ಉಪ್ಪಳ: ಬಾಯಾರು ಪೆರ್ವೊಡಿಯ ಶ್ರೀವಿವೇಕಾನಂದ ಸಾಂಸ್ಕøತಿಕ ಕೇಂದ್ರದ ಸ್ವ ಸಹಾಯ ಸಂಘಗಳ ನೇತೃತ್ವದಲ್ಲಿ ವಿವೇಕಾನಂದ ಜಯಂತ್ಯುತ್ಸವ ಹಾಗೂ ದುರ್ಗಾಪೂಜೆ ಕಾರ್ಯಕ್ರಮ ಇಂದು(ಜ. 18 ಶನಿವಾರ) ಪೆರ್ವೊಡಿ ವಿವೇಕಾನಂದ ಮೈದಾನದಲ್ಲಿ ಜರಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 8 ರಿಂದ ಗಣಹೋಮ, 9 ಕ್ಕೆ ಬಾಲಗೋಕುಲದ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 4-5 ರ ವರೆಗೆ ಶ್ರೀ ವಿವೇಕಾನಂದ ಸಾಂಸ್ಕøತಿಕ ಕೇಂದ್ರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ 7 ರ ವರೆಗೆ ಬಾಲಗೋಕುಲದ ಮಕ್ಕಳ ಸಾಂಸ್ಕøತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
7 ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಉದ್ಯೋಗಿ ನಾರಾಯಣ ನಾಯ್ಕ ಪೆರ್ವೊಡಿ ಕೊಜಪ್ಪೆ ವಹಿಸುವರು. ರಾಜಕೇಸರಿ ಕರ್ನಾಟಕ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ನಿವೃತ್ತ ಮುಖ್ಯೋಪಾಧ್ಯಾಯ ರಾಮ ಡಿ. ದಡ್ಡಂಗಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀಕೃಷ್ಣಪ್ರಸಾದ ಧಾರ್ಮಿಕ ಉಪನ್ಯಾಸ ನೀಡುವರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯರಾದ ಜಯಲಕ್ಷ್ಮಿ ಭಟ್, ಕಿಶೋರ್ ಕುಮಾರ್ ನಾಯಕ್ ಪೆರ್ವೊಡಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30 ಕ್ಕೆ ಶ್ರೀ ದುರ್ಗಾ ಪೂಜೆಯ ಮಂಗಳಾರತಿ ನಡೆಯಲಿದ್ದು, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ಮಕ್ಕಳ ಮೇಳದವರಿಂದ ಮದನಾಕ್ಷಿ ತಾರಾವಳಿ-ಸುಧನ್ವ ಮೋಕ್ಷ ಎಂಬ ಯಕ್ಷಗಾನ ಬಯಲಾಟ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ನಡೆಯಲಿದೆ.


