ಬದಿಯಡ್ಕ: ಬ್ರಹ್ಮಶ್ರೀ ತಂತ್ರವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯರ 16ನೇ ಸಂಸ್ಮರಣಾ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ಇಂದು(ಜ.18.ಶನಿವಾರ) ಕೊಲ್ಲಂಗಾನ ಶ್ರೀನಿಲಯ ಕ್ಷೇತ್ರದಲ್ಲಿ ನಡೆಯಲಿದೆ.
ಸಂಜೆ 7.30 ರಿಂದ ನಡೆಯಲಿರುವ ಸಂಸ್ಮರಣೆ, ಸನ್ಮಾನ ಸಮಾರಂಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ.ಸಂಸ್ಮರಣಾ ಭಾಷಣ ಮಾಡುವರು. ನ್ಯಾಯವಾದಿ ರಾಮಕೃಷ್ಣ ಭಟ್ ಪೆರ್ವೊಡಿ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮ ಪಿ, ಉದ್ಯಮಿ ವೇಣುಗೋಪಾಲ ತತ್ವಮಸಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶಿಕ್ಷಕ, ಯಕ್ಷಗಾನ ಭಾಗವತ ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಗುವುದು. ಬಸವರತ್ನ ಪುರಸ್ಕøತ ಯಕ್ಷಗಾನ ಗುರು ರವಿ ಅಲೆವೂರಾಯ ವರ್ಕಾಡಿ ಅಭಿನಂದನಾ ಭಾಷಣ ಮಾಡುವರು. ಜೊತೆಗೆ ಈ ಸಂದರ್ಭ ವೇದ ವಿದ್ವಾಂಸರಾದ ಸುಬ್ರಹ್ಮಣ್ಯ ಮಯ್ಯ ವರ್ಕಾಡಿ ಹಾಗೂ ಜ್ಯೋತಿಷಿ ಉಣ್ಣಿ ಪಣಿಕ್ಕರ್ ಮಧೂರು ಅವರನ್ನು ಸನ್ಮಾನಿಸಲಾಗುವುದು. ಎಂ.ಪರಮೇಶ್ವರ ನಾಯ್ಕ ಅರ್ತಲೆ ಬರೆದಿರುವ ಕೊಲ್ಲಂಗಾನ ಶ್ರೀನಿಲಯಾಮೃತ ಕೃತಿಯನ್ನು ಈ ಸಂದರ್ಭ ಗಣ್ಯರು ಬಿಡುಗಡೆಗೊಳಿಸುವರು. ಶ್ರೀಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30 ರಿಂದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿಗೀತೆಗಳ ಗಾಯನ, 10 ರಿಂದ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

