ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್) 2020ರ ಏಪ್ರಿಲ್‍ನಿಂದ ಆರಂಭವಾಗಲಿದೆ. ಜನಸಂಖ್ಯಾ ನೋಂದಣಿಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕವೂ ಮಾಡಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- ಮೊದಲು ಪ್ಲೇ ಸ್ಟೋರ್‍ನಲ್ಲಿ 'ಎನ್‍ಪಿಆರ್ 2021' ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಲಭ್ಯವಿದೆ. - 'ಯೂಸರ್ ಐಡಿ' 'ಪಾಸ್‍ವರ್ಡ್' ಕ್ರಿಯೇಟ್ ಮಾಡಿ ಲಾಗ್‍ಇನ್ ಆಗಬೇಕು. -'EB ಅಲೋಟೆಡ್ ಡೌನ್‍ಲೋಡ್: ಡೌನ್‍ಲೋಡ್ ಮಾಡುವ ಮುನ್ನ 'EB' ಕೆಂಪು ಬಣ್ಣದಲ್ಲಿರುತ್ತದೆ. ಡೌನ್‍ಲೋಡ್ ಮಾಡಿದ ಬಳಿಕ ಹಸಿರು ಬಣ್ಣಕ್ಕೆ ತಿರುಗುತ್ತದೆ. ಡೌನ್‍ಲೋಡ್ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
-ಲೊಕೇಷನ್ ಪರ್ಟಿಕ್ಯುಲರ್ಸ್: ಇದರಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ನಗರ, ವಾರ್ಡ್, ಬ್ಲಾಕ್, ಪಿನ್‍ಕೋಡ್ ದಾಖಲಿಸಬೇಕು.
-ಪೆÇ್ರಗ್ರೆಸ್: ಈ ಸ್ಕ್ರೀನ್‍ನಲ್ಲಿ 'ಹೌಸ್‍ಹೋಲ್ಡ್' ಮತ್ತು 'ಮೆಂಬರ್ ರೆಕಾರ್ಡ್' ಕಾಣಬಹುದಾಗಿದೆ. ಜೊತೆಗೆ ಹಿಂದಿನ ಸ್ಕ್ರೀನ್‍ಗೆ ಹೋಗಬೇಕಿದ್ದರೆ ಬ್ಯಾಕ್ ಬಟನ್ ಪ್ರೆಸ್ ಮಾಡಬೇಕು.
-ಅಪ್‍ಲೋಡ್ ಡಾಟಾ: ಡಾಟಾ ಕಂಪ್ಲೀಟ್ ಆದ ಬಳಿಕ ಅಪ್‍ಲೋಡ್ ಇಮೇಜ್ ಕ್ಲಿಕ್ ಮಾಡಬೇಕು. -ಇನ್‍ಕಂಪ್ಲೀಟ್ ಹೌಸ್‍ಹೋಲ್ಡ್: ಒಂದೊಮ್ಮೆ ಹೌಸ್‍ಹೋಲ್ಡ್ (ಮನೆ, ವಿಳಾಸ) ಬಗ್ಗೆ ಮಾಹಿತಿ ಅಪೂರ್ಣವಿದ್ದರೆ, ಅಪ್ಲಿಕೇಷನ್ ಸ್ಕ್ರೀನ್ ಅಲ್ಲಿ ಹೌಸ್‍ಹೋಲ್ಡ್ ಅಪ್‍ಡೇಟ್ ಪೆಂಡಿಂಗ್ ಎಂದು ಕಾಣಿಸುತ್ತದೆ.
- ಹೋಮ್‍ಸ್ಕ್ರೀನ್: ಲೊಕೇಷನ್ ಪರ್ಟಿಕಲ್ಯುಲರ್ ಮತ್ತು ಇನ್ ಕಂಪ್ಲೀಟ್ ಹೌಸ್‍ಹೋಲ್ಡ್ ಎಂದು ಎರಡು ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಅದರ ಕೆಳಗೆ ಹೆಸರು, ಮೊಬೈಲ್, ಹುಟ್ಟಿದ ದಿನಾಂಕ, ಹೆಡ್(ಮನೆಯ ಮುಖ್ಯಸ್ಥ), ಆಧಾರ್ ಎನ್ನುವ ನಾಲ್ಕು ಆಯ್ಕೆಗಳಿರುತ್ತದೆ. ಒಂದಾದ ಮೇಲೊಂದು ಆಯ್ಕೆಯನ್ನು ಭರ್ತಿ ಮಾಡಬೇಕು.
- ಕೆಂಪು, ಹಳದಿ, ಹಸಿರು ಬಣ್ಣ ಏನನ್ನು ಸೂಚಿಸುತ್ತದೆ: ಒಂದೊಮ್ಮೆ ಹೌಸ್‍ಹೋಲ್ಡ್ ಆಯ್ಕೆ ಡೌನ್‍ಲೋಡ್ ಕಂಪ್ಲೀಟ್ ಆಗಿರದಿದ್ದರೆ ಕೆಂಪು ಬಣ್ಣ, ಹೌಸ್‍ಹೋಲ್ಡ್ ಪ್ರಕ್ರಿಯೆ ಆರಂಭವಾಗಿದ್ದು ಮುಕ್ತಾಯವಾಗಿರದಿದ್ದರೆ ಹಳದಿ ಬಣ್ಣ, ಹೌಸ್‍ಹೋಲ್ಡ್/ಮೆಂಬರ್ ಪೂರ್ಣಗೊಂಡಿದ್ದರೆ ಹಸಿರು ಬಣ್ಣದಲ್ಲಿರುತ್ತದೆ.
-ಸರ್ಚ್ ಆಪರೇಷನ್: ಹೆಸರನ್ನು ಸರ್ಚ್ ಮಾಡಬಹುದು.
-ಸರ್ಚ್ ಆಪರೇಷನ್: ಬಳಕೆದಾರರು ತಮ್ಮ ಹೆಸರನ್ನು ಸರ್ಚ್ ಮಾಡಬಹುದು. -ಸ್ಕಿಪ್ ಹೌಸ್‍ಹೋಲ್ಡ್ ಆಪರೇಷನ್: ಹೌಸ್ ಹೋಲ್ಡ್ ಆಪರೇಷನ್ ಆಯ್ಕೆ ಬೇಡವೆಂದರೆ ಅದನ್ನು ಸ್ಕಿಪ್ ಮಾಡಬಹುದು. ಆದರೆ ಸ್ಕಿಪ್ ಮಾಡಲು ಕಾರಣಗಳನ್ನು ನೀಡಬೇಕಾಗುತ್ತದೆ. ಕಾರಣಗಳಲ್ಲಿ ಲಾಕ್ಡ್ ಹೌಸ್, ಹೌಸ್‍ಹೋಲ್ಡ್ ಮೈಗ್ರೇಟೆಡ್(ವಲಸೆ), ನಾಟ್ ಅವೈಲೇಬಲ್(ವಿಳಾಸ ಬದಲಾವಣೆ) ಮೂರು ಆಯ್ಕೆಗಳಿರುತ್ತದೆ. ಅದರಲ್ಲಿ ಒಂದನ್ನು ಕ್ಲಿಕ್ ಮಾಡಬೇಕಾಗುತ್ತದೆ. -ವ್ಯೂ ಮೆಂಬರ್: ಇದರಲ್ಲಿ ಮನೆಯಲ್ಲಿರುವ ಸದಸ್ಯರ ಬಗ್ಗೆ ಮಾಹಿತಿಯನ್ನು ಅಪ್‍ಲೋಡ್ ಮಾಡಬೇಕು.
-ಅಪ್‍ಡೇಟ್ ಮೆಂಬರ್ ಇನ್‍ಫರ್ಮೇಷನ್: ಮನೆಯ ಸದಸ್ಯರ ಕುರಿತು ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಬೇಕು. ಅದರಲ್ಲಿ ಅವರ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಜ್ಯ ಸೇರಿದಂತೆ ಹಲವು ಮಾಹಿತಿಯನ್ನು ಭರ್ತಿ ಮಾಡಬೇಕು.
-ಆಡ್ ನ್ಯೂ ಹೌಸ್‍ಹೋಲ್ಡ್: ನಿಮ್ಮ ಹೊಸ ಮನೆಯ ಸಂಖ್ಯೆ ಮತ್ತು ವಿಳಾಸವನ್ನು ಇಲ್ಲಿ ಅಪ್‍ಲೋಡ್ ಮಾಡಬಹುದಾಗಿದೆ.
-ವ್ಯೂ-ಎಡಿಟ್ ಆಪರೇಷನ್: ಒಂದೊಮ್ಮೆ ನೀವು ನೀಡಿದ ಮಾಹಿತಿಯನ್ನು ತಿದ್ದಬೇಕೆನಿಸಿದರೆ ಎಡಿಟ್ ಆಪ್ಷನ್ ಕ್ಲಿಕ್ ಮಾಡಿ, ಮಾಹಿತಿಯನ್ನು ತಿದ್ದಿ ಬಳಿಕ ಅಪ್‍ಲೋಡ್ ಮಾಡಬಹುದಾಗಿದೆ.
-ಸಿಗ್ನೇಚರ್ ಆಫ್ ರೆಸ್ಪಾಂಡೆಂಟ್: ಮನೆಯ ಮೊದಲ ಸದಸ್ಯರ ಬಗ್ಗೆ ಮಾಹಿತಿ ನೀಡುತ್ತಿದ್ದರೆ, ಒಂದೊಮ್ಮೆ ಅವರು ಆ ಮನೆಯನ್ನು ಬಿಟ್ಟು ಬೇರೆಡೆಗೆ ನೆಲೆಸಿದ್ದರೂ ಕೂಡ ಅವರ ಇ-ಹಸ್ತಾಕ್ಷರ ಬೇಕಾಗುತ್ತದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವೇಳೆ ನಿಮ್ಮ ಮನೆಗೆ ಬರುವ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಇರುವ ನಿವಾಸಿಗಳ ಬಗ್ಗೆ ಒಂದಿಷ್ಟು ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಾರೆ. ಈ ಕೆಳಕಂಡ ಮಾಹಿತಿಗಳನ್ನು ನೀವು ಕೊಡಬೇಕಿದೆ. ವ್ಯಕ್ತಿಯ ಹೆಸರು ಮನೆಯ ಮುಖ್ಯಸ್ಥನೊಂದಿಗಿನ ಸಂಬಂಧ ತಂದೆಯ ಹೆಸರು ತಾಯಿಯ ಹೆಸರು ಪತಿ/ಪತ್ನಿಯ ಹೆಸರು (ಮದುವೆಯಾಗಿದ್ದರೆ ಮಾತ್ರ) ಲಿಂಗ ಹುಟ್ಟಿದ ದಿನಾಂಕ ವೈವಾಹಿಕ ಸ್ಥಿತಿಗತಿ ಹುಟ್ಟೂರು ರಾಷ್ಟ್ರೀಯತೆ ಇದೀಗ ನೀವು ನೆಲೆಸಿರುವ ಸ್ಥಳದ ವಿಳಾಸ ಈ ವಿಳಾಸದಲ್ಲಿ ನೀವು ನೆಲೆಸಿರುವ ಅವಧಿ ಖಾಯಂ ವಿಳಾಸ ವೃತ್ತಿ ಶಿಕ್ಷಣ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ
-ಎನ್‍ಪಿಆರ್ ಅಡಿ ಮನೆಮನೆಯಲ್ಲೂ ಜನಗಣತಿ ನಡೆಯುತ್ತೆ
-ಪೌರತ್ವ ಕಾಯ್ದೆ 1955 ಹಾಗೂ ಪೌರತ್ವ ನೋಂದಣಿ ನಿಯಮ 2003ರ ಅನುಸಾರ ಈ ಕಾರ್ಯ ನಡೆಯುತ್ತೆ -1 ಏಪ್ರಿಲ್ 2020ರಿಂದ 30 ಸೆಪ್ಟೆಂಬರ್ 2020ರವರೆಗೂ ಈ ಜನಗಣತಿ ಕಾರ್ಯ ನಡೆಯುತ್ತೆ
- ದೇಶದಲ್ಲಿರುವ ಪ್ರತಿಯೊಬ್ಬ 'ಸಾಮಾನ್ಯ ನಿವಾಸಿ'ಯ ಮಾಹಿತಿ ಸಂಗ್ರಹಿಸೋದು ಎನ್‍ಪಿಆರ್ ಉದ್ದೇಶ
-ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಭೌಗೋಳಿಕ ನೆಲೆಸುವಿಕೆ ಜೊತೆಯಲ್ಲೇ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ
-2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ ಇದಾಗಿದೆ.
-ಯಾವುದೇ ವ್ಯಕ್ತಿ, ಯಾವುದೇ ಸ್ಥಳದಲ್ಲಿ ಕಳೆದ 6 ತಿಂಗಳಿನಿಂದ ಇದ್ದರೆ ಅಥವಾ ಅದೇ ಸ್ಥಳದಲ್ಲಿ ಮುಂದಿನ 6 ತಿಂಗಳ ಕಾಲ ಇರುವ ನಿರ್ಧಾರ ಮಾಡಿದ್ದರೆ ಅವರೆಲ್ಲರೂ ಎನ್‍ಪಿಆರ್‍ನಲ್ಲಿ ಭಾಗವಹಿಸಬೇಕು - ಕಳೆದ ಆಗಸ್ಟ್‍ನಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ -ದೇಶದ ಎಲ್ಲ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳಲ್ಲೂ ಜನಗಣತಿ ನಡೆಯಲಿದೆ. ಆದರೆ ಅಸ್ಸಾಂ ರಾಜ್ಯವನ್ನು ಹೊರತುಪಡಿಸಲಾಗಿದೆ.


