ಕಾಸರಗೋಡು: ನಾಳೆಯ ಕೇರಳ ಮಾದಕ ವಸ್ತು ಮುಕ್ತ ನವ ಕೇರಳ ಎಂಬ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾದಕ ಮುಕ್ತ ಸಮಿತಿಗಳನ್ನು ರಚಿಸಲಾಗುವುದು. ಆ ಮೂಲಕ ಎಲ್ಲಾ ಕಚೇರಿಗಳಲ್ಲಿ ಮಾದಕ ವಸ್ತು ವಿರೋಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
2020 ರ ಜ.30 ರ ತನಕ ಅಬಕಾರಿ ಇಲಾಖೆ ಹಾಗು ವಿಮುಕ್ತಿ ಮಾದಕ ವಸ್ತು ವರ್ಜನ ಮಿಷನ್ ಆಶ್ರಯದಲ್ಲಿ ನಾಳೆಯ ಕೇರಳ ಮಾದಕವಸ್ತು ಮುಕ್ತ ನವ ಕೇರಳ ಎಂಬ ಸಂದೇಶದೊಂದಿಗೆ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ರೆಸಿಡೆನ್ಸ್ ಅಸೋಸಿಯೇಶನ್, ವಿದ್ಯಾರ್ಥಿಗಳು, ಅಧ್ಯಾಪಕರ ಸಹಾಯದೊಂದಿಗೆ ಎಲ್ಲಾ ಮನೆಗಳಲ್ಲಿ ಮಾದಕ ವಸ್ತು ವಿರುದ್ಧ ಸಂದೇಶ ತಲುಪಿಸುವುದು ಮೊದಲಾದವುಗಳ ಬಗ್ಗೆ ತೀರ್ಮಾನಿಸಲಾಯಿತು.
ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನಪರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರೆಸಿಡೆನ್ಸ್ ಅಸೋಸಿಯೇಶನ್ ಸಹಾಯದೊಂದಿಗೆ ಮಾದಕ ವಸ್ತು ವಿರೋಧಿಯಂಗವಾಗಿ ಜಿಲ್ಲೆಯಾದ್ಯಂತ ದೀಪ ಬೆಳಗಿಸಿ ಕಾರ್ಯಕ್ರಮ ನಡೆಯಲಿದೆ.
ತಿಳುವಳಿಕೆ ಕಾರ್ಯಕ್ರಮದಂಗವಾಗಿ ವಿಮುಕ್ತಿ ಮಿಷನ್‍ನ ಸಂಚರಿಸುವ ಮೊಬೈಲ್ ಯೂನಿಟ್‍ನ ಪರ್ಯಟನೆಯು ಜ.15 ರಂದು ಜಿಲ್ಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಜ.14 ರಂದು ಜಿಲ್ಲೆಗೆ ಆಗಮಿಸುವ ಸಂಚಾರಿ ವಾಹನಕ್ಕೆ ಸ್ವಾಗತ ನೀಡಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಆಯ್ಕೆ ಮಾಡಿದ ಕೇಂದ್ರಗಳಲ್ಲಿ ಮೊಬೈಲ್ ಯೂನಿಟ್ ಪರ್ಯಟನೆ ನಡೆಸಲಿದೆ.
ಕಲೆಕ್ಟರೇಟ್ ಕಾನರೆನ್ಸ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅಬಕಾರಿ ಉಪ ಆಯುಕ್ತ ಮ್ಯಾಥ್ಯೂ ಕುರಿಯನ್ ಅಧ್ಯಕ್ಷತೆ ವಹಿಸಿದರು. ನೀಲೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ವಿ.ಪಿ.ಜಾನಕಿ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಮೀಲಾ ಸಿದ್ದಿಕ್, ಗ್ರಾಮ ಪಂಚಾಯತಿ ಸ್ಧಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಮುಸ್ತಫ, ಪಂಚಾಯತಿ ಸದಸ್ಯರಾದ ಆಯಿಷತ್ ಫರೀಸಾ, ಸುಜಾತ ಶೆಟ್ಟಿ, ಆಯಿಷಾಬಿ, ರಫಿಕ್, ಮಂಜುನಾಥ ಪ್ರಸಾದ್, ಮುಹಮ್ಮದ್, ವಿಮುಕ್ತಿ ಮಿಷನ್ ಜಿಲ್ಲಾ ಪ್ರಬಂಧಕ ಟಿ.ಕೆ.ಅಶ್ರಫ್, ಅಬಕಾರಿ ಇಲಾಖೆ ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಟಿ.ಮಧುಸೂದನ್, ಪಿ.ಪಿ.ಜನಾರ್ಧನ್, ಎಂ.ವಿಜಯನ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ರಾಜನ್ ಮೊದಲಾದವರು ಉಪಸ್ಥಿತರಿದ್ದರು.
ಕ್ರಿಸ್‍ಮಸ್, ಹೊಸ ವರ್ಷ ಆಚರಣೆಯಂಗವಾಗಿ ಜಿಲ್ಲೆಗೆ ಅಕ್ರಮ ಮದ್ಯ ಕಳ್ಳಸಾಗಾಟ ಮತ್ತು ವಿತರಣೆ ತಡೆಯುವುದಕ್ಕಾಗಿ ಅಬಕಾರಿ ಇಲಾಖೆಯ ಆಶ್ರಯದಲ್ಲಿ ಚೆಕ್‍ಪೆÇೀಸ್ಟ್‍ಗಳಲ್ಲಿ ತಪಾಸಣೆ ನಡೆಯಲಿದೆ.

