HEALTH TIPS

ಕೊರೋನಾ: ಕಳೆದ 14 ದಿನಗಳಿಂದ ದೇಶದ 25 ಜಿಲ್ಲೆಗಳಲ್ಲಿ ವೈರಸ್ ನಾಪತ್ತೆ


         ನವದೆಹಲಿ: ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಫಲ ಕೊಟ್ಟಿದೆ. ಈ ಮೊದಲು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳ ಅವಧಿಯಲ್ಲಿ ಒಂದೇ ಒಂದು ಸೋಂಕು ಪ್ರಕರಣಗಳೂ ದಾಖಲಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
        ನಿನ್ನೆಯಷ್ಟೇ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಮುಂದಿನ ಆರು ವಾರಗಳ ಕಾಲ ಪರೀಕ್ಷೆ ನಡೆಸಲು ಬೇಕಾದ ಪರಿಕರಗಳು ಸರ್ಕಾರದ ಬಳಿ ಲಭ್ಯವಿದೆ. ಈವರೆಗೆ 2 ಲಕ್ಷ ಜನರ ಮಾದರಿಗಲನ್ನು ಪರೀಕ್ಷೆ ನಡೆಸಲಾಗಿದೆ. ಕೊರೋನಾ ವೈರಸ್ ಪತ್ತೆಯಾಗಿದ್ದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗದೇ ಇರುವುದು ಧನಾತ್ಮಕ ಬೆಳವಣಿಗೆ. ಲಾಕ್'ಡೌನ್ ಅನ್ನು ಜಿಲ್ಲಾಡಳಿತಗಳು ಸರಿಯಾಗಿ ಜಾರಿಗೊಳಿಸಿದ್ದರಿಂದ ಈ ಫಲಿತಾಂಶ ದೊರೆತಿದೆ ಎಂದು ಹೇಳಿದರು.
     ಇಷ್ಟು ದಿನ ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳನ್ನು ಮಾತ್ರ ಕೊರೋನಾ ಪರೀಕ್ಷೆಗೆ ಒಲಪಡಿಸುತ್ತಿದ್ದ ಭಾರತ ಸರ್ಕಾರ ಇದೀಗ ಕೊರೋನಾ ಸೋಂಕು ಇಲ್ಲಿಯವರೆಗೂ ವರದಿಯಾಗದ ಕೋಲ್ಟ್ ಸ್ಪಾಟ್ ಗಳಲ್ಲೂ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಸೋಂಕು ಪತ್ತೆಯಾಗದೆ ಒಳಗೊಳಗೇ ಹರಡುವುದನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
      ಪ್ರಸ್ತುತ ದೇಶದ ಅರ್ಧದಷ್ಟು ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಸೋಂಕು ವರದಿಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಂದೂ  ಸೋಂಕು ವರದಿಯಾಗಿಲ್ಲ. ಆ ಜಿಲ್ಲೆಗಳಲ್ಲಿ ಕೋಲ್ಟ್ ಸ್ಪಾಟ್'ಗಳು ಎಂದು ಗುರುತಿಸಲಾಗಿದೆ. ಆದರೆ, ಭಾರತದಲ್ಲಿ ಸಾಕಷ್ಟು ಟೆಸ್ಟಿಂಗ್  ನಡೆಸುತ್ತಿಲ್ಲ. ಆದ್ದರಿಂದಲೇ ಸೋಂಕು ಹೆಚ್ಚಾಗಿ ವರದಿಯಾಗಿಲ್ಲ ಎಂಬ ಟೀಕೆಗಳಿವೆ. ಹೀಗಾಗಿ ಸೋಂಕು ಹರಡುತ್ತಿರುವುದು ಖಚಿತಪಟ್ಟಿರದ ಜಿಲ್ಲೆಗಳಲ್ಲಿ ಕೊರೋನಾ ಟೆಸ್ಟಿಂಗ್ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries