ಮಂಜೇಶ್ವರ:ಕರೊನಾ ಲಾಕ್ ಡೌನ್ ಬಿಡುವಿನ ವೇಳೆಯಲ್ಲಿ ಯಾರೆಲ್ಲ ಏನೆಲ್ಲ ಮಾಡುತ್ತಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲೆಡೆ ಪ್ರಚಾರಗೊಳ್ಳುತ್ತಿದೆ. ಇಲ್ಲೊಬ್ಬ ಬಾಲಕ ತನ್ನ ಹವ್ಯಾಸಗಳಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದು ಮಾದರಿಯಾಗಿದ್ದಾನೆ.
ಕಾರ್ಟೂನ್ ಚ್ಯಾನಲ್ ಗಳು, ಡಿಸ್ಕವರಿ ಚ್ಯಾನಲ್ ಹಾಗೂ ಜಿಯೋಗ್ರಾಫಿಕ್ ಚ್ಯಾನಲ್ ಗಳಿಂದ ಪ್ರೇರಿತನಾಗಿ ಚಿಕ್ಕಂದಿನಿಂದಲೇ ಶಾಲಾ ರಜಾ ದಿನಗಳಲ್ಲಿ ಇತರ ಸ್ನೇಹಿತರೊಂದಿಗೆ ತಿರುಗಾಡದೆ ಸಾಕು ಪ್ರಾಣಿಗಳತ್ತ ಆಕರ್ಷಿತನಾಗಿ ಅವುಗಳಿಗೆ ಅನಾರೋಗ್ಯ ಎದುರಾದಾಗ ಬೇಕಾದ ಔಷಧಿಗಳನ್ನು ನೀಡಿ ಅವುಗಳೊಂದಿಗೆ ಆಟವಾಡುತ್ತಾ ಇದಕ್ಕಾಗಿ ಸಮಯವನ್ನೇ ಮೀಸಲಿರಿಸಿದ ಮೃಗ ಸ್ನೇಹಿಯಾಗುವುದರ ಜೊತೆಗೆ ಕೃಷಿ ಕ್ಷೇತ್ರದಲ್ಲೂ ಆಸಕ್ತಿಯನ್ನು ಹೊಂದಿದ ವಿದ್ಯಾರ್ಥಿಯಾಗಿದ್ದಾನೆ ಹದಿನಾರು ವರ್ಷ ಪ್ರಾಯದ ಆಹ್ಮದ್ ಶಹೀರ್.
ಗಾಯಗೊಂಡು ಅಲೆದಾಡುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ಪ್ರಾಣಾಪಾಯದಿಂದ ರಕ್ಷಿಸುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಈ ಪೆÇೀರ ಚಿಕ್ಕಂದಿನಿಂದಲೇ ಹಸು, ಬೆಕ್ಕು, ಮೊಲ, ಕೋಳಿ ಸೇರಿದಂತೆ ಇತರ ಸಾಕು ಪ್ರಾಣಿಗಳನ್ನು ತನ್ನತ್ತಿರ ಸೆಳೆಯುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದಾನೆ.
ಮಂಜೇಶ್ವರ ಕುನ್ನಿಲ್ ಜುಮಾ ಮಸೀದಿ ಪರಿಸರದಲ್ಲಿ ವಾಸವಗಿರುವ ಮೊಯ್ದೀನ್- ಸುರಯ್ಯ ದಂಪತಿಗಳ ಪುತ್ರನಾಗಿರುವ ಮೊಹಮ್ಮದ್ ಶಹೀರ್ ಮಂಜೇಶ್ವರ ಡಾನ್ ಬೋಸ್ಕೋ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ.
