ಅಹಮದಾಬಾದ್: ಕೊರೋನಾ ವೈರಸ್ ಗೆ ಮದ್ದು ಕಂಡುಹಿಡಿಯುವ ನಿಟ್ಟಿನಲ್ಲಿ ಗುಜರಾತ್ ನ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ.
ಕೋವಿಡ್-19 ಗೆ ಕಾರಣವಾಗಿರುವ ವೈರಾಣುವಿನ ಜಿನೋಮ್ ಸೀಕ್ವೆನ್ಸ್ ನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೀನೋಮ್ ಎಂದರೆ ವಂಶವಾಹಿಗಳ ಗುಚ್ಛ. ಇದು ವೈರಾಣುಗಳ ನಿರ್ದಿಷ್ಟ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಜೀನೋಮ್ ಸೀಕ್ವೆನ್ಸ್ ಅಥವಾ ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದರಿಂದ ವೈರಾಣುವಿನ ಮೂಲವನ್ನು ತಿಳಿದು ಸೂಕ್ತ ಚಿಕಿತ್ಸಾ ವಿಧಾನಕ್ಕೆ ಸಹಕಾರಿಯಾಗಲಿದೆ.
ಮೊದಲ ಬಾರಿಗೆ ಭಾರತದಲ್ಲಿ ಗುಜರಾತ್ ನ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರ (ಜಿಬಿಆರ್ ಸಿ) ದ ವಿಜ್ಞಾನಿಗಳು ಜೀನೋಮ್ ಸೀಕ್ವೆನ್ಸ್ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಗುಜರಾತ್ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
Gujarat is proud of scientists at Gujarat Biotechnology Research Centre (GBRC), the only State Govt laboratory in India that has reported COVID19 whole genome sequence which will be helpful in tracking origin, drug targets, vaccine & association with virulence.#IndiaFightsCorona
3,213 people are talking about this
ಜೀನೋಮ್ ಸೀಕ್ವೆನ್ಸ್ ವೈರಸ್ ನ ಮೂಲ, ಔಷಧಗಳ ಟಾರ್ಗೆಟ್ ಹಾಗೂ ಚುಚ್ಚುಮದ್ದುಗಳನ್ನು ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈಗಾಗಲೇ ಐಸಿಎಂಆರ್ ನಲ್ಲಿನ ಸಂಶೋಧಕರು ಭಾರತದಲ್ಲಿರುವ ಎರಡು ಬಾವಲಿ ಪ್ರಬೇಧಗಳಲ್ಲಿ ಕೊರೋನಾ ವೈರಸ್ ನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಳನ್ನು ಹರಡುವ ಸಾಮಥ್ರ್ಯವಿರುವ ಹೊಸ ಪ್ರಬೇಧಗಳನ್ನು ತಿಳಿಯಲು ಬಾವಲಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.



