HEALTH TIPS

ಕೊರೊನಾ : ಕೇರಳದಲ್ಲಿ ಮತ್ತೆ 24 ಮಂದಿಗೆ ಸೋಂಕು

   
             ಕಾಸರಗೋಡು: ಕೇರಳದಲ್ಲಿ ಗುರುವಾರ ಹೊಸದಾಗಿ 24 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ.  ಮಲಪ್ಪುರ ಜಿಲ್ಲೆಯಲ್ಲಿ 5, ಕಣ್ಣೂರು-4, ಕೋಟ್ಟಯಂ-3, ತೃಶ್ಶೂರು-3, ತಿರುವನಂತಪುರ, ಕೊಲ್ಲಂ. ಆಲಪ್ಪುಳ ಜಿಲ್ಲೆಯಲ್ಲಿ ತಲಾ 2, ಕಾಸರಗೋಡು, ಇಡುಕ್ಕಿ, ಪಾಲ್ಘಾಟ್ ತಲಾ ಒಂದರಂತೆ ಕೋವಿಡ್ ದೃಢೀಕರಿಸಲಾಗಿದೆ. ಈ ಪೈಕಿ 14 ಮಂದಿ ವಿದೇಶದಿಂದ ಬಂದವರು(ಯು.ಎ.ಇ-8, ಕುವೈಟ್-4, ಖತ್ತರ್-1, ಮಲೇಶ್ಯಾ-1), 10 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ-5, ತಮಿಳುನಾಡು-3, ಗುಜರಾತ್-1, ಆಂಧ್ರ ಪ್ರದೇಶ-1) ಬಂದವರು. ಇದೇ ವೇಳೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ ಗುಣಮುಖರಾಗಿದ್ದಾರೆ. ವಯನಾಡು ಜಿಲ್ಲೆಯ ಐವರು(ಇವರಲ್ಲೊಬ್ಬ ಮಲಪ್ಪುರ ನಿವಾಸಿ), ಕೋಟ್ಟಯಂ, ಎರ್ನಾಕುಳಂ(ಮಲಪ್ಪುರ ನಿವಾಸಿ), ಕಲ್ಲಿಕೋಟೆ ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 177 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 510 ಮಂದಿ ಗುಣಮುಖರಾಗಿದ್ದಾರೆ.
ಈ ವರೆಗೆ ಏರ್‍ಪೆÇೀರ್ಟ್ ಮೂಲಕ 5495, ಸೀಪೆÇೀರ್ಟ್ ಮೂಲಕ 1621, ಚೆಕ್‍ಪೆÇೀಸ್ಟ್ ಮೂಲಕ 68,844 ಮಂದಿ, ರೈಲು ಗಾಡಿಯಲ್ಲಿ 2136 ಮಂದಿ ಕೇರಳಕ್ಕೆ ಬಂದಿದ್ದಾರೆ. ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 80,138 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 79,611 ಮಂದಿ ಮನೆಗಳಲ್ಲೂ, 527 ಮಂದಿ ಆಸ್ಪತ್ರೆಯಲ್ಲೂ ನಿಗಾವಣೆಯಲ್ಲಿದ್ದಾರೆ. ಗುರುವಾರ ಶಂಕಿತ 153 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
         ಇದು ವರೆಗೆ 49,833 ಮಂದಿಯ ಸ್ಯಾಂಪಲನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 48,276 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಪ್ರಸ್ತುತ 28 ಹಾಟ್‍ಸ್ಪಾಟ್‍ಗಳಿವೆ.
ಕಾಸರಗೋಡಿನಲ್ಲಿ ಒಬ್ಬರಿಗೆ ಕೋವಿಡ್ : ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರಿಗೆ ಗುರುವಾರ ಕೋವಿಡ್ ಸೋಂಕು ಪಾಸಿಟಿವ್ ಆಗಿದೆ. ಚೆಂಗಳ ಗ್ರಾಮ ಪಂಚಾಯತ್ ನಿವಾಸಿ 41 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಇವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಮೇ 18ರಂದು ದುಬೈಯಿಂದ ಆಗಮಿಸಿದ್ದರು.
ಜಿಲ್ಲೆಯಲ್ಲಿ 2460 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2007 ಮಂದಿ, ಆಸ್ಪತ್ರೆಗಳಲ್ಲಿ 453 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ ಇಬ್ಬರು ಐಸೊಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. 398 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಜಿಲ್ಲೆಯಲ್ಲಿ 5945 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5264 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
     ಮಾಸ್ಕ್ ಧರಿಸದ 330 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 330 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ತಲಾ 500 ರೂ.ನಂತೆ ಆರೋಪಿಗಳಿಂದ 1,65,000 ರೂ. ದಂಡ ವಸೂಲಿ ಮಾಡಲಾಗಿದೆ.
     4 ಮಂದಿ ವಿರುದ್ಧ ಕೇಸು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 4 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮೂವರನ್ನು ಬಂ„ಸಲಾಗಿದ್ದು, 4 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸು, ವಿದ್ಯಾನಗರ 1, ಹೊಸದುರ್ಗ 1 ಕೇಸು ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂ„ಸಿ ಜಿಲ್ಲೆಯಲ್ಲಿ ಈ ವರೆಗೆ 2356 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 3003 ಮಂದಿಯನ್ನು ಬಂಧಿಸಲಾಗಿದ್ದು, 955 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries