HEALTH TIPS

ಯಕ್ಷಗಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಕರ್ನಾಟಕ ಸಂಸ್ಕøತಿ ಸಚಿವ-ಟ್ವೀಟ್ ಮಾಡಿ ಗಮನ ಸೆಳೆದ ಸಚಿವ ಸಿಟಿ

   
      ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನವನ್ನು ಇನ್ನು ಮುಂದೆ ಮೊಬೈಲ್ ಕಂಪ್ಯೂಟರಿನಲ್ಲಿ ಸುಲಭವಾಗಿ ನೋಡಬಹುದಾಗಿದೆ.
         ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಘೋಷಿಸಿದ್ದಾರೆ. 'ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಇಲಾಖೆ ವತಿಯಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ' ಎಂದು ತಮ್ಮ ಟ್ವೀಟ್ಟರ್‍ನಲ್ಲಿ ಮಾಹಿತಿ ನೀಡಿದ್ದಾರೆ. ಈ ಹೊಸ ಯೋಜನೆಗೆ ಬೆಂಗಳೂರಿನಲ್ಲಿ ನಿನ್ನೆ ಅವರು ಚಾಲನೆ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಯಕ್ಷವಾಹಿನಿ ಸಂಸ್ಥೆಗಳು ಯೋಜನೆಗೆ ಕೈ ಜೋಡಿಸಿವೆ. ಈ ಯೋಜನೆಯಿಂದ ಆಸಕ್ತರು ಯಕ್ಷಗಾನದ ಪ್ರಸಂಗಗಳನ್ನು ಉತ್ತಮ ಗುಣಮಟ್ಟದ ವಿಡಿಯೋಗಳಲ್ಲಿ ನೋಡಬಹುದಾಗಿದೆ.
       'ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಮೂಲಕ ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಬರಲಿದ್ದು, ಇದು ಒಂದು ಸಾಧನೆ ಎಂದು ಭಾವಿಸಿದ್ದೇನೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಮಾತನ್ನು ನಾನು ಒಪ್ಪುತ್ತೇನೆ' ಎಂದು ಸಚಿವ ಸಿ ಟಿ ರವಿ ಅವರು ಟ್ವೀಟ್ ಮಾಡಿದ್ದಾರೆ.

Thread

Conversation

ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಮಾತಿಗೆ ತಕ್ಕಂತೆ ನನ್ನ ಇಲಾಖೆಯ ಕರ್ನಾಟಕ ಯಕ್ಷಗಾನ ಅಕ್ಯಾಡೆಮಿ ಮತ್ತು ಯಕ್ಷವಾಹಿನಿ (ರಿ), ಬೆಂಗಳೂರು, ಇವರ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಯೋಜನೆಯನ್ನು ಉದ್ಘಾಟಿಸಿದ್ದೇನೆ.
11:35 PM · Dec 26, 2019Twitter for Android
Replying to
ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಮೂಲಕ ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಬರಲಿದ್ದು, ಇದು ಒಂದು ಸಾಧನೆ ಎಂದು ಭಾವಿಸಿದ್ದೇನೆ. ನನ್ನೊಂದಿಗೆ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎಸ್. ಹೆಗಡೆ ಮತ್ತು ಇತರರು ಉಪಸ್ಥಿತರಿದ್ದು ಉದ್ಘಾಟನೆ ನಂತರ ಪಂಚ ಪಾವನ ಕಥಾ ಎಂಬ ಯಕ್ಷರೂಪಕವನ್ನು ವೀಕ್ಷಣೆ ಮಾಡಿದ್ದೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries