HEALTH TIPS

ಕಾಶ್ಮೀರ ತೀರ್ಪು ಮೂಲಕ ಇಡೀ ದೇಶ ಸಂವಿಧಾನಕ್ಕೆ ತಲೆ ಬಾಗುತ್ತದೆ ಎಂಬುದನ್ನು ಸುಪ್ರೀಂಕೋರ್ಟ್ ಮೋದಿಗೆ ತಿಳಿಸಿದೆ: ಕಾಂಗ್ರೆಸ್

   
      ನವದೆಹಲಿ: ಕಾಶ್ಮೀರ ಕುರಿತು ನೀಡಲಾಗಿರುವ ತೀರ್ಪು ಮೂಲಕ ಇಡೀ ದೇಶ ಸಂವಿಧಾನಕ್ಕೆ ತಲೆಬಾಗುತ್ತದೆಯೇ ವಿನಃ ನಿಮಗಲ್ಲ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸುಪ್ರೀಂಕೋರ್ಟ್ ನೆನಪಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
   ತೀರ್ಪು ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಅಂತರ್ಜಾಲದ ಪ್ರಾಮುಖ್ಯತೆಯನ್ನು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಮೋದಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳಿಗೆ ಸುಪ್ರೀಂಕೋರ್ಟ್ ದೊಡ್ಡ ಹೊಡೆತನ್ನು ನೀಡಿದೆ ಎಂದು ಹೇಳಿದ್ದಾರೆ.
    ಭಿನ್ನಾಭಿಪ್ರಾಯ ಹೊಂದಿರುವವರ ಮೇಲೆ ಸೆಕ್ಷನ್ 144 ಜಾರಿ ಮಾಡಲು ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ತೀರ್ಪು ಮೂಲಕ ನ್ಯಾಯಲಯ ಇಡೀ ದೇಶ ಸಂವಿಧಾನಕ್ಕೇ ವಿನಃ ನಿಮಗೆ ತಲೆ ಬಾಗುವುದಿಲ್ಲ ಎಂಬುನದ್ನು ಮೋದಿಯವರಿಗೆ ಮನವರಿಕೆ ಮಾಡಿದೆ ಎಂದು ತಿಳಿಸಿದ್ದಾರೆ. SC delivers first big jolt of 2020 to illegal activities of Modi Govt by stating importance of internet as a fundamental right.

Double shock for Modi-Shah that dissent cannot be oppressed by imposing section 144.

Modiji reminded that nation bows before Constitution and not him! pic.twitter.com/guiuctcOva
— Randeep Singh Surjewala (@rssurjewala) January 10, 2020
          ಸಂವಿಧಾನದ 370ನೇ ವಿಧಿಯನ್ನು ಕಾಶ್ಮೀರದಿಂದ ತೆರವುಗೊಳಿಸಿದ ಬಳಿಕ ಕಾಶ್ಮೀರದ ಎಲ್ಲಾ ಕಡೆಗಳಲ್ಲಿ ಸಂಪೂರ್ಣ ಅಂತರ್ಜಾಲ ಸೌಲಭ್ಯಗಳನ್ನು ತಡೆಹಿಡಿಯಲಾಗಿತ್ತು. ತಿಂಗಳುಗಳ ನಂತರ ಪೆÇೀಸ್ಟ್ ಪೇಡ್ ಸಿಮ್ ಗಳಿಗೆ ಮಾತ್ರ ದೂರವಾಣಿ ಸಂಪರ್ಕ ಕಲ್ಪಿಸಲಾಗಿತ್ತು. ಅದಾದ ಬಳಿಕ ಕೆಲ ಪ್ರದೇಶಗಳಲ್ಲಿ ಮಾತ್ರ ಅಂತರ್ಜಾಲ ಸೌಲಭ್ಯ ನೀಡಲಾಗಿತ್ತು. ಇದೀಗ ಈ ಬಗ್ಗೆ ಸುಪ್ರೀಂಕೋರ್ಟ್ ಮಹತ್ತರವಾದ ಆದೇಶವನ್ನು ಹೊರಡಿಸಿದ್ದು, ಸಂಪೂರ್ಣ ಅಂತರ್ಜಾಲ ಸೌಲಭ್ಯ ನೀಡುವಂತೆ ಸೂಚಿಸಿದೆ. ಜೊತೆಗೆ ಕಾಶ್ಮೀರ ಭೇಟಿಗೆ ಇರುವ ನಿಬರ್ಂಧಗಳನ್ನು 7 ದಿನಗಳೊಳಗಾಗಿ ತೆರವುಗೊಳಿಸುವಂತೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries