HEALTH TIPS

ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಭೂಕಂಪ; ದೆಹಲಿಯಲ್ಲಿ ಕಂಪನದ ಅನುಭವ

 
          ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ  ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದೆ.
        ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಶುಕ್ರವಾರ ಸಂಜೆ 6.3 ತೀವ್ರತೆಯ ಭೂಕಂಪವಾಗಿದ್ದು ಇದರ ಪರಿಣಾಮ ಭಾರತದಲ್ಲೂ ಕಂಪನದ ಅನುಭವವಾಗಿದೆ.
  ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಸಂಜೆ 5.09 ರ ಸುಮಾರಿಗೆ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟಿದ್ದು 190 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.ಯಾವುದೇ ಸಾವು  ನೋವಿನ ವರದಿ ಲಭ್ಯವಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries