ಮಧೂರು: ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸ ದಿವಂಗತ ಸಿರಿಬಾಗಿಲು ವೆಂಕಪ್ಪಯ್ಯ ಸ್ಮರಣಾರ್ಥ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ `ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕøತಿಕ ಭವನ'ದ ಶಿಲಾನ್ಯಾಸ ಸಮಾರಂಭ ವಿವಿಧ ಧಾರ್ಮಿಕ ನೇತಾರರು, ಕರ್ನಾಟಕ ಹಾಗೂ ಕೇರಳದ ಮಂತ್ರಿಗಳು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಸಾಂಸ್ಕøತಿಕ ಲೋಕದ ಗಣ್ಯರ ಉಪಸ್ಥಿತಿಯಲ್ಲಿ ಜನವರಿ 18 ನೇ ಶನಿವಾರ ಬೆಳಗ್ಗೆ 9ಕ್ಕೆ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಅವರ ಜನ್ಮಸ್ಥಳ ಸಿರಿಬಾಗಿಲಿನಲ್ಲಿ ಜರಗಲಿದೆ.
ಈಗಾಗಲೇ ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣ ಸಮಿತಿ ರಚಿಸಲಾಗಿದ್ದು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿರುವ ಸುಸಜ್ಜಿತ ಮೂರು ಅಂತಸ್ತಿನ ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಕೂಲವಾದಂತಹ ಸಭಾಂಗಣ, ಮುಂದಕ್ಕೆ ಉಚಿತ ಯಕ್ಷಗಾನ ಹಿಮ್ಮೇಳ ಹಾಗೂ ನಾಟ್ಯ ತರಬೇತಿ ಹಾಗೂ ಅರ್ಥಗಾರಿಕೆ ತರಬೇತಿ ತರಗತಿ ನಡೆಸುವುದು, ಯಕ್ಷಗಾನ ಗ್ರಂಥಾಲಯ, ಯಕ್ಷಗಾನ ವಸ್ತು ಸಂಗ್ರಹಾಲಯ ಹಾಗೂ ಯಕ್ಷಗಾನ ಅಧ್ಯಯನಕ್ಕೆ ಪೂರಕವಾದ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ ಹಾಗೂ ಕನ್ನಡ ಸಂಸ್ಕøತಿ ಚಟುವಟಿಕೆಗಳನ್ನು ಸಮಾನ ಮನಸ್ಕರ ಸಹಯೋಗದೊಂದಿಗೆ ನಡೆಸುವ ಇರಾದೆ ಹೊಂದಲಾಗಿದ್ದು ನಾಡ ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸಂಕಲ್ಪತೊಡಲಾಗಿದೆ.
ಜ.18 ರಂದು ಬೆಳಗ್ಗೆ 9ಕ್ಕೆ ಶಿಲಾನ್ಯಾಸ ಸಮಾರಂಭ ಜರಗಲಿದ್ದು ಬಳಿಕ ಸಭಾಕಾರ್ಯಕ್ರಮ ಜರಗಲಿದೆ.
ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮದ್ ಎಡನೀರು ಮಠಾ„ದೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಸರಕಾರದ ಪ್ರವಾಸೋದ್ಯಮ, ಸಕ್ಕರೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಸಿ.ಟಿ.ರವಿ ಶಿಲಾನ್ಯಾಸಗೈಯಲಿದ್ದು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ಬಿ.ಜೆ.ಪಿ. ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರ ಬಂದರು ಮೀನುಗಾರಿಕೆ ಮತ್ತು ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಸರಗೋಡು ವಿಧಾನ ಸಭಾ ಸದಸ್ಯರಾದ ಎನ್.ಎ.ನೆಲ್ಲಿಕುನ್ನು, ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಎಂ.ಎ.ಹೆಗಡೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ಡಾ|ತಲ್ಲೂರು ಶಿವರಾಮ ಶೆಟ್ಟಿ, ಕೆ.ರವೀಂದ್ರ ಆಳ್ವ ಕೋಟೆಕುಂಜ ಕಂಬಾರು ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು ಹುಡ್ಕೋ ಕೇಂದ್ರ ಸರಕಾರ, ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಕಾಂತ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಪಾರ್ತಿಸುಬ್ಬ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಶಂಕರ್ ರೈ ಮಾಸ್ತರ್ ಭಾಗವಹಿಸಲಿದ್ದಾರೆ.
ಉಪಸ್ಥಿತರಿರುವ ತಂತ್ರಿವರ್ಯರು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿ, ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿ ಕುಡುಪು ಹಾಗೂ ನಾಡಿನ ಗಣ್ಯರಾದ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಧರ ಡಿ.ಎಸ್, ವಸಂತ ಪೈ.ಬದಿಯಡ್ಕ, ರಾಧಾಕೃಷ್ಣ ಕಲ್ಚಾರ್ ವಿಟ್ಲ, ಆರ್.ಕೆ.ಭಟ್ ಬೆಳ್ಳಾರೆ, ಚೇವಾರು ಚಿದಾನಂದ ಕಾಮತ್, ಭುಜಬಲಿ ಧರ್ಮಸ್ಥಳ, ಜಯರಾಮ ಎಡನೀರು, ರಮಾನಂದ ಭಂಡಾರಿ ಗುಲ್ಬರ್ಗ, ಡಾ.ಯನ್.ಕಿಶೋರ್ ಆಳ್ವ, ವಾಸುದೇವ ಹೊಳ್ಳ ಎಲ್ಲಂಗಳ, ವೇಣುಗೋಪಾಲ ತತ್ವಮಸಿ, ವೈ.ರಾಘವೇಂದ್ರ ಪ್ರಸಾದ್ ಬದಿಯಡ್ಕ, ನರಸಿಂಹಮೂರ್ತಿ ಟಿ, ಸಿ.ಕೆ.ಪೂಜಾರಿ ಬೆಂಗಳೂರು, ದೇವದಾಸ್ ಶೆಟ್ಟಿ ಬಂಟ್ವಾಳ, ಸತೀಶ್ ಭಟ್ ಬೆಂಗಳೂರು, ಎಂ.ಎಲ್.ಭಟ್ ಸಾಗರ, ತ್ರಿವಿಕ್ರಮ ಕೆ.ಆರ್. ಉಪಸ್ಥಿತರಿರುವರು ಎಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕøತಿಕ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.


