ಮಂಗಳೂರು: ಮಂಗಳೂರಿನ ಸಯ್ಯಾದ್ರಿ ತಾಂತ್ರಿಕ ವಿದ್ಯಾಲಯದಲ್ಲಿ ಭಾನುವಾರ ಸಂಜೆ ವಿಜಯವಾಣಿ ದಿಗ್ವಿಜಯ ಮಾದ್ಯಮ ಸಹಯೋಗದಲ್ಲಿ ನಡೆದಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಸಿನಿಮಾ ಗೀತೆಗಳ ರಸಸಂಜೆಯ ಕಾರ್ಯಕ್ರಮದಲಲಿ ಕಾಸರಗೋಡಿನ ಯುವ ಪ್ರತಿಭಾನ್ವಿತೆಯ ಗಾಯನ ಸ್ವತಃ ಎಸ್ ಪಿ ಬಿ ಸಹಿತ ಗಣ್ಯರ ಶ್ಲಾಘನೆಗೊಳಗಾಯಿತು.
ಕಾಸರಗೋಡಿನ ಪ್ರತಿಭೆ ಕು.ಭಾಗ್ಯಶೀ ಪಾಲ್ಗೊಂಡಿದ್ದು "ನಾನಯ್ಯ.. ಗೊಂಬೆ..ನಾನಯ್ಯ" ಎಂಬ ಹಾಡನ್ನು ಹಾಡಿ ಜನರ ಮನಸೂರೆಗೊಳ್ಳುವ ಮೂಲಕ ಕಾಸರಗೋಡಿನವರು ಹೆಮ್ಮೆ ಪಡುವಂತೆ ಮಾಡಿರುತ್ತಾಳೆ. ಅಡೂರು ಶಾಲಾ ಅಧ್ಯಾಪಕ ಸತ್ಯಶಂಕರ ಭಟ್ ಅವರ ಸುಪುತ್ರಿಯಾದ ಈಕೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಪ್ರೌಢಶಾಲೆಯ ಹಳೆವಿದ್ಯಾರ್ಥಿನಿ ಎನ್ನುವುದು ಇನ್ನೊಂದು ವಿಶೇಷ..!! ಇದು ಮಹಾಜನ ಶಾಲೆಗೆ ಇನ್ನೊಂದು ಹಿರಿಮೆಯನ್ನು ತಂದುಕೊಟ್ಟಿದೆ.


