HEALTH TIPS

ಒಮಾನ್‍ನ ಸುಲ್ತಾನ್ ಕಬೂಸ್ ನಿಧನ: ಪ್ರಧಾನಿ ಸಂತಾಪ, ಭಾರತದಲ್ಲಿ ಒಂದು ದಿನ ಶೋಕಾಚರಣೆ

    ನವದೆಹಲಿ: ಶನಿವಾರ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದ ಒಮಾನ್‍ನ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್  ಅವರ ಗೌರವ ಸೂಚಕವಾಗಿ ಸೋಮವಾರ (ಜ. 13) ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು.
      ನಾಳೆ ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮಗಳು ನಡೆಯುವುದಿಲ್ಲವೆಂದು ಗೃಹ ಸಚಿವಾಲಯ (ಎಂಎಚ್‍ಎ) ಹೊರಡಿಸಿದ ಆದೇಶದಲ್ಲಿ ಹೇಳಿದೆ. ಸುಲ್ತಾನ್ ಕಬೂಸ್ ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಆಡಳಿತಗಾರರಲ್ಲಿ ಒಬ್ಬರು.ಬಹುದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಶನಿವಾರ ನಿಧನರಾದರು.1970 ರಿಂದ ಓಮನ್ ಆಡಳಿತಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಸುಲ್ತಾನ್ ಕಬೂಸ್  ತಮ್ಮ ತಂದೆಯನ್ನು ರಕ್ತರಹಿತ ದಂಗೆಯಿಂದ ಉಚ್ಚಾಟಿಸಿ ಅಧಿಕಾರಕ್ಕೆ ಬಂದಿದ್ದರು.
     ಪ್ರಧಾನಿ ನರೇಂದ್ರ ಮೋದಿ ಒಮಾನ್‍ನ ಸುಲ್ತಾನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.  ಅವರನ್ನು 'ಭಾರತ ಮತ್ತು ಜಗತ್ತಿನ ಶಾಂತಿಯ ದಾರಿದೀಪ' ಎಂದು ಸ್ಮರಿಸಿದ್ದಾರೆ. ಒಮಾನ್ ಅನ್ನು ಆಧುನಿಕ ಮತ್ತು ಸಮೃದ್ಧ ರಾಷ್ಟ್ರವಾಗಿ ಪರಿವರ್ತಿಸಿದ ಸುಲ್ತಾನ್ ಕಬೂಸ್ ಒಬ್ಬ 'ದೂರದೃಷ್ಟಿಯ ನಾಯಕ ಮತ್ತು ರಾಜಕಾರಣಿ' ಎಂದು ಪ್ರಧಾನಿ ಹೇಳಿದ್ದಾರೆ.
I am deeply saddened to learn about the passing away of His Majesty Sultan Qaboos bin Said al Said. He was a visionary leader and statesman who transformed Oman into a modern and prosperous nation. He was a beacon of peace for our region and the world.
View image on Twitter
6,338 p

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries