HEALTH TIPS

ಮಹಾ ಕರ್ತವ್ಯ ಲೋಪ-ಗಡಿ ದಾಟುತ್ತಿರುವ ಮಾಫಿಯಾ ಗ್ಯಾಂಗ್‍ಗಳೊಂದಿಗೆ ಜನ್ಮದಿನಾಚರಣೆ


       ಮುಳ್ಳೇರಿಯ: ಜನರು ಪಾಸ್ ಇಲ್ಲದೆ ಗಡಿ ದಾಟದಂತೆ ತಡೆಯಲು ನಿಯೋಜಿಸಲಾದ ಪೆÇಲೀಸ್ ಅಧಿಕಾರಿಯೊಬ್ಬರು ಸ್ವತಃ ಜನ್ಮ ದಿನಾಚರಣೆಯನ್ನು ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಸಾರ್ವಜನಿಕವಾಗಿ ಆಚರಿಸಿ ವಿವಾದಕ್ಕೆ ಕಾರಣರಾಗಿದ್ದಾರೆ. ವಿಶೇಷವೆಂದರೆ ಈ ಪೋಲೀಸ್ ಅಧಿಕಾರಿ ಗಡಿದಾಟಿ ಬರುವ ಕಳ್ಳ ಮಾಲು ಸಾಗಾಣಿಕೆದಾರರೊಂದಿಗೆ ಸೇರಿ ಜನ್ಮ ದಿನಾಚರಣೆ ಆಚರಿಸಿದ್ದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.
    ಅಂತರ್ ರಾಜ್ಯ ಗಡಿಯಾಗಿರುವ ಗ್ರಾಮೀಣ ಪ್ರದೇಶವಾದ ಕುಳದಪಾರೆ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯನಿರತರಾಗಿದ್ದ ಪೋಲೀಸ್ ಅಧಿಕಾರಿಯೋರ್ವೃರು ತಮ್ಮ ಹುಟ್ಟುಹಬ್ಬವನ್ನು ಎಲ್ಲಾ ಕಾನೂನುಗಳನ್ನೂ ಗಾಳಿಗೆ ತೂರಿ ಮಾಫಿಯಾಗಳೊಂದಿಗೆ ಆಚರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ.
       ಮಾಫಿಯಾ ತಂಡವೊಂದು ಪೆÇಲೀಸರಿಗೆ ಆಹಾರ ನೀಡುವ ನೆಪದಲ್ಲಿ ಪೋಲೀಸರನ್ನೇ ಬಲೆಗೆ ಹಾಕಲು ಪ್ರಯತ್ನಿಸುತ್ತಿರುವುದಾಗಿ ಕೆಲವು ದಿನಗಳಿಂದ ಊಹಾಪೋಪಗಳು ಕೇಳಿಬಂದಿದ್ದವು. ಕೋವಿಡ್ ನಿಯಂತ್ರಣ ಕಾಯ್ದೆಯನ್ನು ಗಾಳಿಗೆ ತೂರಲಾಗಿದ್ದು, ಬರ್ತ್ ಡೇ ಕೇಕ್ ನ್ನು ಮುಖವಾಡ ಧರಿಸದೆ ಕತ್ತರಿಸಿರುವ ಪೋಟೋಗಳು ಜಾಲತಾಣದಲ್ಲಿ ಹರಿದಾಡಿದೆ. ಜೊತೆಗೆ ತಲೆಗೆ ಹಾಳೆಯ ಟೊಪ್ಪಿಗೆ (ಮುಟ್ಟಾಳೆ) ಧರಿಸಿರುವುದು ಕಂಡುಬಂದಿದೆ.  ಕೋವಿಡ್ ವಿರುದ್ಧ ಹೋರಾಟದಲ್ಲಿ ಜಗತ್ತಿಗೆ ಉದಾಹರಣೆಯಾದ ಕೇರಳ ಪೆÇಲೀಸರಿಗೆ ಇದೀಗ ಇಂತಹ ನಾಚಿಗೇಡಿತನ ಚಟುವಟಿಕೆಗಳು ಮಾನಹಾನಿಗೆ ಕಾರಣವಾಗಿದೆ.
       ಪೆÇಲೀಸ್ ಅಧಿಕಾರಿಯ ಜನ್ಮದಿನಾಚರಣೆ ಕಾರಣ ಎದ್ದಿರುವ ವಿವಾದ ಜಿಲ್ಲಾ ಪೋಲೀಸ್ ವರಿಷ್ಠರ ಅಂಗಳ ತಲಪಿದ್ದು ಅವರು ತನಿಖೆಗೆ ಆದೇಶ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries