ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ನೋವನ್ನು ಮರೆಯುವ ನಿಟ್ಟಿನಲ್ಲಿ, ಸಮಾನ ಮನಸ್ಕರೊಂದಿಗೆ ಬೆರೆಯುವ ಉದ್ದೇಶದಿಂದ ಶಾರೀರಿಕ, ಮಾಸಿಕ ನೋವು ನಿವಾರಿಸಿಕೊಳ್ಳುವ ಸಲುವಾಗಿ ಪುನರ್ವಸತಿ ಗ್ರಾಮ ನಿರ್ಮಾಣಗೊಳ್ಳಲಿದೆ.
ಮುಳಿಯಾರು ಗ್ರಾಮಪಂಚಾಯತ್ ನಲ್ಲಿ ಕೇರಳ ತೋಟಗಾರಿಕೆ ನಿಗಮ ನೀಡಿರುವ 25 ಎಕ್ರೆ ಜಾಗದಲ್ಲಿ ಈ ಪುನರ್ವಸತಿ ಗ್ರಾಮ ನಿರ್ಮಾಣವಾಗಲಿದೆ. ಫೆ.8ರಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಕಾಮಗಾರಿಗೆ ಶಿಲಾನ್ಯಾಸ ನಡೆಸುವರು.
ಸಂತ್ರಸ್ತರಾದ ಮಕ್ಕಳಿಗೆ ಮತ್ತು ಅವರ ಹೆತ್ತವರಿಗಾಗಿ ಈ ಬೃಹತ್ ಯೋಜನೆಯನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತರಲಿದೆ. ನಿರ್ಮಾಣ ಸಂಬಂಧಿ ಚಟುವಟಿಕೆಗಳು ಆರಂಭಿಸುವ ನಿಟ್ಟಿನಲ್ಲಿ ಚುರುಕಿನಿಂದ ಕ್ರಮಗಳು ಸಾಗುತ್ತಿವೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿಅಳವಡಿಸಿ 58.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಳ್ಳುವಯೋಜನೆಯಲ್ಲಿ ಮನೆಗಳು, ವಿದ್ಯುತ್ ಸಂಪರ್ಕ, ನೌಕರಿ, ದೈಹಿಕ ಪುನಶ್ಚೇತನ, ಮಾನಸಿಕ ಅಭಿವೃದ್ಧಿಗೆ ತರಬೇತಿಗಳು, ಶಾರ್ಟ್ ಸ್ಟೇ ಸಹಿತ ವ್ಯವಸ್ಥೆಗಳು ಇಲ್ಲಿರುವುವು. ಮೊದಲ ಹಂತದಲ್ಲಿ ಕ್ಲಿನಿಕಲ್ ಯೂನಿಟ್, ಡಾರ್ಮೆಟರಿ, ಫೆÇೀಸ್ಟರ್ ಕೇರ್ ಯೂನಿಟ್, ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿವೆ. ದ್ವಿತೀಯ ಹಂತದಲ್ಲಿ ಆಫಿಂ ಥಿಯೇಟರ್, ಗ್ರಂಥಾಲಯ, ಮುಕ್ತ ಸಭಾಂಗಣ, ಆಡಳಿತೆ ವಿಭಾಗ, ಸಭಾಂಗಣ ಇತ್ಯಾದಿ ಇರುವುವು.
ಎಂಡೋ ಸಂತ್ರಸ್ತ ಮಕ್ಕಳಿಗಾಗಿ ಸಿದ್ಧವಾಗಿರುವ ಬಡ್ಸ್ ಶಾಲೆಗಳು:
ಶಾರೀರಿಕ, ದೈಹಿಕ ನ್ಯೂನತೆ ಹೊಂದಿರುವ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಪುನಶ್ಚೇತನಕ್ಕಾಗಿ ನಿರ್ಮಿಸಲಾಗುವ ಬಡ್ಸ್ ಶಾಲೆಗಳ ಕಾಮಗಾರಿ ಪೂರ್ತಿಗೊಂಡಿವೆ. ಕುಂಬಡಾಜೆ, ಕಾರಡ್ಕ, ಮುಳಿಯಾರು, ಬದಿಯಡ್ಕ, ಕಳ್ಳಾರ್, ಬೆಳ್ಳೂರು, ಪುಲ್ಲೂರು-ಪೆರಿಯ, ಕಯ್ಯೂರು-ಚೀಮೇನಿ, ಪನತ್ತಡಿ ಎಂಬಲ್ಲಿ ಈ ಬಡ್ಸ್ ಶಾಲೆಗಳ ನಿರ್ಮಾಣ ಪೂರ್ತಿಯಾಗಿವೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಇವಕ್ಕೆ 2 ಕೋಟಿ ರೂ. ಮೀಸಲಿರಿಸಲಾಗಿದೆ. ವಿಕಲಚೇತನರ ಸೌಹಾರ್ದ ಮತ್ತು ಶಿಶು ಸೌಹಾರ್ದ ಎಂಬ ರೂಪುರೇಷೆಯೊಂದಿಗೆ ಬಡ್ಸ್ ಶಾಲೆಗಳು ಇವೆ. ಫೆ.8ರಂದು ಆರೋಗ್ಯ ಸಚಿವೆ ಶಾಲೆಗಳ ಉದ್ಘಾಟನೆ ನಡೆಸುವರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ರಾಜ್ಯ ಮಟ್ಟದ ಸಭೆ :
ಎಂಡೋಸಲ್ಫಾನ್ ಸಂತ್ರಸ್ತರ ಸೌಲಭ್ಯ ಸಂಬಂಧ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ರಾಜ್ಯ ಮಟ್ಟದ ಎಂಪವರ್ ಡ್ ಸಮಿತಿ ಸಭೆ ಜರುಗಿತು. ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಟೋಂ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕುಮಾರ್ ಸಿಂಗ್, ಯೋಜನೆ ಮತ್ತು ಹಣಕಸು ವಿಭಾಗದ ಪ್ರದಾನ ಕಾರ್ಯದರ್ಶಿ ಡಾ.ಎ.ಜಯತಿಲಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗ ಪ್ರದಾನ ಕಾರ್ಯದರ್ಶಿ ರಾಜನ್ ನಾಮದೇವ್ ಕೋಬ್ರಗಡೆ, ಸಾರ್ವಜನಿಕ ಕಾಮಗಾರಿ ವಿಭಾಗ ಪ್ರಧಾನ ಕಾರ್ಯದರ್ಶಿ ಆನಂದ್ ಸಿಂಗ್, ಶಕ್ತಿ ಮತ್ತು ಜಲಸಂಪನ್ಮೂಲ ವಿಭಾಗ ಕಾರ್ಯದರ್ಶಿ ಬಿ.ಅಶೋಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ರಾಜ್ಯ ಯೋಜನೆ ಮಂಡಳಿ ಮುಖ್ಯಸ್ಥ(ಕೃಷಿ) ಎಸ್.ಎಸ್.ನಾಗೇಶ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಇತರ ಸದಸ್ಯರು ಉಪಸ್ಥಿತರಿದ್ದರು.

