ಕಾಸರಗೋಡು: ಕೇರಳ ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 12 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ವರದಿಯಾಗಿಲ್ಲ.
ಕಣ್ಣೂರು ಜಿಲ್ಲೆಯಲ್ಲಿ 5, ಮಲಪ್ಪುರಂ-3, ತೃಶ್ಶೂರು, ಪಾಲ್ಘಾಟ್, ಪತ್ತಂತಿಟ್ಟ, ಆಲಪ್ಪುಳ ತಲಾ ಒಬ್ಬರಂತೆ ರೋಗ ಬಾಧಿಸಿದೆ. ರೋಗ ಪೀಡಿತರಲ್ಲಿ ನಾಲ್ಕು ಮಂದಿ ವಿದೇಶದಿಂದ ಬಂದವರು, ಮಹಾರಾಷ್ಟ್ರದಿಂದ 6 ಮಂದಿ, ಗುಜರಾತ್ ಮತ್ತು ತಮಿಳುನಾಡಿನಿಂದ ಬಂದ ತಲಾ ಒಬ್ಬರಿಗೆ ಸೋಂಕು ಬಾಧಿಸಿದೆ. ಇದು ವರೆಗೆ ರಾಜ್ಯದಲ್ಲಿ 642 ಮಂದಿಗೆ ರೋಗ ಬಾಧಿಸಿದ್ದು, ಇದೀಗ ಆಸ್ಪತ್ರೆಗಳಲ್ಲಿ 142 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 72000 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 71545 ಮಂದಿ ಮನೆಗಳಲ್ಲೂ, 455 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಮಂಗಳವಾರ ಒಟ್ಟು 119 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ವರೆಗೆ 46958 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 45527 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 33 ಹಾಟ್‍ಸ್ಪಾಟ್‍ಗಳಿವೆ.
ಕಾಸರಗೋಡು ಜಿಲ್ಲೆಯಲ್ಲಿ 2374 ಮಂದಿ ನಿಗಾವಣೆಯಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2374 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 1972 ಮಂದಿ ಮನೆಗಳಲ್ಲೂ, 402 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. 196 ಮಂದಿಯ ಸ್ಯಾಂಪಲ್ ಪರೀಕ್ಷೆ ವರದಿ ಬರಲು ಬಾಕಿಯಿದೆ. ಮಂಗಳವಾರ ಹೊಸದಾಗಿ ಶಂಕಿತ 33 ಮಂದಿಯನ್ನು ಐಸೋಲೇಶನ್ ವಾರ್ಡ್‍ಗೆ ದಾಖಲಿಸಲಾಗಿದೆ. ಸೆಂಟಿನಲ್ ಸರ್ವೇ ಅಂಗವಾಗಿ 633 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಇದರಲ್ಲಿ 626 ನೆಗೆಟಿವ್ ಆಗಿದೆ. ನಾಲ್ಕು ಸ್ಯಾಂಪಲ್‍ಗಳ ವರದಿ ಬರಬೇಕಷ್ಟೆ.
10 ಕೇಸು ದಾಖಲು : ಲಾಕ್‍ಡೌನ್ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 10 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ವಿದ್ಯಾನಗರ-1, ಕಾಸರಗೋಡು-2, ಬದಿಯಡ್ಕ-1, ಆದೂರು-1, ಬೇಡಗಂ-1, ಮೇಲ್ಪರಂಬ-1, ವೆಳ್ಳರಿಕುಂಡು-1, ರಾಜಪುರಂ-1 ಎಂಬಂತೆ ಕೇಸುಗಳನ್ನು ದಾಖಲಿಸಲಾಗಿದೆ ವಿವಿಧ ಕೇಸುಗಳಿಗೆ ಸಂಬಂ„ಸಿ 15 ಮಂದಿಯನ್ನು ಬಂ„ಸಲಾಗಿದೆ. 4 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ತನಕ 2346 ಕೇಸುಗಳನ್ನು ದಾಖಲಿಸಲಾಗಿದ್ದು, 2983 ಮಂದಿಯನ್ನು ಬಂ„ಸಲಾಗಿದೆ. 953 ವಾಹನಗಳನ್ನು ವಶಪಡಿಸಲಾಗಿದೆ.


