HEALTH TIPS

ಕೋವಿಡ್-19: ಎಲ್ಲಾ ವಿಜ್ಞಾನಿಗಳ ಕಣ್ಣು ಬಿಸಿಜಿ ಲಸಿಕೆ ಮೇಲೆ.!

   
          ನವದೆಹಲಿ:  ಮಹಾಮಾರಿ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ಹೆಣಗಾಡುತ್ತಿದೆ. ಕೋವಿಡ್-19 ನಿಂದಾಗಿ ಇಲ್ಲಿಯವರೆಗೂ 1,14,980 ಪ್ರಾಣ ಕಳೆದುಕೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಲೇ ಇದೆ. ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಲ್ಲಿಯವರೆಗೂ 4,31,613 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೂ, ಕೋವಿಡ್-19 ಗೆ ನಿರ್ದಿಷ್ಟ ಔಷಧಿಯನ್ನು ಈವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕೊರೊನಾ ವೈರಸ್ ನ ಬಗ್ಗು ಬಡಿಯಲು ಔಷಧಿ ಮತ್ತು ಲಸಿಕೆಯ ಅಭಿವೃದ್ಧಿ ಕಾರ್ಯದಲ್ಲಿ ಹಲವು ಸಂಶೋಧಕರು ಮತ್ತು ವಿಜ್ಞಾನಿಗಳು ತೊಡಗಿದ್ದಾರೆ.
      ಈ ನಡುವೆ ಬಹುತೇಕ ವಿಜ್ಞಾನಿಗಳು ಮತ್ತು ಸಂಶೋಧಕರ ಕಣ್ಣು ಬಿಸಿಜಿ ಲಸಿಕೆ ಮೇಲೆ ಬಿದ್ದಿದೆ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ದಶಕಗಳಿಂದ ಬಳಕೆಯಲ್ಲಿರುವ ಬಿಸಿಜಿ ಲಸಿಕೆ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗುತ್ತಾ ಎಂಬುದರ ಕುರಿತು ಅಧ್ಯಯನ, ಪ್ರಯೋಗ ನಡೆಯುತ್ತಿದೆ.
        ಬಿಸಿಜಿ ಲಸಿಕೆ ಕುರಿತು:
     
       ಕ್ಷಯ ರೋಗ (ಟ್ಯೂಬರ್ ಕ್ಯುಲಾಸಿಸ್) ವಿರುದ್ಧ ಹೋರಾಡಲು ಬಿಸಿಜಿ - Bacillus Calmette Guerin ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಟಿಬಿ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಬಿಸಿಜಿ ಲಸಿಕೆ ರಕ್ಷಣೆ ನೀಡುತ್ತದೆ.
            ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
     ಸದ್ಯ ಇಡೀ ಜಗತ್ತನ್ನು ಭಾದಿಸುತ್ತಿರುವ ಕೋವಿಡ್-19ಗೆ 'ನೋವೆಲ್ ಕೊರೊನಾ ವೈರಸ್' ಕಾರಣವಾಗಿರುವುದು ಎಲ್ಲರಿಗೂ ಗೊತ್ತಿದೆ. ಟಿಬಿ ಹೊರತಾಗಿ ಇತರೆ ಸೂಕ್ಷ್ಮ ಜೀವಿಗಳಿಂದಲೂ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬಿಸಿಜಿ ಲಸಿಕೆ ಸಹಕಾರಿಯಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries