HEALTH TIPS

ಕೊರೊನಾ-ಕೇರಳದಲ್ಲಿ ಎರಡು ಹೊಸ ಪ್ರಕರಣ ಪತ್ತೆ:ಒಟ್ಟು 21ಮಂದಿಯಲ್ಲಿ ವೈರಸ್ ಖಚಿತ


        ಕೊಚ್ಚಿ: ವಿದೇಶದಲ್ಲಿ ವೈದ್ಯಕೀಯ  ಪದವಿ ಪೂರೈಸಿ ವಾಪಸಾದ ತಿರುವನಂತಪುರ ನಿವಾಸಿಯೊಬ್ಬರಲ್ಲಿ ಕೋವಿಡ್-19ಖಚಿತಪಡಿಸಲಾಗಿದೆ. ಮುನ್ನಾರ್‍ಗೆ ಆಗಮಿಸಿದ ಅಮೆರಿಕಾ ನಿವಾಸಿಯಲ್ಲೂ ಕೋವಿಡ್ ವೈರಸ್ ಪತ್ತೆಯಾಗಿದ್ದು, ಕೇರಳದಲ್ಲಿ ವೈರಸ್ ಬಾಧಿತರ ಸಂಖ್ಯೆ 21ಕ್ಕೇರಿದೆ.
          ಆಯಾ ಜಿಲ್ಲೆಯಲ್ಲಿರುವ ವಿದೇಶಿಯರ ಪ್ರವಾಸ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಇನ್ನು ತಪಸಣೆಗೆ ಒಳಪಟ್ಟ ಶಂಕಿತ ವಿದೇಶೀಯರು ವರದಿ ಲಭಿಸುವಲ್ಲಿ ವರೆಗೆ ತೆರಳದಂತೆಯೂ ಸೂವಚಿಸಲಾಗಿದೆ. ಕೋವಿಡ್ ತಪಾಸಣೆ ಚುರುಕುಪಡಿಸಲಾಗುವುದು ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ. ಜನತೆ ಮನೆಯಿಂದ ಹೊರಬರುವುದಕ್ಕೆ ಯಾವುದೇ ನಿಯಂತ್ರಣವಿಲ್ಲ, ಆದರೆ ಗುಂಪುಗೂಡುವುದು ಸಾಧ್ಯವಿಲ್ಲ. ವಾಹನದಲ್ಲಿ ತೆರಳುವವರು ತಪಾಸಣೆಗೆ ಸಹಕರಿಸುವಂತೆಯೂ ಸೂಚಿಸಲಾಗಿದೆ.
ಇನ್ನೊಂದೆಡೆ ಯುಕೆಯಿಂದ ಆಗಮಿಸಿದ ಪ್ರವಾಸಿಗರಲ್ಲಿ ಒಬ್ಬನಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈತನನ್ನು ಹಾಗೂ ಈತನ ಪತ್ನಿಯನ್ನು ಕಳಮಶ್ಯೇರಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸೊಲೇಶನ್ ವಾರ್ಡಿಗೆ ಸೇರ್ಪಡೆಗೊಳಿಸಲಾಗಿದೆ. ದುಬಾಯಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇವರನ್ನು ತಪಾಸಣೆ ನಡೆಸಿದಾಗ ಸಂಶಯ ವ್ಯಕ್ತವಾಗಿ ಇವರನ್ನು ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗಿದೆ. ತಂಡದಲ್ಲಿದ್ದ ಇತರರನ್ನು ಸುರಕ್ಷಾ ಕ್ರಮೀಕರಣದೊಂದಿಗೆ ಹೋಟೆಲ್‍ನ ಐಸೊಲೇಶನ್‍ನಲ್ಲಿರಿಸಲಾಗಿದೆ. ಇವರನ್ನು ಹೊರತುಪಡಿಸಿ, ಉಳಿದ 270ಮಂದಿಯ ತಂಡವಿದ್ದ ವಿಮಾನ ದುಬಾಯಿಗೆ ಪ್ರಯಾಣ ಬೆಳೆಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries