HEALTH TIPS

ಕೊರೊನಾದ 3ನೇ ಹಂತದಲ್ಲಿ ಭಾರತ: 5-10 ದಿನ ತುಂಬಾ ಎಚ್ಚರದಿಂದಿರಿ


       ನವದೆಹಲಿ: ಹೌದು ಈಗ ಭಾರತ ಕೊರೊನಾ ವೈರಸ್ ಭೀಕರತೆಯ 3ನೇ ಹಂತದಲ್ಲಿದೆ. ದೇಶದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಡಾ. ಗಿರಿಧರ್ ಗ್ಯಾನಿ ಎಚ್ಚರಿಕೆ ನೀಡಿದ್ದಾರೆ. ಗಿರಿಧರ್ ಕೊವಿಡ್ 19 ಆಸ್ಪತ್ರೆಗಳ ಟಾಸ್ಕ್ ಫೆÇೀರ್ಸ್ ಕನ್‍ವೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಸಂಸ್ಥಾಪಕರೂ ಆಗಿದ್ದಾರೆ. ಮಾರ್ಚ್ 24ರಂದು ಪ್ರಧಾನಿ ಮೋದಿಯವರೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಕೊವಿಡ್ 19 ಹಾಸ್ಪಿಟರ್ ಟಾಸ್ಕ್ ಫೆÇೀರ್ಸ್ ಆರಂಭವಾಯಿತು. ನೀತಿ ಆಯೋಗವು ಈ ಟಾಸ್ಕ್ ಫೆÇೀರ್ಸ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ.
     ಡಾ. ಗ್ಯಾನಿ ಅವರು ಕ್ವಾಲಿಟಿ ಮ್ಯಾನೇಜ್‍ಮೆಂಟ್‍ನಲ್ಲಿ ಪಿಎಚ್‍ಡಿ ಮಾಡಿದ್ದಾರೆ.ನಾವು ಕೊರೊನಾ 3ನೇ ಹಂತವನ್ನು ತಲುಪಿದ್ದೇವೆ. ಆದರೆ ತರಬೇತಿ ಹೊಂದಿರುವ ವೈದ್ಯಕೀಯ ಸಿಬ್ಬಂದಿಯಿಲ್ಲ ಎಂಬ ಮಾತುಗಳನ್ನು ಅವರು ಆಡಿದ್ದಾರೆ.
      ಈಗ ಮೂರನೇ ಹಂತವನ್ನು ತಲುಪಿದ್ದೇವೆ. ಈಗ ನೇರವಾಗಿ ವಿದೇಶದಿಂದ ಬಂದಿರುವವರೊಂದಿಗೆ ಸಂಪರ್ಕ ಇಲ್ಲದವರಿಗೂ ಕೊರೊನಾ ಹರಡಿದೆ. ಇದು ಅತಿ ಕೆಟ್ಟ ಸಮಯ ಎಂದು ಹೇಳಿದ್ದಾರೆ.
     ಮುಂದಿನ 5-10 ದಿನ ನಿರ್ಣಾಯಕ, ಕೊರೊನಾ ಕಡಿಮೆಯಾಗುವ ಹಂತಕ್ಕೆ ಬಂದಿದೆಯೇ ಅಥವಾ ಇನ್ನೂ ಹೆಚ್ಚಾಗುತ್ತದೋ ಎಂದು ತಿಳಿಯುವ ಸಮಯ ಇದಾಗಿದೆ. ಆದರೆ ಮುಂದಿನ ಒಂದು ವಾರ ತುಂಬಾ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries