ಮುಳ್ಳೇರಿಯ: ಧಾರ್ಮಿಕ ಪ್ರಜ್ಞೆ ಮಾತಿನಲ್ಲಿ ಮಾತ್ರವಾಗುತ್ತಿದೆ, ಕ್ರಿಯೆಯಲ್ಲಿ ನಡೆಯುತ್ತಿಲ್ಲ. ನಾವು ನಮ್ಮನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವು ತೊಡಿಸಿಕೊಳ್ಳಬೇಕು; ಯುವಶಕ್ತಿ ಮುಂದೆ ಬರಬೇಕು. ಶಬರಿಮಲೆ ಸ್ತ್ರೀ ಪ್ರವೇಶ ವಿಷಯವು ರಾಜಕೀಯ ಪ್ರೇರಿತವಾಗುತ್ತಿದೆ ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹೇಳಿದ್ದಾರೆ.
ಅವರು ಕುಂಟಾರು ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯುತ್ತಿರುವ 9ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಗಳ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಂದಿರ ಸಮಿತಿ ಅಧ್ಯಕ್ಷ ಸುಧೀಶ್.ಕೆ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಪುತ್ತೂರು ಧಾರ್ಮಿಕ ಭಾಷಣಗೈದು, ಮಮಕಾರ ಭಾವ ನಮ್ಮದಾಗಬೇಕು. ಅಹಂಕಾರ ಇದ್ದಲ್ಲಿ ಭಕ್ತಿಯಿರುವುದಿಲ್ಲ. ಅದು ನಾಟಕವಾಗುತ್ತದೆ. ಇನ್ನೊಬ್ಬರ ಸುಖಃ-ದುಖಃಗಳಲ್ಲಿ ಸಮಭಾವವಿರಬೇಕು. ಜೀವನದಲ್ಲಿ ಬೇಡದ ಚಟವನ್ನು ಬಿಟ್ಟು ಒಳ್ಳೆಯ ಚಟವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕುಂಟಾರು ಅಯ್ಯಪ್ಪ ಭಜನಾ ಮಂದಿರದ ಯಾದವ ಗುರುಸ್ವಾಮಿ, ಶಕ್ತಿನಗರ ಭಜನಾ ಮಂದಿರದ ಶಶಿಧರ.ಕೆ.ವಿ. ಗುರುಸ್ವಾಮಿ, ಎಂ.ಸಿ.ನಾಯರ್ ಗುರುಸ್ವಾಮಿ, ಪಾಡಿಯ ಕೃಷ್ಣನ್ ಗುರುಸ್ವಾಮಿ ಉಪಸ್ಥಿತರಿದ್ದರು.
ರಾಜೇಶ್.ಎಚ್ ಸ್ವಾಗತಿಸಿ, ಮಂದಿರ ಸಮಿತಿ ಕೋಶಾಧಿಕಾರಿ ಚಂದ್ರಶೇಖರ ವಂದಿಸಿದರು. ಪ್ರಕಾಶ್ ಮಾಸ್ತರ್ ಮತ್ತು ಯತೀಶ್ ಕಾರ್ಯಕ್ರಮ ನಿರೂಪಿಸಿದರು.


