ಪೆರ್ಲ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲುವಿನ ಗೋವುಗಳ ಮೇವಿಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಪೆರ್ಲ ಪರಿಸರದಲ್ಲಿ ಜರಗಿತು.
ಶ್ರಮದಾನದಲ್ಲಿ ಬಿರ್ಮುಲೆಯ ಅಕ್ಷಯ ಯುವಕ ಮಂಡಲದ ಮಾಧವ, ಪ್ರಕಾಶ್ ಕಾಮತ್, ರವಿ, ರಮೇಶ, ಸದಾಶಿವ, ವಿನೋದ, ಗಂಗಾಧರ, ರೋಹಿತ್ ಕುಲಾಲ್, ರಮೇಶ ನಾಯಕ್, ಹಾಗು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಉತ್ತರ ಪ್ರದೇಶದ ಗೌತಮ್, ಬಿಮಲ್, ಶೇರ್ ಸಿಂಗ್ ಹಾಗು ಅನಿಲ್ ಮತ್ತು ಹುಲ್ಲು ಸಾಗಾಟದಲ್ಲಿ ಶಿವಪ್ರಸಾದ್ ಟ್ರಾನ್ಸ್ ಪೆÇೀರ್ಟ್ ನ ರಾಮ ಮೂಲ್ಯ ಸಹಕರಿಸಿದರು.
ಶ್ರಮದಾನದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲದ ಅಧ್ಯಕ್ಷರು, ಎಣ್ಮಕಜೆ ಹವ್ಯಕ ವಲಯದ ಪದಾಧಿಕಾರಿಗಳು, ಗುರುಭಕ್ತರು, ಅಮೃತಧಾರಾ ಗೋಶಾಲೆಯ ಪದಾಧಿಕಾರಿಗಳು ಗೋಭಕ್ತರು ಸಹಕರಿಸಿದ್ದರು.


