಸ್ಪರ ಬೆಸೆಯುವ, ಬೆರೆಯುವ ಪ್ರಕ್ರಿಯೆಯೆ ಭಾರತವೆಂಬ ವಿಶಿಷ್ಟ ಪರಿಕಲ್ಪನೆಯಾಗಿದೆ.  ತುಳು ಭಾಷೆ ಕೇವಲ ಒಂದು ಸಂವಹನ ಭಾಷೆಯಾಗಿರದೆ ಅದೊಂದು ವಿಶಾಲ ಸಂಸ್ಕøತಿಯಾಗಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಅವರು ತಿಳಿಸಿದರು.
     ಕೇರಳ ತುಳು ಅಕಾಡೆಮಿಯ ವತಿಯಿಂದ ಕಾಸರಗೋಡಿನ ಲಲಿತ ಕಲಾ ಸದನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ತುಳು ತುಲಿಪು ಸಮಾರಂಭದ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
   ವಿಶಾಲ ಭಾರತದ ಭೌಗೋಳಿಕತೆಯೂ, ಅದರೊಳಗಿನ ತುಳುನಾಡಿನ ಭೌಗೋಳಿಕತೆಗೂ ನಿಕಟ ಸಂಬಂಧವಿದೆ. ರಾಷ್ಟ್ರದ ಉತ್ತರದಲ್ಲಿ ಬೃಹತ್ ಗಿರಿಶೃಂಗಗಳು, ಪಶ್ಚಿಮದಲ್ಲಿ ಮಹಾನ್ ಸಾಗರ, ಬಯಲುಭೂಮಿ, ಗುಡ್ಡಗಾಡುಗಳಂತೆಯೇ ತುಳುನಾಡು ಕೂಡಾ ಸಾಮ್ಯತೆಹೊಂದಿದೆ ಎಂದ ಅವರು ಭಾರತದೊಳಗಿನ ಪುಟ್ಟ ತುಳುನಾಡು ಒಂದು ಭಾರತ ಎಂದು ವಿಶ್ಲೇಶಿಸಿದರು. ಆಧುನಿಕ ಯಾವ ವಿದ್ಯಮಾನಗಳೂ ನೆಲದ ಸಂಸ್ಕøತಿಯನ್ನು ಬುಡಮೇಲುಗೊಳಿಸಬಾರದು. ಹಾಗೊಂದು ಸಂಭವಿಸಿದ್ದೇ ಆದರೆ ಅಧಃಪತನದ ರಹದಾರಿ ತೆರೆದುಕೊಳ್ಳುತ್ತದೆ. ಪ್ರಾಚೀನವಾದ ತುಳುನಾಡಿನ ಜನಜೀವನ, ಸಂಸ್ಕøತಿ, ಸಮೃದ್ದತೆಗಳನ್ನು ಪರಿಪೋಶಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಯಿಂದ ನಾವು ಜಾರಿಕೊಳ್ಳುವುದು ಆತ್ಮವಂಚನೆಯಾಗಿ ಅಪರಾಧವಾಗುವುದು. ಈ ಹಿನ್ನೆಲೆಯಲ್ಲಿ ತುಳುನಾಡಿನ ಪ್ರತಿಯೊಬ್ಬನೂ ಉದಾತ್ತ ಚಿಂತನೆಗಳೊಂದಿಗೆ ನಾಡು-ನುಡಿಯ ಸೇವೆಯಲ್ಲಿ ಕೈಜೋಡಿಸುವುದರೊಂದಿಗೆ ಬದುಕಿನ ಸಾರ್ಥಕ್ಯವನ್ನು ಪಡೆಯಬೇಕು ಎಂದು ಕರೆನೀಡಿದರು. ಕೇರಳ ತುಳು ಅಕಾಡೆಮಿಯು ಮತ್ತೆ ಚೈತನ್ಯಗೊಂಡಿರುವುದು ಗಡಿನಾಡು ಕಾಸರಗೋಡಿನ ಭರವಸೆಯಾಗಿ ಮೂಡಿಬರಲಿ ಎಂದು ಹಾರೈಸಿದರು.
    ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳ ತುಳು ಅಕಾಡೆಮಿ ಇದೀಗ ಪುನಶ್ಚೇತನಗೊಂಡಿದೆ. ಮುಂದಿನ ತಿಂಗಳಲ್ಲಿ ನಿರ್ಮಾಣ ಪೂರ್ತಿಗೊಳ್ಳುತ್ತಿರುವ ತುಳು ಭವನದ ಲೋಕಾರ್ಪಣೆ ನಡೆಯಲಿದೆ. ತನ್ಮೂಲಕ ಹೊಸ ಶಖೆಗೆ ನಾಂದಿಯಾಗಲಿದೆ ಎಂದು ತಿಳಿಸಿದರು.
   ಸಾಹಿತಿ ಪ್ರೊ.ಮಾರುತಿ ಸುಕನ್ಯ, ಮಾಜಿ ಶಾಸಕ ನ್ಯಾಯವಾದಿ. ಸಿ.ಎಚ್.ಕುಞÂ್ಞಂಬು, ಎಣ್ಮಕಜೆ ಗ್ರಾ.ಪಂ.ಸ್ಥಾಯೀ ಸಮಿತಿ ಸದಸ್ಯೆ ಆಯಿಷಾ ಎ.ಎ.ಪೆರ್ಲ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಶಂಕರ ರೈ ಮಾಸ್ತರ್, ನಾರಾಯಣನ್ ಉಪಸ್ಥಿತರಿದ್ದು ಶುಭಹಾರೈಸಿದರು. ವಿಶ್ವನಾಥ ಮಾಸ್ತರ್ ಕುದುರು ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು. ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾವರ ನಿರೂಪಿಸಿದರು. ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಳ, ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಎಸ್,ನಾರಾಯಣ ಭಟ್, ಬಾಲಕೃಷ್ಣ ಶೆಟ್ಟಿಗಾರ್, ಗೀತಾ ವಿ ಸಾಮಾನಿ, ರಾಜೀವಿ ಕಳಿಯೂರು, ಭಾರತಿ ಬಾಬು, ಸಚಿತ ರೈ ಪೆರ್ಲ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries