ಮಂಜೇಶ್ವರ: ಸಹ ಶಿಕ್ಷಕನಿಂದಲೇ ದಾರುಣವಾಗಿ ಕೊಲೆಗೀಡಾದ ಮೀಯಪದವು ವಿದ್ಯಾವರ್ಧಕ ಶಾಲೆಯ ಅಧ್ಯಾಪಕಿ ರೂಪಶ್ರಿ ಟೀಚರ್ ಮನೆಗೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸೋಮವಾರ ಭೇಟಿ ನೀಡಿದರು. ಸಂಸದರ ಜೊತೆಗೆ ಕಾಸರಗೋಡು ಜನಪ್ರತಿನಿಧಿಗಳಾದ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಷಾದ್ ಶುಕೂರ್, ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಕುಂಞÂ, ಯುಡಿಎಫ್ ನೇತಾರರಾದ ರಾಘವ ಚೇರಾಲ್, ಶೆಕೂರ್ ತಲೇಕಳ, ಸಿದ್ದಿಕ್ ಮೀಯಪದವು, ಪ್ರವೀಣ್ ಡಿ.ಸೋಜಾ, ರಿಯಾಝ್ ಚಿಗುರುಪಾದೆ, ಹನೀಫ್ ಚಿಗುರುಪಾದೆ ಮುಂತಾದವರು ಉಪಸ್ಥಿತರಿದ್ದರು. ಕೊಲೆಗೀಡಾದ ರೂಪಶ್ರಿಯವರ ಪತಿ ,ಮಕ್ಕಳು, ತಾಯಿ ಹಾಗೂ ಕುಟುಂಬಸ್ಥರನ್ನು ಸಂತೈಸಿಸಿದ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೊಲೆಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಒತ್ತಡ ಹೇರುವುದಾಗಿ ಹೇಳಿದರು.
ರೂಪಶ್ರಿ ಟೀಚರ್ ಕೊಲೆ ಪ್ರಕರಣದ ನಿಗೂಢತೆ ಬಯಲಿಗೆ ತರಲು ಯುಡಿಎಫ್ ಆಗ್ರಹ:
ಸಹಶಿಕ್ಷಕ ಹಾಗೂ ಆತನ ಸಹವರ್ತಿಯಿಂದ ದಾರುಣವಾಗಿ ಕೊಲೆಗೀಡಾದ ಮೀಯಪದವು ವಿದ್ಯಾವರ್ಧಕ ಶಾಲೆಯ ಶಿಕ್ಷಕಿ ರೂಪಶ್ರಿ ಟೀಚರ್ ರವರ ದಾರುಣ ಕೊಲೆಗೆ ಸಂಬಂಧಿಸಿದಂತೆ ಸಮಗ್ರವಾದ ತನಿಖೆಯನ್ನು ಮಾಡಬೇಕೆಂದು ಮೀಂಜ ಗ್ರಾಮ ಪಂಚಾಯತಿ ಯುಡಿಎಫ್ ಸಮಿತಿ ಆಗ್ರಹಿಸಿದೆ. ಕೊಲೆ ಪ್ರಕರಣದ ನಿಜಾಂಶ ಬಯಲಿಗೆ ಬರಬೇಕು, ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಇನ್ನಿತರನ್ನು ಕೂಡಲೇ ಬಂಧಿಸಬೇಕೆಂದು ಯುಡಿಎಫ್ ಸಮಿತಿ ಆಗ್ರಹಿಸಿದೆ. ಶೈಕ್ಷಣಿಕ ಸಂಸ್ಥೆಯಲ್ಲಿ ನೈತಿಕತೆ ಕಲಿಸಬೇಕಾದ ಶಿಕ್ಷಕರು ಮಾಟ , ಮಂತ್ರ ಅನೈತಿಕ ದಂಧೆಯಲ್ಲಿ ಭಾಗಿಯಾಗುತ್ತಿರುವುದು, ಇದಕ್ಕೆ ಸಂಸ್ಥೆಯ ಅಧಿಕೃತರು ಮೌನಸಮ್ಮತಿ ನೀಡಿರುವುದು ಎಲ್ಲವೂ ತನಿಖೆಯಲ್ಲಿ ಬಹಿರಂಗಗೊಳಿಸಬೇಕೆಂದು ಯುಡಿಎಫ್ ಸಭೆ ಆಗ್ರಹಿಸಿದೆ.
ಮೀಯಪದವಿನಲ್ಲಿ ಜರುಗಿದ ಯುಡಿಎಫ್ ಸಭೆಯಲ್ಲಿ ಯುಡಿಎಫ್ ಸಮಿತಿ ಅಧ್ಯಕ್ಷ ದಿವಾಕರ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಯುಡಿಎಫ್ ನೇತಾರರಾದ ಸತ್ತಾರ್ ಹಾಜಿ, ದಾಮೋದರ ಮಾಸ್ತರ್, ಶರೀಫ್ ಚಿನಾಲ, ಮೊಹಮ್ಮದ್ ಕುಂಞÂ, ಪಾಲಕ್ಕಾಡ್ ಮೊಹಮ್ಮದ್, ಹನೀಫ್ ಪಿ.ಕೆ, ಇಕ್ಬಾಲ್ ಕಳಿಯೂರು, ಡೇನಿಯಲ್ ಡಿ.ಸೋಜಾ, ಬಾವುಂಞÂ, ರಿಯಾಝ್. ಎ.ಕೆ ಮುಂತಾದವರು ಉಪಸ್ಥಿತರಿದ್ದರು.


