HEALTH TIPS

ಕೊರೋನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು, ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ


       ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ.
        ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊರೋನಾ ಕುರಿತ ಮಾಹಿತಿ ನೀಡಿದರು. 'ಲಾಕ್ ಡೌನ್ ಘೋಷಣೆ ಬಳಿಕ ಭಾರತದಲ್ಲಿ ಕೊರೋನಾ ಪ್ರಸರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಲಾಕ್ ಡೌನ್  ಗೂ ಮುನ್ನ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 3 ದಿನಗಳು ಹಿಡಿಯುತ್ತಿತ್ತು. ಆದರೆ ಲಾಕ್ ಡೌನ್ ಹೇರಿದ ಬಳಿಕ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು ಸರಾಸರಿ 7 ದಿನಗಳು ಬೇಕಾಗುತ್ತಿದೆ. ಪ್ರಸ್ತುತ ಪ್ರತೀ 6.2 ದಿನಗಳಿಗೆ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಿದರು.
      ಅಂತೆಯೇ 'ಪ್ರಸ್ತುತ ನಮ್ಮ ಗುರಿ ಏನಿದ್ದರೂ, ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಪ್ರಸರಿಸದಂತೆ ತಡೆಯಬೇಕು ಮತ್ತು ಅದಕ್ಕೆ ಆದಷ್ಟೂ ಶೀಘ್ರವಾಗಿ ಲಸಿಕೆ ಕಂಡು ಹಿಡಿದು ಮಹಾ ಮಾರಿಯನ್ನು ತೊಲಗಿಸಬೇಕು. ಇದಕ್ಕಾಗಿ ನಮ್ಮ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್  ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೋಂಕಿತರಿಗೆ ಬಿಸಿಜಿ, ಪ್ಲಾಸ್ಮಾ ಥೆರಪಿ, ಮೋನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸಕಾರಾತ್ಮಕ ಫಲಿತಾಂಶ ಬರುತ್ತಿದೆ. ದೇಶದಲ್ಲಿ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯವಾಗಿ  ಏರಿಕೆಯಾಗುತ್ತಿದ್ದು, ಸೋಂಕಿತರು ಮತ್ತು ಗುಣಮುಖರಾಗುತ್ತಿರುವವರ ಪ್ರಮಾಣ 80:20 ಅನುಪಾತದಲ್ಲಿದೆ. ಇದು ಕೊರೋನಾ ಪೀಡಿತ ಇನ್ನಾವುದೇ ದೇಶಗಳಿಗಿಂತ ಉತ್ತಮ ಅನುಪಾತವಾಗಿದೆ ಎಂದು ಲವ್ ಅಗರ್ವಾಲ್ ಹೇಳಿದ್ದಾರೆ.
       24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು, ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ
ಇನ್ನು ದೇಶದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ಮಾಹಿತಿ ನೀಡಿದ ಲವ್ ಅಗರ್ವಾಲ್ ಅವರು, ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್  ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಅಂತೆಯೇ ಕಳೆದ 24 ಗಂಟೆಗಳ ಅವಧಿಯಲ್ಲಿ 1007 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆಯಾಗಿದೆ. ಈ ಪೈಕಿ 1,749 ಮಂದಿ ಸೋಂಕಿತರು  ಗುಣಮುಖರಾಗಿದ್ದಾರೆ. ಈ ಪ್ರಮಾಣವನ್ನು ಹೋಲಿಕೆ ಮಾಡಿದರೆ ಭಾರತದಲ್ಲಿ ಪ್ರತೀ 24 ಮಾದರಿಗಳಲ್ಲಿ 1 ಪಾಸಿಟಿವ್ ಪ್ರಕರಣ ಕಂಡುಬರುತ್ತಿದೆ ಎಂದು ಹೇಳಿದರು.
       ಕೊರೋನಾ ವೈರಸ್ ಗಾಗಿಯೇ ದೇಶದಲ್ಲಿ ಈ ವರೆಗೂ 1919 ಆಸ್ಪತ್ರೆಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 1.73 ಲಕ್ಷ ಐಸೋಲೇಷನ್ ಬೆಡ್ ಗಳು ಭಾರತದಲ್ಲಿದ್ದು, ಪ್ರತಿ ನಿತ್ಯ 10 ಲಕ್ಷ ಕೊರೋನಾ ಟೆಸ್ಟ್ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೆ ತಿಂಗಳಿಗೆ 10 ಲಕ್ಷ ಖಖಿPಅಖ ಕಿಟ್  ಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಕೊರೋನಾ ವಿರುದ್ಧದ ಹೋರಾಟ ಇತರೆ ಯಾವುದೇ ದೇಶಗಳಿಗಿಂತ ಭಾರತದಲ್ಲಿ ಉತ್ತಮವಾಗಿದೆ ಎಂದು ಲವ್ ಅಗರ್ವಾಲ್ ಹೇಳಿದರು.
174 people are talking about this

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries