ಕಾಸರಗೋಡು: ಕಾಸರಗೋಡು ನಗರಸಭೆಯ ಮಾಜಿ ಅಧ್ಯಕ್ಷರೂ, ನ್ಯಾಯವಾದಿಯೂ ಆಗಿರುವ ಎಸ್.ಜೆ.ಪ್ರಸಾದ್ ಕಾಸರಗೋಡು ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಹಕಾರಿ ಬ್ಯಾಂಕ್‍ನ ನಿವೃತ್ತ ಪ್ರಬಂಧಕ ಪಿ.ದಾಮೋದರನ್ ಉಪಾಧ್ಯಕ್ಷರಾಗಿ ಹಾಗು ಸಹಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಬಾಲಚಂದ್ರನ್, ನಾರಾಯಣ ಪೂಜಾರಿ, ಟಿ.ಎಂ.ಅಬ್ದುಲ್ ರಹಿಮಾನ್, ಕೆ.ಪ್ರಭಾಕರನ್, ಎ.ಹರಿಶ್ಚಂದ್ರನ್, ಕೆ.ಸುಮತಿ, ಕೆ.ಕಮಲಾಕ್ಷಿ, ಎ.ಪದ್ಮಾವತಿ, ಎ.ಸತ್ಯವತಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