ಈತನಿಗೆ ಸಾಕು ಪ್ರಾಣಿಗಳ ಮೇಲಿರುವ ಸ್ನೇಹ ಇಂದು ನಿನ್ನೆ ಏನೂ ಆರಂಭಗೊಂಡದ್ದಲ್ಲ. ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಹಾಗೂ ಅದಕ್ಕೆ ಬೇಕಾಗಿ ಯಾವುದೇ ತ್ಯಾಗಕ್ಕೂ ಸಿದ್ದನಾಗುವುದರಲ್ಲಿ ಹಿಂದಿನಿಂದಲೇ ಈತನದ್ದು ಮೇಲುಗೈ ಎಂದೇ ಹೇಳಬಹುದು. ಇದೀಗ ಕೊರೊನಾ ಲಾಕ್ ಡೌನ್ ಕಾಲಾವಧಿಯಲ್ಲಿ ಮನೆ ಮುಂಬಾಗದಲ್ಲೇ ಹಲವು ರೀತಿಯ ಹೂ ದೋಟಗಳನ್ನು ಮಾಡುವುದರ ಜೊತೆಯಾಗಿ ಹಸಿರು ತರಕಾರಿ ಕೃಷಿ, ವಿವಿಧ ಜಾತಿಯ ಮೀನು ಸಾಕಣಿಕೆ, ವಿವಿಧ ಜಾತಿಯ ಕೋಳಿ, ಬೆಕ್ಕು, ಮೊಲ ಸೇರಿದಂತೆ ಇತರ ಹಲವು ಸಾಕು ಪ್ರಾಣಿಗಳನ್ನು ಕೂಡಾ ತಂದಿಟ್ಟು ಸಾಕುತಿದ್ದಾನೆ. ಬೆಕ್ಕಿನ ಜೊತೆಯಾಗಿ ಅತಿಯಾದ ಸ್ನೇಹವನ್ನು ತೋರುತ್ತಿರುವ ಶಹೀರ್ ನ ಜೊತೆಯಾಗಿ ಬೆಕ್ಕುಗಳು ಈತನ ಒಡನಾಡಿಯಾಗಿಯೇ ಜೊತೆಗೆ ಮಲಗುತ್ತಿರುವ ದೃಶ್ಯ ಕೂಡಾ ಕಂಡು ಬರುತ್ತಿದೆ.
ಶಾಲೆಯ ಕಲಿಯುವಿಕೆಯಲ್ಲೂ ಉತ್ತಮವಾದ ಆಸಕ್ತಿಯನ್ನು ಪ್ರದರ್ಶಿಸುತ್ತಿರುವ ಶಹೀರ್ ಶಾಲಾ ಮಟ್ಟದ ಅದೇ ರೀತಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಲಾ ಸಾಂಸ್ಕøತಿಕ ವೇದಿಕೆಗಳಲ್ಲೂ ಮೇಲುಗೈಯನ್ನು ಸಾಧಿಸಿ ಅಧ್ಯಾಪಕರಿಗೂ ಈತ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಕೃಷಿ ಹಾಗೂ ಪ್ರಾಣಿಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವ ಆಹ್ಮದ್ ಶಹೀರ್ ನ ಮುಂದಿನ ವಿದ್ಯಾಭ್ಯಾಸವನ್ನು ಆತನ ಇಚ್ಚೆಗನುಸಾರವಾದ ವಿಷಯಗಳನ್ನು ನೀಡಿ ಮುಂದುವರಿಸಲು ಪ್ರಯತ್ನಿಸುವುದಾಗಿ ಈತನ ಪೆÇೀಷಕರು ಹೇಳುತಿದ್ದಾರೆ.
ಇತ್ತೀಚೆಗೆ ಕೊಲ್ಲಿ ರಾಷ್ಟ್ರಕ್ಕೆ ವಿದಾಯ ಹೇಳಿ ಬಂದಿರುವ ಈತನ ತಂದೆ ಕೂಡಾ ಮಗನ ಚಟುವಟಿಕೆಯಲ್ಲಿ ಸಹಾಯಕರಾಗಿ ಆತನಿಗೆ ಪೆÇ್ರೀತ್ಸಾಹವನ್ನು ನೀಡಿ ಹುರಿದುಂಬಿಸುತಿದ್ದಾರೆ. ಸಂಬಂಧಿಕರಿಂದ ಲಭಿಸುತ್ತಿರುವ ಹಣವನ್ನು ಆವಾಗಲೇ ವ್ಯರ್ಥ ಮಾಡದೆ ಅದನ್ನು ಜೋಪಾನವಾಗಿರಿಸಿ ಆತನಿಗೆ ಇಷ್ಟವಾಗಿರುವ ಪ್ರಾಣಿ ಅಥವಾ ಪಕ್ಷಿಗಳನ್ನು ತಂದು ಸಾಕುತ್ತಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾನೆ. ಇದೀಗ ಈತನ ಆಸಕ್ತಿಯ ಬಗ್ಗೆ ಅರಿತ ನಾಡಿನ ಜನರು ಈತನ ಮನೆಗೆ ಸಂದರ್ಶನ ನಡೆಸಿ ನಾಡಿಗೆ ಅಭಿಮಾನವಾಗುತ್ತಿರುವ ಈತನ ಕ್ರಿಯಾ ಚಟುವಟಿಕೆಗಳನ್ನು ವೀಕ್ಷಿಸಿ ಅಭಿನಂದಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.



