ಪೆರ್ಲ: ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ನೇತೃತ್ವದಲ್ಲಿ ಭಾನುವಾರ ನಡೆದ ಸಾಹಿತ್ಯ ಸಂವಾದ ಅಭಿವ್ಯಕ್ತಿ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸದಸ್ಯೆ ವನಿತಾ ಆರ್ ಶೆಟ್ಟಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಎಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ,ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಭಾಗವಹಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ಉಪಸ್ಥಿತರಿದ್ದರು.
ಸಾಹಿತ್ಯ ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಬೇರಿಕೆ (ಹನಿಕವಿ),ಸುಂದರ ಬಾರಡ್ಕ (ಕಥೆ),ಚೇತನ ಕುಂಬ್ಳೆ (ಗಝಲ್),ಕಿಶೋರ್ (ಆಂಗ್ಲ) ,ಶ್ರೀನಿವಾಸ ಪೆರಿಕ್ಕಾನ (ಮರಾಠಿ) ಸುಜಯ ಸಜಂಗದ್ದೆ ( ಕವಿಯತ್ರಿ) ಕುಮಾರಿ ಗ್ರೀಷ್ಮಾ ( ಬಾಲ ಕವಿಯತ್ರಿ) ತಮ್ಮ ಬರಹಗಳನ್ನು ವಾಚಿಸಿದರು. ಆಶೋಕ್ ಶೆಟ್ಟಿ ಪಾಲೆಪ್ಪಾಡಿ ಭಾವಗೀತೆ ಹಾಡಿದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ , ಬಾಲಕೃಷ್ಣ ಬೇರಿಕೆ ,ಚೇತನಾ ಕುಂಬ್ಳೆ ತಮ್ಮ ಕೃತಿಗಳನ್ನು ಗ್ರಂಥಾಲಯಕ್ಕೆ ನೀಡಿದರು. ತೀರ್ಥಲತಾ ಮತ್ತು ಪ್ರವೀಣ್ ಸ್ವರ್ಗ ರೆಡಿಯೋ ವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕುಮಾರಿ ತುಷಾರ ಪ್ರಾರ್ಥಿಸಿದರು.ಕಾರ್ಯದರ್ಶಿ ರಾಮಚಂದ್ರ ಎಂ ಸ್ವಾಗತಿಸಿ ರವಿ ವಾಣೀನಗರ ವಂದಿಸಿದರು.ಸಂಘಟಕ ,ಪತ್ರಕರ್ತ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.



