ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರೆಯ ಅಂಗವಾಗಿ ಬೆಡಿ ಮಹೋತ್ಸವ ಜ.17 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೆÇಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದಾರೆ.
ದೇವಸ್ಥಾನ ಪರಿಸರ, ಪೆÇಲೀಸ್ ಠಾಣೆ ರಸ್ತೆ, ಕುಂಬಳೆ ಪೇಟೆ, ಶಾಲೆ ಮೈದಾನ, ಬದಿಯಡ್ಕ ರಸ್ತೆ ಸಹಿತ ಹಲವೆಡೆ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದು ಜನರ ಚಲನ ವಲನಗಳನ್ನು ಪೆÇಲೀಸರು ವೀಕ್ಷಿಸುತ್ತಿದ್ದಾರೆ.
ಕುಂಬಳೆ ಸಿ.ಐ. ರಾಜೀವನ್, ಎಸ್.ಐ. ಸಂತೋಷ್ ಕುಮಾರ್, ಅಡೀಶನಲ್ ಎಸ್.ಐ. ರತ್ನಾಕರನ್ ಸಹಿತ ಹಲವು ಪೆÇಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತು ಏರ್ಪಡಿಸಲಾಗಿದೆ. ಇದಲ್ಲದೆ ಮಂಜೇಶ್ವರ, ಬದಿಯಡ್ಕ, ಕಾಸರಗೋಡು ಠಾಣೆಗಳ ಎಸ್.ಐ.ಗಳು ಬಂದೋಬಸ್ತು ಮೇಲ್ನೋಟ ವಹಿಸುತ್ತಿದ್ದಾರೆ.
ಘರ್ಷಣೆಗೆ ಯತ್ನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮದ್ಯಪಾನ ಸೇವಿಸಿ ತಿರುಗಾಡುತ್ತಿರುವುದು ಕಂಡು ಬಂದಲ್ಲಿ ಅವರನ್ನು ಸೆರೆ ಹಿಡಿಯಲಾಗುವುದೆಂದು ಪೆÇಲೀಸರು ತಿಳಿಸಿದ್ದಾರೆ.

