ಕಾಸರಗೋಡು: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾತ್ಮಕ ಘಟನೆಗಳು ರಾಜಕೀಯ ಲಾಭಗಳಿಸುವ ಉದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕೈಜೋಡಿಸುವ ರಾಜಕೀಯ ಪಕ್ಷಗಳ ಷಡ್ಯಂತ್ರವನ್ನು ಪರಾಭವಗೊಳಿಸಬೇಕು. ಅದಕ್ಕಾಗಿ ದೇಶ ಸ್ನೇಹಿಗಳು ಒಗ್ಗೂಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕಾಗಿದೆ ಎಂದರು. ಉತ್ತಮ ಕವಿಯಾಗಿದ್ದ ಅವರ ಎಲ್ಲಾ ಕವಿತೆಗಳಲ್ಲಿ ರಾಷ್ಟ್ರದ ಬಗೆಗಿನ ಚಿಂತನೆಗಳೇ ಇದೆ. ಇದು ಎಲ್ಲಾರಿಗೂ ಮಾದರಿಯಾಗಬೇಕು ಎಂದು ಶ್ರೀಕಾಂತ್ ಹೇಳಿದರು. ಇಂದಿರಾಗಾಂ„ ಪ್ರಧಾನಿಯಾಗಿದ್ದಾಗ ಪಾಕಿಸ್ತಾನವನ್ನು ಎದುರಿಸುತ್ತಿದ್ದಾಗ ರಾಷ್ಟ್ರದ ಹಿತ ಚಿಂತನೆ ಮೊದಲು, ಆ ಬಳಿಕವೇ ರಾಜಕೀಯ ಎಂಬ ಸಂದೇಶವನ್ನು ಸಾರಿದ ಅಟಲ್ ಬಿಹಾರಿ ವಾಜಪೇಯಿಯವರು ಆದರ್ಶವಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೆಂಜಿಲ್ ಕುಂಞÂರಾಮನ್, ಸತ್ಯಶಂಕರ ಭಟ್, ಸವಿತಾ ಟೀಚರ್ ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು.


