ಕಾಸರಗೋಡು: ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ಕಾಸರಗೋಡು ಲಲಿತಕಲಾ ಸದನದಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ರಾಷ್ಟ್ರೀಯ ತುಳು ವಿಚಾರ ಸಂಕಿರಣದಲ್ಲಿ ಸಮಾರೋಪ ದಿನವಾದ ಬುಧವಾರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ನೇತೃತ್ವದ ತಂಡದವರಿಂದ ತುಳು ಯಕ್ಷಗಾನ ಭಾಗವತಿಕೆ ರಾಗ ರಂಜಿನಿ ಪ್ರಸ್ತುಗೊಂಡಿತು.
ಈ ಸಂದರ್ಭ ಮಾತನಾಡಿದ ದಿವಾಣ ಶಿವಶಂಕರ ಭಟ್ ಅವರು, ಯಕ್ಷಗಾನ ಕಲಾಕ್ಷೇತ್ರದಲ್ಲಿ ತುಳು ಪ್ರಸಂಗಗಳಿಗೆ ಮಹತ್ವದ ಸ್ಥಾನಮಾನಗಳಿವೆ. ಅನೇಕ ಪೃರಾಣಿಕ, ಚಾರಿತ್ರಿಕ ಹಾಗೂ ಸಾಮಾಜಿಕ ಪ್ರಸಂಗಗಳು ರಚನೆಗೊಂಡು ಸಾವಿರಾರು ಪ್ರದರ್ಶನಗಳನ್ನು ಕಂಡಿವೆ. ತುಳುವಿನ ಮೊದಲ ಪೂರ್ಣ ಪ್ರಮಾಣದ ಪ್ರಸಂಗವೆಂದು ಪರಿಗಣಿಸಲ್ಪಟ್ಟಿರುವ ತುಳು ಪಂಚವಟಿಯನ್ನು ಬರೆದಿರುವುದು ಕಾಸರಗೋಡಿನ ಪೈವಳಿಕೆ ಬಾಯಾರಿನ ಸಂಕಯ್ಯ ಭಾಗವತರೆಂಬುದು ಗಡಿನಾಡಿನ ಹೆಮ್ಮೆ ಎಂದು ತಿಳಿಸಿದರು.
ರಾಗ ರಂಜಿನಿಯಲ್ಲಿ ಶ್ರೀಮತಿ.ರೋಹಿಣಿ ಎಸ್.ದಿವಾಣ ಹಾಗೂ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ(ಭಾಗವತಿಕೆ), ದಿವಾಣ ಶಿವಶಂಕರ ಭಟ್ (ಮದ್ದಳೆ), ಪುಂಡಿಕಾೈ ರಾಜೇಂದ್ರಪ್ರಸಾದ್(ಚೆಂಡೆ)ಯಲ್ಲಿ ಸಹಕರಿಸಿದರು. ತುಳು ಪಂಚವಟಿ ಹಾಗೂ ಅನಂತರಾಮ್ ಬಂಗಾಡಿ ರಚಿಸಿದ ಹಲವು ಪೌರಾಣಿಕ ಪ್ರಸಂಗಗಳ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಕಾರ್ಯದರ್ಶಿ ವಿಜಯಕುಮಾರ್ ಪಾವಳ, ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಎಸ್,ನಾರಾಯಣ ಭಟ್, ಬಾಲಕೃಷ್ಣ ಶೆಟ್ಟಿಗಾರ್, ಗೀತಾ ವಿ ಸಾಮಾನಿ, ರಾಜೀವಿ ಕಳಿಯೂರು, ಭಾರತಿ ಬಾಬು, ಸಚಿತ ರೈ ಪೆರ್ಲ, ಶಶಿಕುಮಾರ್ ಕುಳೂರು ಮೊದಲಾದವರು ಸಹಕರಿಸಿದರು.

