ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ, ಸಮುದಾಯ ಆರೋಗ್ಯಕೇಂದ್ರದ ವತಿಯಿಂದ 2019-20 ಪಾಲಿಯೇಟಿವ್ ಸ್ನೇಹಸಂಗಮ ಕಾರ್ಯಕ್ರಮವು ಬುಧವಾರ ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷೆ ಸೈಬುನ್ನೀಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಗ್ರಾಪಂ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಆರೋಗ್ಯ ಇಲಾಖೆಯ ಅಧಿಕಾರಿ ಸತ್ಯಶಂಕರ ಭಟ್ ಶುಭಕೋರಿದರು. ಆರೋಗ್ಯ ಇಲಾಖೆಯ ದೇವಿಜಾಕ್ಷನ್, ವಿನೋದ್, ನವಜೀವನ ಶಾಲೆಯ ಎನ್.ಎಸ್.ಎಸ್. ಅಧ್ಯಾಪಕ ಶ್ರೀನಾಥ್, ಬದಿಯಡ್ಕ ಪೇಟೆಯ ವ್ಯಾಪಾರಿಗಳಾದ ರವಿ ನವಶಕ್ತಿ, ಸತ್ಯರಾಜ್ ಮೊದಲಾದವರು ಪಾಲ್ಗೊಂಡಿದ್ದರು. ಕುಟುಂಬಶ್ರೀ, ಆಶಾ ವರ್ಕರ್‍ಗಳು, ಎನ್‍ಎಚ್‍ಎಸ್ ಹಾಗೂ ಸ್ನೇಹಸಂಗಮದ ಬಂಧುಗಳು ಉಪಸ್ಥಿತರಿದ್ದರು.

