HEALTH TIPS

ಕೋವಿಡ್ ಪ್ರತಿರೋಧ : ಕಂದಾಯ ಇಲಾಖೆ ಸಿಬ್ಬಂದಿಯ ಅಹೋರಾತ್ರಿಯ ದೌತ್ಯ ಕ್ಕೆ 110 ದಿನಗಳು ಪೂರ್ಣ


         ಕಾಸರಗೋಡು: ಕೋರೋನಾ ಪ್ರತಿರೋಧ ಚಟುವಟಿಕೆಗಳಲ್ಲಿ ಅಹೋರಾತ್ರಿ ತೊಡಗಿಕೊಂಡಿರುವ ಜಿಲ್ಲೆಯ ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಸೇವೆಯ 110 ದಿನಗಳನ್ನು ಪೂರ್ಣಗೊಳಿಸಿದ್ದಾರೆ.
         ಇತರ ರಾಜ್ಯಗಳಿಂದ ಕೇರಳದ ಸ್ವಂತ ಊರಿಗೆ ಮರಳುವವರಿಗೆ ಅಗತ್ಯದ ಪಾಸ್ ಮಂಮಜೂರು ಮಾಡುವುದು, ತಲಪ್ಪಾಡಿ ಗಡಿಯ ಹೆಲ್ಪ್ ಡೆಸ್ಕ್ ನ ಚಟುವಟಿಕೆಗಳನ್ನು ಏಕೀಕರಣಗೊಳಿಸುವುದು, ಜಿಲ್ಲಾಧಿಕಾರಿ ಕಚೇರಿಯ ಕೋವಿಡ್ ನಿಯಂತ್ರಣ ಕೊಠಡಿಯ ಚಟುವಟಿಕೆಗಳಿಗೆ ನೇತೃತ್ವ ನೀಡುವುದು, ಸೋಂಕು ಪ್ರತಿರೋಧ ಸಂಬಂಧ ಜಿಲ್ಲಾಡಳಿತೆ ನಡೆಸುವ ವಿವಿಧ ಸಭೆಗಳ ಏಕೀಕರಣ ಸಹಿತ ವಿವಿಧ ಮಜಲುಗಳ ಸೇವೆಯಲ್ಲಿ ಜಿಲ್ಲೆಯ ಕಂದಾಯ ಸಿಬ್ಬಂದಿ ಸಕ್ರಿಯರಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ದುರಂತ ನಿವಾರಣೆ ವಿಭಾಗ ಕಂದಾಯ ಇಲಾಖೆಯ ಚಟುವಟಿಕೆಗಳನ್ನು ಏಕೀಕರಗೊಳಿಸುತ್ತದೆ. ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ಪ್ರಾಮಾಣಿಕತೆಯೊಂದಿಗೆ ಇವರು ಆರೋಗ್ಯ ಇಲಾಖೆ ಕಾರ್ಯಕರ್ತರೊಂದಿಗೆ ಹೆಗಲಿಗೆ ಹೆಗಲು ನೀಡಿ ನಡೆಸಿದ ಯತ್ನದ ಫಲವಾಗಿ ಕೋವಿಡ್ ಪ್ರತಿರೋಧದ ದ್ವಿತೀಯ ಹಂತದ ವೇಳೆಗೆ ಸಾಮಾಜಿಕ ಹರಡುವಿಕೆ ತಡೆಗಟ್ಟಲು ಸಾಧ್ಯವಾಗಿತ್ತು. ಕೋವಿಡ್ ಪ್ರತಿರೋಧ ಮೂರನೇ ಹಂತಕ್ಕೆ ತಲಪಿರುವ ವೇಳೆಯೂ ಇವರ ಸೇವೆ ಸಕ್ರಿಯವಾಗಿಯೇ ಮುಂದುವರಿದಿದೆ.
        ಅವಿಶ್ರಾಂತ 110 ದಿನಗಳು:
   ಊಹೆಗೂ ಮೀರಿದ, ಈ ವರೆಗೆ ಕಂಡು-ಕೇಳದೇ ಇದ್ದ ಕೊರೋನಾ ಸೋಂಕು ಎಂಬ ಮಹಾಮಾರಿಯ ಕರಾಳಹಸ್ತ ಕಾಸರಗೋಡು ಜಿಲ್ಲೆಯಲ್ಲಿ ಫೆ.3ರಂದು ಮೊದಲ ಬಾರಿಗೆ ತನ್ನ ಅಸ್ತಿತ್ವವನ್ನು ಖಚಿತಪಡಿಸಿತ್ತು. ವ್ಯೂಹಾನ್ ನಿಂದ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬನಿಗೆ ಈ ಸೋಂಕು ತಗುಲಿರುವುದು ಖಚಿತಗೊಂಡ ಸಂದರ್ಭದಲ್ಲೇ ಜಿಲ್ಲಾಡಳಿತೆಯು ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ, ಕಂದಾಯ ಇಲಾಖೆಯ ನೇತೃತ್ವದಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಬಿರುಸಿನೊಂದಿಗೆ ತೊಡಗಿತ್ತು. ಎಲ್ಲ ಚಟುವಟಿಕೆಗಳನ್ನು ಏಕೀಕೃತ ಗೊಳಿಸುವ ನಿಟ್ಟಿನಲ್ಲಿ 15 ಉಪಸಿತಿಗಳನ್ನೂ ರಚಿಸಲಾಯಿತು. ಈ ಎಲ್ಲ ಯತ್ನಗಳು ಫಲನೀಡತೊಡಗಿದ್ದುವು. ಫೆ.16ರಂದು ಜಿಲ್ಲೆಯ ಪ್ರಥಮ ರೋಗಿ ಪೂರ್ಣಗುಣಮುಖರಾಗಿದ್ದರು. ಎರಡನೇ ಹಂತದ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾ.14ರಂದು ನಡೆದ ಸಭೆಯಲ್ಲಿ ಪ್ರತಿರೋಧ ಚಟುವಟಿಕೆಗಳ ರೂಪುರೇಷೆ ಸಿದ್ಧಗೊಂಡಿತ್ತು. ಮಾ.16ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕೊಠಡಿಯೂ ಆರಂಭಗೊಂಡಿತ್ತು. ಇದರ ಹೊಣೆಗಾರಿಕೆ ಕಂದಾಯ ಇಲಾಖೆಯದೇ ಆಗಿತ್ತು. ಸಾರ್ವಜನಿಕರಿಗೆ ಅಗತ್ಯದ ಸೇವೆ ಒದಗಿಸುವುದು, ಪಾಸ್ ಒದಗಿಸುವುದು, ಜನತೆಯ ಪ್ರಶ್ನೆಗಳಿಗೆ ಉತ್ತರಿಸುವುದು ಇತ್ಯಾದಿ ಸೇವೆಗಳೂ 24 ತಾಸೂ ನಡೆದುಬರುತ್ತಿವೆ. ಮಾ.22ರಂದು ರಾತ್ರಿ 9 ಗಂಟೆಯಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೆ ಬಂದಿತ್ತು. ತದನಂತರ ನಡೆದ ಅಸಂಖ್ಯಾತ ಸಭೆಗಳ ಪೂರ್ಣ ಹೊಣೆಗಾರಿಕೆ ಕಂದಾಯ ಇಲಾಖೆಯದೇ ಆಗಿತ್ತು. ಇದೆಲ್ಲದರ ಫಲವಾಗಿ ಇಲಾಖೆಯ ಬಹುತೇಕ ಸಿಬ್ಬಂದಿ ತಮ್ಮ ಕಚೇರಿಯನ್ನೇ ಮನೆಯಾಗಿಸಿಕೊಂಡಿದ್ದಾರೆ. ಸ್ವಂತ ಮನೆಗೆ ತೆರಳುವ ಸಮಯಾವಕಾಶವೂ ಇವರಿಗೆ ಲಭಿಸಿಲ್ಲ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಎಲ್ಲ ಚಟುವಟಿಕೆಗಳ ಏಕೀಕರಣ ಉದ್ದೇಶದಿಂದ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ವಲಯ ಕಂದಾಯಾಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ತಾಲೂಕು ತಹಸೀಲ್ದಾರರಾದ ಎನ್.ಮಣಿರಾಜ್, ಪಿ.ಜೆ.ಆಂಟೋ, ವಿ.ರಾಜನ್, ಪಿ.ಕುಂuಟಿಜeಜಿiಟಿeಜಕಣ್ಣನ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಗಳಾಗಿ ನೇಮಿಸಿದ್ದರು. ಈ ಮೂಲಕ ನಡೆದ ವಿವಿಧ ಚಟವಟಿಕೆಗಳಫಲವಾಗಿ ಜಿಲ್ಲೆಯ ಕೊನೆಯ ರೋಗಿ ಗುಣಮುಖರಾಗಿ ಮೇ 10ರಂದು ಆಸ್ಪತ್ರೆಯಿಂದ ಬಿಡುಗಟಡಗೊಂಡಿದ್ದರು. ಮೇ 4ರಿಂದ ಇತರ ರಾಜ್ಯಗಳಿಂದ ಜಿಲ್ಲೆಯ ಮೂಲಕ ಕೇರಳ ಪ್ರವೇಶ ನಡೆಸಲು ತೊಡಗಿದ್ದರು. ಈ ವೇಳೆ ತಲಪ್ಪಾಡಿ ಗಡಿಯಲ್ಲಿ ಆಗಮಿಸುವವರ ಸಹಾಯಕ್ಕಾಗಿ ಹೆಲ್ಪ್ ಡೆಸ್ಕ್ ಸಹಿತ ಎಲ್ಲ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಈ ವರೆಗೆ ಶೇ 80 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ವಿದೇಶಗಳಿಂದ ಊರಿಗೆ ಮರಳುವವರಿಗೆ ಕ್ವಾರೆಟೈನ್ ನಡೆಸುವ ಸೌಲಭ್ಯವನ್ನೂ ವ್ಯವಸ್ಥಿತವಾಗಿ ಒದಗಿಸಲಾಗಿದೆ.
       ಈ ಎಲ್ಲ ಹೊಣೆಯನ್ನು ಹೊತ್ತು ದುಡಿಯುತ್ತಿರುವ ಕಂದಾಯ ಸಿಬ್ಬಂದಿಯ ದೌತ್ಯ ಇಂದು (ಮೇ 22ರಂದು) 110ನೇ ದಿನ ಪೂರ್ಣಗೊಳಿಸುತ್ತಿದೆ. ಇದನ್ನು ನಾಡು ಅತ್ಯಂತ ಗೌರವದಿಂದ ಕಂಡು ನಮಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries